News18 ಕನ್ನಡ

400k Followers

Bank​ ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ: FD ಮೇಲಿನ ಬಡ್ಡಿ ದರ ಹೆಚ್ಚಳ

01 Mar 2022.7:16 PM

ಭಾರತೀಯ ಮಾರುಕಟ್ಟೆಯ ಎಸ್‍ಬಿಐ, ಎಚ್‍ಡಿಎಫ್‍ಸಿ ಬ್ಯಾಂಕ್ ಹಾಗೂ ಆಯಕ್ಸಿಸ್ ಬ್ಯಾಂಕ್‍ ಗಳು ನಿಶ್ಚಿತ ಠೇವಣಿಗಳ (Fixed Deposit) ಮೇಲಿನ ಬಡ್ಡಿ ದರವನ್ನು ಹೆಚ್ಚಿಸುವ ಆಯ್ಕೆಯನ್ನು ಆಯ್ದುಕೊಂಡಿವೆ ಎಂದು ವರದಿಯಾಗಿದೆ.ಬ್ಯಾಂಕೇತರ ಹಣಕಾಸು ಸಂಸ್ಥೆಗಳನ್ನು ಅನುಸರಿಸಲು ಮುಂದಾಗಿರುವ ಬ್ಯಾಂಕ್‍ಗಳು, ನಿಶ್ಚಿತ ಠೇವಣಿ ಬಡ್ಡಿ ದರವನ್ನು ಹೆಚ್ಚಿಸಲು ಮುಂದಾಗಿವೆ. ಈಗಾಗಲೇ ಭಾರತದ ಅತಿ ದೊಡ್ಡ ಬ್ಯಾಂಕ್ ಆಗಿರುವ ಎಸ್‍ಬಿಐ (SBI) ಎರಡು ಬಾರಿ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಿದೆ. ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಬದಲಿಸುವ ಕುರಿತು ಸುಳಿವು ನೀಡಿರುವ ದೇಶದ ಅತಿ ದೊಡ್ಡ ಬ್ಯಾಂಕ್‍ ಎಸ್‍ಬಿಐ ಜೊತೆ ಖಾಸಗಿ ಬ್ಯಾಂಕ್‍ಗಳಾದ ಎಚ್‍ಡಿಎಫ್‍ಸಿ (HDFC), ಆಯಕ್ಸಿಸ್ (Axis) ಬ್ಯಾಂಕ್ ಹಾಗೂ ಐಸಿಐಸಿಐ (ICICI) ಬ್ಯಾಂಕ್​ ಸಹ ಇದೇ ಜಾಡನ್ನು ಅನುಸರಿಸಲು ಮುಂದಾಗಿದೆ.

ಬ್ಯಾಂಕೇತರ ಹಣಕಾಸು ಸಂಸ್ಥೆಯೊಂದರ ಮುಖ್ಯ ಕಾರ್ಯನಿರ್ವಹಣಾಧಿಕಾರಿಯೊಬ್ಬರು ಎಕನಾಮಿಕ್ ಟೈಮ್ಸ್ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿ, 'ಬಡ್ಡಿ ದರ ಚಕ್ರದಲ್ಲಿನ ತಿರುವಿನ ಮೇಲೆ ಬ್ಯಾಂಕ್‍ಗಳು ಪರಿಣಾಮ ಬೀರುತ್ತಿವೆ. ಹೀಗಾಗಿ ಶೀಘ್ರವೇ ಹಣಕಾಸು ಸಂಸ್ಥೆಗಳು ಬಡ್ಡಿ ದರ ಚಕ್ರದ ಮೇಲೆ ಪರಿಣಾಮ ಬೀರಲಿವೆ. ವಿಶೇಷವಾಗಿ ನಗದಿನ ತೀವ್ರ ಕೊರತೆ ಎದುರಿಸುತ್ತಿರುವ ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಮೇಲೆ ಪರಿಣಾಮ ಬೀರಲಿದೆ ಎಂದು ಹಣಕಾಸು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ.

ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರ ಹೆಚ್ಚಳ:

ಹಣಕಾಸು ಸಂಸ್ಥೆಗಳು ಮಾರ್ಚ್ ತಿಂಗಳ ಅಂತ್ಯದ ವೇಳೆಗೆ ನವೀಕರಣಕ್ಕೆ ಬರಲಿರುವ ನಿಶ್ಚಿತ ಠೇವಣಿದಾರರೊಂದಿಗೆ ಮರು ಸಂಧಾನ ನಡೆಸುವ ಯೋಜನೆಗಳನ್ನು ರೂಪಿಸುತ್ತಿದ್ದಾರೆ ಎಂದು ಬ್ಯಾಂಕೇತರ ಹಣಕಾಸು ಸಂಸ್ಥೆಯೊಂದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಳಿವು ನೀಡಿದ್ದಾರೆ.

