Kannada News Now

1.8M Followers

ಕೇಂದ್ರ ಸರ್ಕಾರದಿಂದ ಉದ್ಯೋಗಿಗಳಿಗೆ ಹೋಳಿ ಗಿಫ್ಟ್‌ : ʼDA, DRʼ ಜೊತೆಗೆ ʼಸ್ಯಾಲರಿʼಯೂ ಹೆಚ್ಚಳ

15 Feb 2022.3:26 PM

ನವದೆಹಲಿ : ಕೇಂದ್ರ ಸರ್ಕಾರಿ ನೌಕರರು ಹೋಳಿಗೂ ಮುನ್ನವೇ ವೇತನ ಹೆಚ್ಚಳದ(Salary increase) ಉಡುಗೊರೆ ಪಡೆಯಬಹುದು. ಅಂದ್ಹಾಗೆ, ತುಟ್ಟಿಭತ್ಯೆ (DA) ಮತ್ತು ಆತ್ಮೀಯ ಪರಿಹಾರ (DR) ಮತ್ತು ವಸತಿ ಬಾಡಿಗೆ ಭತ್ಯೆ (HRA) ಹೆಚ್ಚಳಕ್ಕಾಗಿ ನೌಕರರು ತುಂಬಾ ಸಮಯದಿಂದ ಕಾಯುತ್ತಿದ್ದು, ಸರ್ಕಾರ ಇದುವರೆಗೆ ಅಧಿಕೃತವಾಗಿ ಏನನ್ನೂ ಹೇಳಿಲ್ಲ.

ಆದರೆ ವಿವಿಧ ಮಾಧ್ಯಮ ವರದಿಗಳ ಪ್ರಕಾರ, ಇದನ್ನ ಹೋಳಿಗೆ ಮೊದಲು ಘೋಷಿಸಬಹುದು. ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ ಪ್ರಕಟವಾದ ನಂತ್ರ ಡಿಎ ಹೆಚ್ಚಳದ ಸಾಧ್ಯತೆ ಬಲವಾಗಿದೆ.

ಡಿಎ ತುಂಬಾ ಹೆಚ್ಚಾಗಬಹುದು
ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು (DA) ಸರ್ಕಾರವು ಶೇಕಡಾ ಮೂರರಷ್ಟು ಹೆಚ್ಚಿಸಬಹುದು ಎಂದು ವಿವಿಧ ಮಾಧ್ಯಮ ವರದಿಗಳಲ್ಲಿ ಹೇಳಲಾಗಿದೆ. ಏಳನೇ ವೇತನ ಆಯೋಗದ (7th Pay Commission) ಶಿಫಾರಸಿನ ಮೇರೆಗೆ ಸರಕಾರವು ಡಿಎ ಹೆಚ್ಚಳವನ್ನ ಪ್ರಕಟಿಸಲಿದೆ.

ಕೇಂದ್ರ ಸರ್ಕಾರಿ ನೌಕರರು ಪ್ರಸ್ತುತ ಮೂಲ ವೇತನದ ಶೇ.31ರಷ್ಟು ಡಿಎ ಪಡೆಯುತ್ತಿದ್ದಾರೆ. ಅಕ್ಟೋಬರ್ 2021 ರಲ್ಲಿ, ಸರ್ಕಾರವು ಡಿಎಯನ್ನು ಶೇಕಡಾ 28 ರಿಂದ ಶೇಕಡಾ 31ಕ್ಕೆ ಹೆಚ್ಚಿಸುವುದಾಗಿ ಘೋಷಿಸಿತ್ತು. ಈ ಹೆಚ್ಚಳವು ಜುಲೈ 1, 2021ರಿಂದ ಜಾರಿಗೆ ಬಂದಿದೆ. ಹೋಳಿಗೆ ಮೊದಲು ತುಟ್ಟಿಭತ್ಯೆಯನ್ನ ಶೇಕಡಾ 3ರಷ್ಟು ಹೆಚ್ಚಿಸಲು ಕೇಂದ್ರ ಸರಕಾರ ನಿರ್ಧರಿಸಿದರೆ, ಕೇಂದ್ರ ನೌಕರರು ಮೂಲ ವೇತನದ ಶೇಕಡಾ 34 ರಷ್ಟು ತುಟ್ಟಿಭತ್ಯೆಯನ್ನು ಪಡೆಯುತ್ತಾರೆ. ಈ ನಿರ್ಧಾರದಿಂದ ಸುಮಾರು 48 ಲಕ್ಷ ಕೇಂದ್ರ ನೌಕರರು ಮತ್ತು 69 ಲಕ್ಷ ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ.

