Kannada News Now

1.8M Followers

BIGG NEWS : ಕೇಂದ್ರ ಸರ್ಕಾರಿ ನೌಕರರೇ ಗಮನಿಸಿ : ʼಮಾರ್ಚ್‌ 31ʼರೊಳಗೆ ʼಈ ಕೆಲಸʼ ಮಾಡಿ, ಇಲ್ಲವಾದ್ರೆ, ನಿಮ್ಗೆ ದೊಡ್ಡ ನಷ್ಟ

02 Mar 2022.5:32 PM

ನವದೆಹಲಿ : ಕೋಟ್ಯಂತರ ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ಮಹತ್ವದ ಸುದ್ದಿಇದೆ. ಹೆಚ್ಚಿದ ತುಟ್ಟಿಭತ್ಯೆ (DA) ಮತ್ತು ತುಟ್ಟಿಪರಿಹಾರ (DR) ಪಡೆದ ನಂತರ ಉದ್ಯೋಗಿಗಳು ಮತ್ತು ಪಿಂಚಣಿದಾರರು ಈಗ ಇನ್ನೂ ಒಂದು ಭತ್ಯೆಯನ್ನ ಪಡೆಯಬಹುದು.

ಇಲ್ಲಿಯವರೆಗೆ, ಕೊರೊನಾ ಸಾಂಕ್ರಾಮಿಕದಿಂದಾಗಿ ಮಕ್ಕಳ ಶಿಕ್ಷಣ ಭತ್ಯೆಯನ್ನ (CEA) ಪಡೆಯಲು ಸಾಧ್ಯವಾಗದ ಎಲ್ಲಾ ಉದ್ಯೋಗಿಗಳು, 31 ಮಾರ್ಚ್ 2022ರ ಮೊದಲು ಕ್ಲೈಮ್‌ ಮಾಡಬೇಕು. ಇನ್ನು ಇದಕ್ಕೆ ನಿಮಗೆ ಯಾವುದೇ ಅಧಿಕೃತ ದಾಖಲೆಗಳ ಅಗತ್ಯವೂ ಇರುವುದಿಲ್ಲ.

ಮಾರ್ಚ್ 31 ರ ಮೊದಲು ಸಿಇಎ ಕ್ಲೇಮ್ ಮಾಡಿ
ಕೇಂದ್ರ ನೌಕರರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಭತ್ಯೆಯನ್ನ ಸಹ ಪಡೆಯುತ್ತಾರೆ. ಇದು 7 ನೇ ವೇತನ ಆಯೋಗದ ಶಿಫಾರಸುಗಳ ಪ್ರಕಾರ ತಿಂಗಳಿಗೆ 2,250 ರೂ. ಆಗಿದೆ.. ಆದರೆ ಕಳೆದ ವರ್ಷದಿಂದ, ಕೊರೊನಾ ಸಾಂಕ್ರಾಮಿಕದಿಂದಾಗಿ ಶಾಲೆಗಳನ್ನ ಮುಚ್ಚಲಾಗಿದೆ. ಇದರಿಂದಾಗಿ ಕೇಂದ್ರ ನೌಕರರು ಸಿಇಎ ಪಡೆಯಲು ಸಾಧ್ಯವಾಗಲಿಲ್ಲ. ಆದ್ದರಿಂದ ಅದರ ಕೊನೆಯ ದಿನಾಂಕವನ್ನ ವಿಸ್ತರಿಸಲಾಯಿತು. ಗಡುವಿನ ಮೊದಲು ಸಿಇಎ ಕ್ಲೇಮ್ ಮಾಡಿ, ಅದರ ಸಂಪೂರ್ಣ ಪ್ರಕ್ರಿಯೆಯನ್ನು ನೋಡೋಣ.

ಮಕ್ಕಳ ಶಿಕ್ಷಣ ಭತ್ಯೆಯನ್ನ ಪಡೆಯಲು, ಕೇಂದ್ರ ನೌಕರರು ಶಾಲಾ ಪ್ರಮಾಣಪತ್ರ ಮತ್ತು ಕ್ಲೇಮ್ ದಾಖಲೆಗಳನ್ನ ಸಲ್ಲಿಸಬೇಕು. ಶಾಲೆಯಿಂದ ಪಡೆದ ಘೋಷಣೆಯಲ್ಲಿ, ಮಗುವು ತಮ್ಮ ಸಂಸ್ಥೆಯಲ್ಲಿ ಅಧ್ಯಯನ ಮಾಡುತ್ತದೆ ಎಂದು ಬರೆಯಲಾಗಿದೆ. ಸಿಇಎ ಕ್ಲೇಮ್ʼಗಾಗಿ, ಮಗುವಿನ ರಿಪೋರ್ಟ್ ಕಾರ್ಡ್, ಸ್ವಯಂ ದೃಢೀಕರಿಸಿದ ಪ್ರತಿ ಮತ್ತು ಶುಲ್ಕ ರಸೀದಿಯನ್ನ ಸಹ ಲಗತ್ತಿಸಬೇಕಾಗುತ್ತದೆ.