ಇನ್ನು, ಎಸ್‍ಬಿಐ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರದಲ್ಲಿ 10 ಮೂಲ ಅಂಕಗಳನ್ನು ಏರಿಕೆ ಮಾಡಿದ್ದರೆ, ಐಸಿಐಸಿಐ ಬ್ಯಾಂಕ್, ಎಚ್‍ಡಿಎಫ್‍ಸಿ ಬ್ಯಾಂಕ್, ಕೆನರಾ ಬ್ಯಾಂಕ್‍ ಹಾಗೂ ಆಯಕ್ಸಿಸ್ ಬ್ಯಾಂಕ್ ಕೂಡಾ ಇದೇ ರೀತಿಯ ಬಡ್ಡಿ ದರ ಏರಿಕೆಯನ್ನು ಮಾಡಿವೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಇನ್ನೂ ಹೆಚ್ಚು ಹಣಕಾಸು ಸಂಸ್ಥೆಗಳು ಇದೇ ಹಾದಿಯನ್ನು ಅನುಸರಿಸುವ ಸಾಧ್ಯತೆ ಇದೆ ಎಂದೂ ಹೇಳಲಾಗಿದೆ. 2 ಕೋಟಿ ರೂ. ಗಿಂತ ಕಡಿಮೆ ಇರುವ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಎಸ್‍ಬಿಐ ಏರಿಕೆ ಮಾಡಿದೆ.

ರೆಪೋ ದರದಲ್ಲಿ ಏರಿಕೆ ಸಾಧ್ಯತೆ:

ಆರ್ಥಿಕ ಬೆಳವಣಿಗೆಗೆ ನೆರವು ನೀಡುವ ಉದ್ದೇಶದಿಂದ ಭಾರತೀಯ ರಿಸರ್ವ್ ಬ್ಯಾಂಕ್ ಚಾಲ್ತಿಯಲ್ಲಿರುವ ಬಡ್ಡಿ ದರಗಳನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡಿದೆ. ಹೀಗಿದ್ದೂ, ಈ ಸಮಯದಲ್ಲಿ ಪ್ರಾಥಮಿಕ ಹಣದುಬ್ಬರ ಹೆಚ್ಚಿರುವುದರಿಂದ ಕೇಂದ್ರೀಯ ಬ್ಯಾಂಕ್‍ ಬಡ್ಡಿ ದರಗಳನ್ನು ಹೆಚ್ಚಿಸಲು ಮುಂದಾಗಬೇಕಿದೆ ಎಂದು ಹೇಳಲಾಗಿದೆ.

ಈ ಚಕ್ರವು ರಿವರ್ಸ್ ರೆಪೋ ದರದಲ್ಲಿ ಏರಿಕೆಯಾಗುವ ಮೂಲಕ ಬದಲಾಗುವ ಸಾಧ್ಯತೆ ಇದ್ದು, ಬ್ಯಾಂಕ್‍ಗಳು ತಾವು ಹೊಂದಿರುವ ಕಿರು ಅವಧಿಯ ಹೆಚ್ಚುವರಿ ನಿಧಿಯನ್ನು ಕೇಂದ್ರೀಯ ಬ್ಯಾಂಕ್ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್‍ನಲ್ಲಿ ಇರಿಸಬೇಕಾಗುತ್ತದೆ.

ಹಣಕಾಸು ನೀತಿಯ ಹಿಮ್ಮುಖ ಚಲನೆ:

ಅತಂತ್ರ ಸ್ಥಿತಿಯಲ್ಲಿರುವ ತನ್ನ ಹಣಕಾಸು ನೀತಿಯನ್ನು ಬದಲಾಯಿಸಿ, ಸಾಂಕ್ರಾಮಿಕ ಪೀಡಿತ ಆರ್ಥಿಕತೆಯನ್ನು ಹುರಿದುಂಬಿಸುವ ಉದ್ದೇಶವನ್ನು ಅಮೆರಿಕಾದ ಫೆಡರಲ್ ಬ್ಯಾಂಕ್ ಹೊಂದಿದೆ. ಬಲಿಷ್ಠ ಬೆಳವಣಿಗೆ ಹಾಗೂ ಬಲಿಷ್ಠ ಹಣದುಬ್ಬರದ ಕಾರಣಕ್ಕೆ ಜಾಗತಿಕ ಹಣಕಾಸು ನೀತಿಗಳು ಹಿಮ್ಮುಖವಾಗಿ ಚಲಿಸುತ್ತಿವೆ ಎಂದು ಗ್ರಾಹಕ ಬ್ಯಾಂಕ್ ಆದ ಕೋಟಕ್ ಮಹೀಂದ್ರ ಬ್ಯಾಂಕ್‍ನ ಸಮೂಹ ಅಧ್ಯಕ್ಷೆ ಶಾಂತಿ ಏಕಾಂಬರಂ ಅಭಿಪ್ರಾಯಪಟ್ಟಿದ್ದಾರೆ. ಹಣಕಾಸು ಹಂಚಿಕೆಯನ್ನು ಕೊನೆಗಾಣಿಸುವ ಬಡ್ಡಿ ದರ ಏರಿಕೆಯನ್ನು ನಾವೆಲ್ಲ ಕಾಣುವ ಸಾಧ್ಯತೆ ಇದೆ ಎಂದೂ ಅವರು ಹೇಳಿದ್ದಾರೆ.
Disclaimer

Disclaimer

This story is auto-aggregated by a computer program and has not been created or edited by Dailyhunt Publisher: News18 Kannada

#Hashtags