Oneindia

1.1M Followers

ದ್ವಿತೀಯ ಪಿಯು ವಾರ್ಷಿಕ ವೇಳಾಪಟ್ಟಿ ಪರಿಷ್ಕರಣೆ: ಹೊಸ ವೇಳಾಪಟ್ಟ ಹೀಗಿದೆ

02 Mar 2022.10:51 PM

ಬೆಂಗಳೂರು, ಮಾ.2: ಜೆಇಇ ಪರೀಕ್ಷಾ ವೇಳಾಪಟ್ಟಿ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ವೇಳಾಪಟ್ಟಿಯಲ್ಲಿಯೂ ಕೆಲವು ಬದಲಾವಣೆಗಳು ಅಗಿವೆ.

ದ್ವಿತೀಯ ಪಿಯು ಪರೀಕ್ಷೆಯನ್ನು ಏಪ್ರಿಲ್ 16ರಿಂದ ಮೇ 6ರವರೆಗೆ ನಡೆಸಲು ಈಗಾಗಲೇ ವೇಳಾಪಟ್ಟಿ ಪ್ರಕಟಿಸಲಾಗಿತ್ತು.

ಆದರೆ, ಈ ಮಧ್ಯೆ ಜೆಇಇ ಪರೀಕ್ಷೆಯ ಮೊದಲನೇ ಸೆಷನ್ ಏಪ್ರಿಲ್ 16ರಿಂದ 21ರವರೆಗೆ ನಡೆಯಲಿದೆ. ಜೆಇಇ ಮತ್ತು ದ್ವಿತೀಯ ಪಿಯು ವೇಳಾಪಟ್ಟಿ ಒಂದೇ ದಿನ ಇರುವುದರಿಂದ ಪಿಯು ವೇಳಾಪಟ್ಟಿಯನ್ನು ಪರಿಷ್ಕೃತ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಲಾಗಿದೆ.

SSLC, PUC ಪರೀಕ್ಷೆ ಬರೆಯಲು ಶೇ.75ರಷ್ಟು ಕಡ್ಡಾಯ ಹಾಜರಾತಿ ನಿಯಮ ಸಡಿಲಿಕೆ!

ತಾತ್ಕಾಲಿಕ ವೇಳಾಪಟ್ಟಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಮತ್ತು ಪೋಷಕರು ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಮಾರ್ಚ್ 5ರೊಳಗೆ ಸಲ್ಲಿಸುವಂತೆ ಸೂಚಿಸಲಾಗಿದೆ. ಆಕ್ಷೇಪಣೆಗಳನ್ನು ಇಮೇಲ್- jdexam.dpue@gmail.com ಗೆ ಸಲ್ಲಿಸಬಹುದಾಗಿದೆ.

ದ್ವಿತೀಯ ಪಿಯು ತಾತ್ಕಾಲಿಕ ವೇಳಾಪಟ್ಟಿ ಹೀಗಿದೆ:

ಎಪ್ರಿಲ್ 22, 2022: ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ

ಎಪ್ರಿಲ್ 23, 2022: ಹಿಂದಿ

ಎಪ್ರಿಲ್ 25, 2022: ಅರ್ಥಶಾಸ್ತ್ರ

ಎಪ್ರಿಲ್ 26, 2022: ಹಿಂದೂಸ್ತಾನಿ ಸಂಗೀತ, ಸೈಕಾಲಜಿ, ರಸಾಯನಶಾಸ್ತ್ರ

ಎಪ್ರಿಲ್ 27, 2022: ತಮಿಳು, ಮರಾಠಿ, ತೆಲಗು, ಮಲಯಾಳಮ್ ಉರ್ದು, ಸಂಸ್ಕೃತ, ಫ್ರೆಂಚ್

ಎಪ್ರಿಲ್ 28, 2022: ಕನ್ನಡ, ಅರೇಬಿಕ್

ಎಪ್ರಿಲ್ 30, 2022: ಸಮಾಜಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್

ಮೇ 02, 2022: ಭೂಗೋಳ ಶಾಸ್ತ್ರ, ಜೀವಶಾಸ್ತ್ರ

ಮೇ 04, 2022: ಇಂಗ್ಲಿಷ್

ಮೇ 05, 2022: ಮಾಹಿತಿ ತಂತ್ರಜ್ಞಾನ, ರಿಟೇಲ್, ಆಟೋ ಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಮತ್ತು ವೆಲ್ ನೆಸ್

ಮೇ 06, 2022: ಗಣಿತ, ಶಿಕ್ಷಣ, ಬೇಸಿಕ್ ಗಣಿತ

ಮೇ 07, 2022: ಐಚ್ಛಿಕ ಕನ್ನಡ, ಲೆಕ್ಕ ಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ

ಮೇ 09, 2022: ಇತಿಹಾಸ, ಭೌತಶಾಸ್ತ್ರ

ಮೇ 11, 2022: ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ

source: oneindia.com

Disclaimer

Disclaimer

This story is auto-aggregated by a computer program and has not been created or edited by Dailyhunt Publisher: OneIndia Kannada

#Hashtags