ತುಟ್ಟಿ ಭತ್ಯೆ ಎಂದರೇನು?
ಏರುತ್ತಿರುವ ಹಣದುಬ್ಬರದೊಂದಿಗೆ, ಜನರ ಆದಾಯವನ್ನ ಹೆಚ್ಚಿಸುವುದು ಸಹ ಅಗತ್ಯವಾಗಿದೆ. ಸರ್ಕಾರ ತನ್ನ ನೌಕರರು ಮತ್ತು ಪಿಂಚಣಿದಾರರಿಗೆ ಡಿಎ ನೀಡುತ್ತದೆ. ಹಣದುಬ್ಬರ ದರದ ಪ್ರಭಾವವನ್ನ ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ. ತುಟ್ಟಿಭತ್ಯೆಯನ್ನು ಮೂಲ ವೇತನದ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ಕೇಂದ್ರ ಸರ್ಕಾರವು ಸಾಮಾನ್ಯವಾಗಿ ಜನವರಿ ಮತ್ತು ಜುಲೈನಲ್ಲಿ ಡಿಎ ಮತ್ತು ಡಿಆರ್‌ಗೆ ಸಂಬಂಧಿಸಿದ ಪ್ರಯೋಜನಗಳನ್ನ ಪರಿಷ್ಕರಿಸುತ್ತದೆ. ನಗರಗಳಿಗೆ ಅನುಗುಣವಾಗಿ ಉದ್ಯೋಗಿಗಳ ಡಿಎಯಲ್ಲಿ ವ್ಯತ್ಯಾಸವಿದೆ.

ಎಚ್‌ಆರ್‌ಎ ಕುರಿತು ಪ್ರಮುಖ ಪ್ರಕಟಣೆ
ಕೇಂದ್ರ ಸರ್ಕಾರವು ಎಚ್‌ಆರ್‌ಎ ಹೆಚ್ಚಿಸುವ ಮಹತ್ವದ ಘೋಷಣೆಯನ್ನೂ ಮಾಡಬಹುದು. ಪ್ರಸ್ತುತ, ಎ, ಬಿ ಮತ್ತು ಸಿ ಶ್ರೇಣಿಯ ನಗರಗಳ ಉದ್ಯೋಗಿಗಳಿಗೆ ಕ್ರಮವಾಗಿ ಶೇ.24, ಶೇ.16 ಮತ್ತು ಶೇ.8 ದರದಲ್ಲಿ ಎಚ್‌ಆರ್‌ಎ ನೀಡಲಾಗುತ್ತಿದೆ.

IBPS PO ADMIT CARD 2021: IBPS PO ಅಡ್ಮಿಟ್ ಕಾರ್ಡ್ ಬಿಡುಗಡೆ : ಡೌನ್ಲೋಡ್ ಮಾಡುವುದು ಗೊತ್ತೇ?

BIGG BREAKING : ಮಧ್ಯಪ್ರದೇಶ ಮುಖ್ಯಮಂತ್ರಿ ʼಶಿವರಾಜ್ ಸಿಂಗ್ ಚೌಹಾನ್ʼಗೆ ಕೊರೊನಾ ಪಾಸಿಟಿವ್

Astrology: 'ಶುದ್ಧ ಕೊಳ್ಳೇಗಾಲದ ವಂಶಪಾರಂಪರಿಕ ಜ್ಯೋತಿಷಿ'ಗಳಿಂದ 'ಇಂದಿನ ರಾಶಿಭವಿಷ್ಯ'

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags