News18 ಕನ್ನಡ

399k Followers

UPSC Recruitment 2022: 14 ಹುದ್ದೆಗಳಿಗೆ ಅರ್ಜಿ ಆಹ್ವಾನ, ಪದವೀಧರರು ಈಗಲೇ Apply ಮಾಡಿ

26 Jan 2022.11:56 AM

UPSC Recruitment 2022: ಕೇಂದ್ರ ಲೋಕ ಸೇವಾ ಆಯೋಗವು (Union Public Service Commission) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಒಟ್ಟು 14 ಅಸಿಸ್ಟೆಂಟ್ ಪ್ರೊಫೆಸರ್, ಅಸಿಸ್ಟೆಂಟ್ ಎಂಪ್ಲಾಯ್​ಮೆಂಟ್ ಆಫೀಸರ್, ಸೀನಿಯರ್ ಅಡ್ಮಿನಿಸ್ಟ್ರೇಟಿವ್ ಆಫೀಸರ್, ಸಬ್​ ರೀಜನಲ್ ಎಂಪ್ಲಾಯ್​ಮೆಂಟ್ ಆಫೀಸರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸಲು ಅಧಿಕೃತ ವೆಬ್​ಸೈಟ್​ www.upsc.gov.in ಗೆ ಭೇಟಿ ನೀಡಬಹುದು. ಜನವರಿ 22ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಫೆಬ್ರವರಿ 10 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಅಭ್ಯರ್ಥಿಗಳು ಆನ್​ಲೈನ್​​ (Online) ಮೂಲಕ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆ ಕೇಂದ್ರ ಲೋಕ ಸೇವಾ ಆಯೋಗ
ಹುದ್ದೆಯ ಹೆಸರು ಅಸಿಸ್ಟೆಂಟ್ ಪ್ರೊಫೆಸರ್, ಅಸಿಸ್ಟೆಂಟ್ ಎಂಪ್ಲಾಯ್​ಮೆಂಟ್ ಆಫೀಸರ್, ಸೀನಿಯರ್ ಅಡ್ಮಿನಿಸ್ಟ್ರೇಟಿವ್ ಆಫೀಸರ್, ಸಬ್​ ರೀಜನಲ್ ಎಂಪ್ಲಾಯ್​ಮೆಂಟ್ ಆಫೀಸರ್
ಒಟ್ಟು ಹುದ್ದೆಗಳು 14
ವಿದ್ಯಾರ್ಹತೆ ಪಿಎಚ್​.ಡಿ, ಪದವಿ
ಉದ್ಯೋಗದ ಸ್ಥಳ ಭಾರತದಲ್ಲಿ ಎಲ್ಲಿ ಬೇಕಾದರೂ
ವೇತನ ನಿಯಮಾನುಸಾರ
ಅರ್ಜಿ ಸಲ್ಲಿಕೆ ವಿಧಾನ ಆನ್​ಲೈನ್
ಅರ್ಜಿ ಸಲ್ಲಿಕೆ ಆರಂಭ ದಿನಾಂಕ 22/01/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10/02/2022


ಹುದ್ದೆಯ ಮಾಹಿತಿ:
ಸೀನಿಯರ್ ಅಡ್ಮಿನಿಸ್ಟ್ರೇಟಿವ್ ಆಫೀಸರ್- 8
ಅಸಿಸ್ಟೆಂಟ್ ಎಂಪ್ಲಾಯ್​ಮೆಂಟ್ ಆಫೀಸರ್-1
ಸಬ್​ ರೀಜನಲ್ ಎಂಪ್ಲಾಯ್​ಮೆಂಟ್ ಆಫೀಸರ್-1
ಅಸಿಸ್ಟೆಂಟ್ ಪ್ರೊಫೆಸರ್-4
ಒಟ್ಟು 14 ಹುದ್ದೆಗಳು

ವಿದ್ಯಾರ್ಹತೆ:
ಕೇಂದ್ರ ಲೋಕ ಸೇವಾ ಆಯೋಗದ ನೇಮಕಾತಿ ಅಧಿಸೂಚನೆ ಪ್ರಕಾರ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​ನಿಂದ ಕಡ್ಡಾಯವಾಗಿ ಪದವಿ/ ಸ್ನಾತಕೋತ್ತರ ಪದವಿ ಪಡೆದಿರಬೇಕು.

ವಯೋಮಿತಿ:
ಸೀನಿಯರ್ ಅಡ್ಮಿನಿಸ್ಟ್ರೇಟಿವ್ ಆಫೀಸರ್- 35 ವರ್ಷ
ಅಸಿಸ್ಟೆಂಟ್ ಎಂಪ್ಲಾಯ್​ಮೆಂಟ್ ಆಫೀಸರ್-35 ವರ್ಷ
ಸಬ್​ ರೀಜನಲ್ ಎಂಪ್ಲಾಯ್​ಮೆಂಟ್ ಆಫೀಸರ್- 30 ವರ್ಷ
ಅಸಿಸ್ಟೆಂಟ್ ಪ್ರೊಫೆಸರ್-45-50 ವರ್ಷ

ಉದ್ಯೋಗದ ಸ್ಥಳ:
ಕೇಂದ್ರ ಲೋಕ ಸೇವಾ ಆಯೋಗದ ನೇಮಕಾತಿ ಅಧಿಸೂಚನೆ ಪ್ರಕಾರ, ಈ ಮೇಲ್ಕಂಡ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಉದ್ಯೋಗ ನೀಡಲಾಗುತ್ತದೆ.

ವೇತನ:
ಸೀನಿಯರ್ ಅಡ್ಮಿನಿಸ್ಟ್ರೇಟಿವ್ ಆಫೀಸರ್- 7ನೇ ವೇತನ ಆಯೋಗದ 10 ನೇ ಪೇ ಲೆವೆಲ್
ಅಸಿಸ್ಟೆಂಟ್ ಎಂಪ್ಲಾಯ್​ಮೆಂಟ್ ಆಫೀಸರ್-7ನೇ ವೇತನ ಆಯೋಗದ 6 ನೇ ಪೇ ಲೆವೆಲ್​
ಸಬ್​​ ರೀಜನಲ್ ಎಂಪ್ಲಾಯ್​ಮೆಂಟ್ ಆಫೀಸರ್-7ನೇ ವೇತನ ಆಯೋಗದ 7 ನೇ ಪೇ ಲೆವೆಲ್
ಅಸಿಸ್ಟೆಂಟ್ ಪ್ರೊಫೆಸರ್-7ನೇ ವೇತನ ಆಯೋಗದ 10 ನೇ ಪೇ ಲೆವೆಲ್

ಆಯ್ಕೆ ಪ್ರಕ್ರಿಯೆ:
ಶಾರ್ಟ್​​ಲಿಸ್ಟಿಂಗ್​
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 22/01/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10/02/2022

ಬೇರೆ ಬೇರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಅರ್ಜಿ ಶುಲ್ಕ:
ಕೇಂದ್ರ ಲೋಕ ಸೇವಾ ಆಯೋಗದ ನೇಮಕಾತಿ ಅಧಿಸೂಚನೆ ಪ್ರಕಾರ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 25 ರೂ. ಅರ್ಜಿ ಶುಲ್ಕ ಪಾವತಿಸಬೇಕು.
ಎಸ್​​ಸಿ, ಎಸ್​ಟಿ, ಅಂಗವಿಕಲ, ಮಹಿಳಾ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.
Disclaimer

Disclaimer

This story is auto-aggregated by a computer program and has not been created or edited by Dailyhunt Publisher: News18 Kannada

#Hashtags