News18 ಕನ್ನಡ

400k Followers

Income Tax: ಈ ರೀತಿ ಹಣದ ವಹಿವಾಟು ಮಾಡಿದ್ರೆ ನಿಮ್ಮ ಮನೆಗೆ ಐಟಿ ನೋಟಿಸ್ ಬರೋದು ಗ್ಯಾರಂಟಿ..!

28 Feb 2022.5:40 PM

ಈ ನಗದು ಹಣದ ವಹಿವಾಟು ಯಾವತ್ತಿಗೂ ಸ್ವಲ್ಪ ಅಪಾಯವೇ ಎಂದು ಹೇಳಬಹುದು. ಬ್ಯಾಂಕ್‌ಗೆ ಸಂಬಂಧಪಟ್ಟ ಮತ್ತು ಹಣಕಾಸಿಗೆ ಸಂಬಂಧಪಟ್ಟಂತೆ ಹಣಕಾಸು ವಹಿವಾಟುಗಳನ್ನು (Cash transactions) ಜೋಪಾನದಿಂದ ಮಾಡಬೇಕಾಗುತ್ತದೆ. ಏಕೆಂದರೆ ಅದರಲ್ಲಿ ಸ್ವಲ್ಪ ಎಡವಿದರೂ ಸಹ ನಾವು ಆದಾಯ ತೆರಿಗೆಯವರ (Income Tax) ಕಣ್ಣಿಗೆ ಬೀಳುತ್ತೇವೆ ಎನ್ನುವುದು ನಮಗೆ ತಿಳಿದಿದ್ದರೆ ಒಳ್ಳೆಯದು. ಈಗಂತೂ ತಂತ್ರಜ್ಞಾನದ (Digital) ಆಗಮನದೊಂದಿಗೆ ಅನೇಕರು ತಮ್ಮ ಹಣದ ವಹಿವಾಟುಗಳನ್ನು ಡಿಜಿಟಲ್ ಮೂಲಕವೇ ಮಾಡುತ್ತಿದ್ದಾರೆ ಮತ್ತು ಬಹುತೇಕರಿಗೆ ಇದು ಸುಲಭವಾಗಿದೆ. ಆದರೆ ಬ್ಯಾಂಕ್ (Bank) ನಿಯಮಗಳನ್ನು ಚೆನ್ನಾಗಿ ಅರಿತುಕೊಂಡು ವಹಿವಾಟುಗಳನ್ನು ಮಾಡಿದರೆ ಯಾವುದೇ ತೊಂದರೆ ಇಲ್ಲ. ಆದರೆ ಸ್ವಲ್ಪ ಎಡವಿದರೆ ಮಾತ್ರ ದೊಡ್ಡ ಅಪಾಯವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಬಹುದು.

ನೀವು ಅಪ್ಪಿ ತಪ್ಪಿ ಈ ಕೆಳಗೆ ನೀಡಲಾದಂತಹ ಐದು ತಪ್ಪುಗಳನ್ನು ಮಾಡಿದರೆ, ನಿಮ್ಮ ಮನೆಗೂ ಆದಾಯ ತೆರಿಗೆ ಅವರ ನೋಟಿಸ್ ಬರಬಹುದು. ಆದ್ದರಿಂದ ಜನರು ತುಂಬಾನೇ ಜಾಗರೂಕರಾಗಿರಬೇಕು. ಇದಲ್ಲದೆ, ಷೇರು ಮಾರುಕಟ್ಟೆ ಹೂಡಿಕೆದಾರರು ನಗದು ಹಣವನ್ನು ಬಳಸಿ ಬೇಡಿಕೆ ಕರಡು ಮೂಲಕ ಹೂಡಿಕೆ ಮಾಡಿದರೆ, ದಲ್ಲಾಳಿ ತನ್ನ ಬ್ಯಾಲೆನ್ಸ್ ಶೀಟ್‌ನಲ್ಲಿ ಅದರ ಬಗ್ಗೆ ವರದಿ ಮಾಡುತ್ತಾನೆ.

ಆದ್ದರಿಂದ, ಸಾಮಾನ್ಯವಾಗಿ ಈ ಐದು ರೀತಿಯ ಹಣದ ವಹಿವಾಟನ್ನು ನೀವು ಮಾಡಲೇಬೇಡಿ. ಏಕೆಂದರೆ ಆದಾಯ ತೆರಿಗೆಯವರ ಕಣ್ಣು ನಿಮ್ಮ ಬ್ಯಾಂಕ್ ಖಾತೆಯ ಮೇಲೆ ಸದಾ ಇರುತ್ತದೆ ಎಂದು ಹೇಳಬಹುದು.

1. ಉಳಿತಾಯ ಖಾತೆ ಮತ್ತು ಚಾಲ್ತಿ ಬ್ಯಾಂಕ್ ಖಾತೆ

ನೀವು ಯಾವುದೇ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದು, ಅದರಲ್ಲಿ ನಗದು ಠೇವಣಿ ಮಿತಿಯನ್ನು ಒಬ್ಬ ವ್ಯಕ್ತಿಗೆ 1 ಲಕ್ಷ ರೂಪಾಯಿಗಳಿಗೆ ನಿಗದಿಪಡಿಸಲಾಗಿರುತ್ತದೆ. ಆದ್ದರಿಂದ, ಉಳಿತಾಯ ಖಾತೆದಾರನು ಅವರ ಉಳಿತಾಯ ಖಾತೆಯಲ್ಲಿ ಮಿತಿಗಿಂತ ಹೆಚ್ಚಿನ ಠೇವಣಿಯನ್ನು ಮಾಡಿದರೆ, ಅವರು ಆದಾಯ ತೆರಿಗೆ ಇಲಾಖೆಯಿಂದ ತಕ್ಷಣವೇ ನೋಟಿಸ್ ಅನ್ನು ಪಡೆಯಬಹುದು.

ಅಂತೆಯೇ, ಚಾಲ್ತಿ ಖಾತೆದಾರರ ಮಿತಿಯನ್ನು 50 ಲಕ್ಷ ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ. ಇದರ ಉಲ್ಲಂಘನೆಯು ಆದಾಯ ತೆರಿಗೆ ಇಲಾಖೆಯ ನೋಟಿಸ್ ಅನ್ನು ನಿಮ್ಮ ಮನೆಯ ವಿಳಾಸವನ್ನು ಸೂಚಿಸಬಹುದಾಗಿದೆ.

2. ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ

ನಿಮ್ಮ ಬಳಿ ಕ್ರೆಡಿಟ್ ಕಾರ್ಡ್‌ಗಳು ಇದ್ದು, ನಿಮ್ಮ ಬೇಕು ಬೇಡಿಕೆಗಳನ್ನು ತ್ವರಿತವಾಗಿ ಪೂರೈಸಿಕೊಳ್ಳಲು ಕ್ರೆಡಿಟ್ ಕಾರ್ಡ್ ಅನ್ನು ತುಂಬಾನೇ ಬಳಸಿದ್ದರೆ, ತಿಂಗಳ ಕೊನೆಯಲ್ಲಿ ಅದರ ಬಿಲ್ ಬಂದರೆ ಅದನ್ನು ಪಾವತಿಸಲು ಆಗದೆ ಅದಕ್ಕೆ ದಂಡ ಬೀಳುವುದನ್ನು ನಾವು ಸಾಮಾನ್ಯವಾಗಿ ನೋಡಿರುತ್ತೇವೆ.

ಕ್ರೆಡಿಟ್ ಕಾರ್ಡ್ ಬಳಕೆದಾರರು ತಮ್ಮ ಕಾರ್ಡ್ ಬಿಲ್ ಪಾವತಿಸುವಾಗ, ಅವರು 1 ಲಕ್ಷ ರೂಪಾಯಿಯ ಮಿತಿಯನ್ನು ದಾಟಬಾರದು ಎಂಬುದನ್ನು ನೆನಪಿನಲ್ಲಿಡಬೇಕು. ನಗದು ಮಿತಿಯನ್ನು ಮೀರಿದರೆ ಐಟಿ ಇಲಾಖೆ ನಿಮಗೆ ನೋಟಿಸ್ ಕಳುಹಿಸುವ ಎಲ್ಲಾ ಸಾಧ್ಯತೆಗಳು ಇರುತ್ತವೆ.