ಸ್ವಯಂ ಘೋಷಣೆಯನ್ನು ನೀಡಬೇಕು
ಜುಲೈನಲ್ಲಿ, ಸಿಬ್ಬಂದಿ ಮತ್ತು ತರಬೇತಿ ಇಲಾಖೆ (DoPT) ಜ್ಞಾಪನಾ ಕಚೇರಿ (OM) ಬಿಡುಗಡೆ ಮಾಡಿದ್ದು, ಇದರಲ್ಲಿ ಕೊರೊನಾದಿಂದಾಗಿ, ಕೇಂದ್ರ ಸಿಬ್ಬಂದಿ ಮಕ್ಕಳ ಶಿಕ್ಷಣ ಭತ್ಯೆಯನ್ನ ಪಡೆಯಲು ತೊಂದರೆಗಳನ್ನ ಎದುರಿಸಿದ್ದಾರೆ ಎಂದು ಹೇಳಲಾಯಿತು. ಯಾಕಂದ್ರೆ, ಶುಲ್ಕವನ್ನ ಆನ್ ಲೈನ್ʼನಲ್ಲಿ ಠೇವಣಿ ಮಾಡಿದ ನಂತರವೂ, ಫಲಿತಾಂಶ /ವರದಿ ಕಾರ್ಡ್ʼಗಳನ್ನು ಶಾಲೆಯಿಂದ ಎಸ್ ಎಂಎಸ್ /ಇ-ಮೇಲ್ ಮೂಲಕ ಕಳುಹಿಸಲಾಗಿಲ್ಲ.

ಡಿಒಪಿಟಿ ಪ್ರಕಾರ, ಸಿಇಎ ಕ್ಲೇಮ್ ಅನ್ನು ಸ್ವಯಂ ಘೋಷಣೆ ಅಥವಾ ಫಲಿತಾಂಶ/ವರದಿ ಕಾರ್ಡ್/ಶುಲ್ಕ ಪಾವತಿ ಎಸ್‌ಎಂಎಸ್/ಇ-ಮೇಲ್ ನಿಂದ ಪ್ರಿಂಟ್ ಔಟ್ ಮೂಲಕವೂ ಕ್ಲೇಮ್ ಮಾಡಬಹುದು. ಆದಾಗ್ಯೂ, ಈ ಸೌಲಭ್ಯವು ಮಾರ್ಚ್ 2020 ಮತ್ತು ಮಾರ್ಚ್ 2021ರಲ್ಲಿ ಕೊನೆಗೊಳ್ಳುವ ಶೈಕ್ಷಣಿಕ ವರ್ಷಕ್ಕೆ ಮಾತ್ರ ಲಭ್ಯವಿರುತ್ತದೆ.

ಎಷ್ಟು ಭತ್ಯೆ ನೀಡಲಾಗುತ್ತದೆ?
ಕೇಂದ್ರ ನೌಕರರು ಇಬ್ಬರು ಮಕ್ಕಳ ಶಿಕ್ಷಣಕ್ಕಾಗಿ ಮಕ್ಕಳ ಶಿಕ್ಷಣ ಭತ್ಯೆಯನ್ನ ಪಡೆಯುತ್ತಾರೆ. ಪ್ರತಿ ಮಗುವಿಗೆ ಈ ಭತ್ಯೆತಿಂಗಳಿಗೆ 2250 ರೂ. ಅಂದರೆ ಉದ್ಯೋಗಿಗಳು ಇಬ್ಬರು ಮಕ್ಕಳಿಗೆ ತಿಂಗಳಿಗೆ 4500 ರೂ. ಪಡೆಯುತ್ತಾರೆ. ಆದಾಗ್ಯೂ, ಎರಡನೇ ಮಗು ಅವಳಿಯಾಗಿದ್ದರೆ, ಮೊದಲ ಮಗುವಿನೊಂದಿಗೆ ಅವಳಿ ಮಕ್ಕಳ ಶಿಕ್ಷಣಕ್ಕಾಗಿ ಈ ಭತ್ಯೆಯನ್ನ ಸಹ ನೀಡಲಾಗುತ್ತದೆ.

ಎರಡು ಶೈಕ್ಷಣಿಕ ಕ್ಯಾಲೆಂಡರ್ʼಗಳ ಪ್ರಕಾರ, ಮಗುವಿಗೆ 4500 ರೂ. ಪಾವತಿಸಬೇಕು. ಮಾರ್ಚ್ 2020 ಮತ್ತು ಮಾರ್ಚ್ 2021ಕ್ಕೆ ಉದ್ಯೋಗಿಯು ಇನ್ನೂ ಕ್ಲೇಮ್ ಮಾಡದಿದ್ದರೆ, ಅದನ್ನು ಕ್ಲೇಮ್ ಮಾಡಬಹುದು.

BIGG BREAKING NEWS : ಕೊನೆ ಬಾರಿ ಮಗನ ಮುಖ ನೋಡಲು ಅವಕಾಶ ನೀಡಿ ಪ್ರಧಾನಿ ಮೋದಿಗೆ ನವೀನ್ ಪೋಷಕರ ಮನವಿ

Ukraine Russia War : ಉಕ್ರೇನ್ ತೊರೆಯುವವರ ಸಂಖ್ಯೆʼ 8 ಲಕ್ಷ 36 ಸಾವಿರʼ ದಾಟಿದೆ : ವಿಶ್ವಸಂಸ್ಥೆ ಮಾಹಿತಿ

BIGG BREAKING NEWS: 'ಉಕ್ರೇನ್'ನಲ್ಲಿ ಭಾರತೀಯ ವಿದ್ಯಾರ್ಥಿಯ ಸಾವಿನ ಬಗ್ಗೆ ತನಿಖೆ - ರಷ್ಯಾ ರಾಯಭಾರಿ ಡೆನಿಸ್ ಅಲಿಪೋವ್ | Russia-Ukraine Crisis

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags