News18 ಕನ್ನಡ

400k Followers

Summer Holiday: ಈ ಬಾರಿ ಬೇಸಿಗೆ ರಜಾ ದಿನ ಕಡಿತ: ಶಾಲೆ ರಜೆ, ಆರಂಭದ ವೇಳಾಪಟ್ಟಿ ಇಲ್ಲಿದೆ

25 Feb 2022.10:01 AM

ಕೊರೊನಾ ಕಾಲದ ಶಿಕ್ಷಣ (Education) ಸರಿದೂಗಿಸಲು ಈ ಬಾರಿ ಬೇಸಿಗೆ ರಜೆ (Summer Holiday) ಕಡಿತಗೊಳಿಸಲು ಶಿಕ್ಷಣ ಇಲಾಖೆ (Education Department) ನಿರ್ಧರಿಸಿದೆ. ಏಪ್ರಿಲ್ 1 ರಿಂದ ಮೇ 15ರ ವರೆಗೆ ಮಾತ್ರ ಈ ಬಾರಿಯ ಬೇಸಿಗೆ ರಜೆ ನೀಡಲಾಗಿದೆ. ಮೇ‌ 16 ರಿಂದ ಮತ್ತೆ ಶಾಲೆ(Schools)ಗಳು ಪುನರರಾಂಭಗೊಳ್ಳಲಿದ್ದು, ಒಟ್ಟು 14 ದಿನಗಳ ಬೇಸಿಗೆ ರಜೆಯನ್ನು ಶಿಕ್ಷಣ ಇಲಾಖೆ ಕಡಿತಗೊಳಿಸಿದೆ.
ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ ಈ ಮೂಲಕ ಕೊರೊನಾ‌ ಕಾಲದ ಶೈಕ್ಷಣಿಕ ನಷ್ಟ ತುಂಬುವ ಯೋಚನೆಯನ್ನು ಶಿಕ್ಷಣ ಇಲಾಖೆ ಹೊಂದಿದೆ. 'ಕಲಿಕಾ‌ ಚೇತರಿಕೆ' (Kalika Chetarike) ಯೋಜನೆ ರೂಪಿಸಿ ಬೇಸಿಗೆ ರಜೆ ಕಡಿತಗೊಳಿಸಲಾಗಿದೆ.

2021-22ರ ಶೈಕ್ಷಣಿಕ ವೇಳಾಪಟ್ಟಿಯಂತೆ ಮಾರ್ಚ್ 24ರಿಂದ 1 ರಿಂದ 9ನೇ ತರಗತಿಗೆ ಪರೀಕ್ಷೆಗಳು ನಡೆಯಲಿವೆ. 2021-22ರ ಶೈಕ್ಷಣಿಕ ವರ್ಷದ ಬೇಸಿಗೆ ರಜೆಗಳು ಏಪ್ರಿಲ್ 10ರಿಂದ ಆರಂಭಗೊಳ್ಳಲಿವೆ. ಆದರೆ ಪ್ರತಿ ವರ್ಷ ಶಾಲೆಗಳು ಮೇ 29ರಂದು ಆರಂಭಗೊಳ್ಳುತ್ತಿದ್ದವು. ಪ್ರತಿ ಶೈಕ್ಷಣಿಕ ವರ್ಷ 10 ತಿಂಗಳು ಕಾಲ ನಿರ್ವಹಣೆಯಲ್ಲಿರುತ್ತದೆ. ಅಂದ್ರೆ 220 ಶಾಲಾ ಕರ್ತವ್ಯ ದಿನಗಳನ್ನು ನಿಗದಿಪಡಿಸಲಾಗಿದೆ. ಈ ದಿನಗಳನ್ನು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಾಗಿ ವಿಂಗಡನೆ ಮಾಡಲಾಗಿರುತ್ತದೆ.

ಏಪ್ರಿಲ್ 7 ರಂದು 8 ಮತ್ತು 9ನೇ ತರಗತಿ ಫಲಿತಾಂಶ

ಪ್ರಸಕ್ತ ವರ್ಷ ಏಪ್ರಿಲ್ 9ರಂದು ಶೈಕ್ಷಣಿಕ ವರ್ಷ ಕೊನೆಗೊಳ್ಳುತ್ತಿದ್ದು, ಮಾರ್ಚ್ 24 ರಿಂದ ಏ.4 ರವರೆಗೆ ಪರೀಕ್ಷೆಗಳು ನಡೆಯಲಿವೆ. ಶಾಲೆಗಳು ಏಪ್ರಿಲ್ 9ರಂದು ಫಲಿತಾಂಶ ಪ್ರಕಟ ಮಾಡಬೇಕು. 8 ಮತ್ತು 9 ನೇ ತರಗತಿಗಳಿರುವ ಪ್ರೌಢ ಶಾಲೆಗಳಲ್ಲಿ ಮಾರ್ಚ್ 21 ರಿಂದ ಮಾರ್ಚ್ 26 ರವರೆಗೆ ವಿಷಯವಾರು ಪರೀಕ್ಷೆ, ಮಾರ್ಚ್ 29 ರಿಂದ ಭಾಗ 2 (ದೈಹಿಕ ಶಿಕ್ಷಣ ಮತ್ತು ಇತರೆ) ಪರೀಕ್ಷೆ ನಡೆಸಿ ಏಪ್ರಿಲ್ 7 ರಂದು ಫಲಿತಾಂಶ ಪ್ರಕಟಿಸಬೇಕು ಎಂದು ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