3. ಬ್ಯಾಂಕ್ ಎಫ್ಡಿ (ನಿಶ್ಚಿತ ಠೇವಣಿ)

ಅತ್ಯಂತ ಸಾಮಾನ್ಯ ಹೂಡಿಕೆ ಸಾಧನವಾದ ಬ್ಯಾಂಕ್ ಎಫ್‌ಡಿಗಳು 10 ಲಕ್ಷ ರೂಪಾಯಿಗಳವರೆಗೆ ನಗದು ಠೇವಣಿಗೆ ಅವಕಾಶ ನೀಡುತ್ತದೆ. ನಿಗದಿತ ಮೊತ್ತವನ್ನು ಮೀರಿ ಹೋಗುವುದು ತೆರಿಗೆ ಏಜೆನ್ಸಿಯಿಂದ ನೋಟಿಸ್‌ಗೆ ಆಹ್ವಾನ ನೀಡಿದಂತೆ ಎಂದು ಹೇಳಲಾಗುತ್ತದೆ.

4. ಮ್ಯೂಚುವಲ್ ಫಂಡ್ /ಸ್ಟಾಕ್ ಮಾರ್ಕೆಟ್/ಬಾಂಡ್/ಡಿಬೆಂಚರ್

ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಡಿಮ್ಯಾಟ್ ಖಾತೆದಾರರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡು ಬಂದಿದೆ. ಆದರೂ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಜನರು ಹೂಡುವ ನಗದು ಹಣವು 10 ಲಕ್ಷ ರೂಪಾಯಿಗಳ ಮಿತಿಯನ್ನು ಮೀರಬಾರದು ಎಂದು ತಿಳಿದಿರಬೇಕು. ಯಾರಾದರೂ ಈ ಮಿತಿಯನ್ನು ಮೀರಿದರೆ, ಆದಾಯ ತೆರಿಗೆ ಇಲಾಖೆ ಅದನ್ನು ಗಮನಿಸಿದರೆ ಅಂತಹ ವ್ಯಕ್ತಿಯ ಕೊನೆಯ ಆದಾಯ ತೆರಿಗೆ ರಿಟರ್ನ್ (ITR) ತೆರೆದು ನೋಡುವ ಎಲ್ಲಾ ಸಾಧ್ಯತೆಗಳು ಇವೆ.

5. ರಿಯಲ್ ಎಸ್ಟೇಟ್

ಟ್ರೇಡಿಂಗ್ ಪ್ರಾಪರ್ಟಿಯಲ್ಲಿ ವ್ಯವಹರಿಸುವಾಗ, 30 ಲಕ್ಷ ರೂಪಾಯಿಗಿಂತ ಹೆಚ್ಚಿನ ನಗದು ವಹಿವಾಟು ಸೂಕ್ತವಲ್ಲ ಎಂದು ರಿಯಲ್ ಎಸ್ಟೇಟ್ ವ್ಯವಹಾರ ಮಾಡುವವರು ತಿಳಿದಿರುವುದು ಒಳ್ಳೆಯದು. ಮಿತಿಗಿಂತ ಹೆಚ್ಚಿನ ವಹಿವಾಟು ಆದಾಯ ತೆರಿಗೆ ಇಲಾಖೆಯ ಗಮನ ಸೆಳೆಯುತ್ತದೆ ಮತ್ತು ನಿಮ್ಮ ಮನೆಯ ವಿಳಾಸವನ್ನು ಹುಡುಕಿಕೊಂಡು ನೋಟಿಸ್ ಬರಬಹುದು.
Disclaimer

Disclaimer

This story is auto-aggregated by a computer program and has not been created or edited by Dailyhunt Publisher: News18 Kannada

#Hashtags