ಕೊರೊನಾದಿಂದ ಶಾಲೆಗಳಿಗೆ ಪದೇ ಪದೇ ರಜೆ

2021-22 ಶೈಕ್ಷಣಿಕ ವರ್ಷ ಕೊರೊನಾದಿಂದ ತಡವಾಗಿ ಆರಂಭಗೊಂಡಿದ್ದವು. ಜೊತೆಗೆ ಕೊರೊನಾ ಮೂರನೇ ಅಲೆ ಆತಂಕದ ಹಿನ್ನೆಲೆ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಇದು ಮಕ್ಕಳ ಶಿಕ್ಷಣದ ಮೇಲೆ ನೇರ ಪರಿಣಾಮ ಬೀರಿತ್ತು.

ಪಠ್ಯೇತರ ಚಟುವಟಿಕೆಗಳಿಂದ ವಂಚಿತರಾಗಿರುವ ಮಕ್ಕಳು

2019-20, 2020-21 ಮತ್ತು 2021-22 ಶೈಕ್ಷಣಿಕ ವರ್ಷಗಳಲ್ಲಿ ಹಲವು ಬಾರಿ ಅನಿವಾರ್ಯವಾಗಿ ಶಾಲೆಗಳಿಗೆ ರಜೆ ನೀಡಲಾಗಿದೆ. ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಶೇ.50 ರಿಂದ ಶೇ.60 ರವರೆಗೆ ಮಾತ್ರ ಭೌತಿಕ ತರಗತಿಗಳು ಮಾತ್ರ ನಡೆದಿವೆ. ಕೇವಲ ಆನ್ ಲೈನ್ ತರಗತಿಗಳಿಂದಾಗಿ ಮಕ್ಕಳು ಪಠ್ಯೇತರ ಚಟುವಟಿಕೆಗಳಿಂದ ವಂಚಿತರಾಗಿದ್ದಾರೆ. ಇನ್ನೂ 1 ರಿಂದ 5ನೇ ತರಗತಿ ಮಕ್ಕಳ ಭೌತಿಕ ತರಗತಿಗಳು ಕೆಲ ತಿಂಗಳ ಹಿಂದಷ್ಟೇ ಆರಂಭಗೊಂಡಿವೆ.

ಈ ಹಿನ್ನೆಲೆ ವಿದ್ಯಾರ್ಥಿಗಳ ಕಲಿಕೆಗೆ ಹಿನ್ನಡೆಯಾಗದಂತೆ ಶಿಕ್ಷಣ ಇಲಾಖೆ ರಜಾ ಅವಧಿಯನ್ನು ಕಡಿತಗೊಳಿಸಿದೆ. 2021-22ರ ಶೈಕ್ಷಣಿಕ ವರ್ಷ 9 ಏಪ್ರಿಲ್ 2022 ರಂದು ಕೊನೆಯಾಗಲಿದೆ. ರಜೆಗಳು 10 ಏಪ್ರಿಲ್ 2022 ರಿಂದ 15 ಮೇ 2022 ರವರೆಗೆ ಇರಲಿದ್ದು, 16 ಮೇ 2022ರಿಂದ ಶಾಲೆಗಳು ಆರಂಭಗೊಳ್ಳಲಿವೆ.

ತಜ್ಞರ ಸಲಹೆ ಮೇರೆಗೆ ಈ ನಿರ್ಧಾರ

ಕಳೆದ ಎರಡು ವರ್ಷಗಳಿಂದ ಶೈಕ್ಷಣಿಕ ವರ್ಷಗಳು ಸರಿಯಾಗಿ ನಡೆದಿಲ್ಲ. ಮತ್ತೆ 2022ರ ವರ್ಷಾಂತ್ಯಕ್ಕೆ ಕೊರೊನಾ ಸೋಂಕು ಮತ್ತೆ ಕಾಣಿಸಿಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆ ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗದಿರಲು ತಜ್ಞರ ಸಲಹೆ ಮೇರೆಗೆ ಶಿಕ್ಷಣ ಇಲಾಖೆ ಈ ನಿರ್ಧಾರ ತೆಗೆದುಕೊಂಡಿದೆ.
Disclaimer

Disclaimer

This story is auto-aggregated by a computer program and has not been created or edited by Dailyhunt Publisher: News18 Kannada

#Hashtags