ಕನ್ನಡದುನಿಯಾ

1.6M Followers

ಹಳೆ ಪಿಂಚಣಿ ಯೋಜನೆ ಕುರಿತು ಸರ್ಕಾರದಿಂದ ಭರ್ಜರಿ ಘೋಷಣೆ, ಶೀಘ್ರವೇ OPS ಜಾರಿ ಮಾಡುವುದಾಗಿ ಸಿಎಂ ಹೇಮಂತ್ ಸೊರೇನ್ ಹೇಳಿಕೆ

27 Mar 2022.12:50 PM

ನವದೆಹಲಿ: ಹಳೆಯ ಪಿಂಚಣಿ ಯೋಜನೆ ಕುರಿತು ಸರ್ಕಾರ ಮಹತ್ವದ ಘೋಷಣೆ ಮಾಡಿದೆ. ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಜಾರ್ಖಂಡ್ ವಿಧಾನಸಭೆಯಲ್ಲಿ ಸಾರ್ವಜನಿಕ ಹಿತಾಸಕ್ತಿಗಳಿಗೆ ಸಂಬಂಧಿಸಿದಂತೆ ಹಲವು ದೊಡ್ಡ ಘೋಷಣೆಗಳನ್ನು ಮಾಡಿದ್ದಾರೆ.

ಇತರ ರಾಜ್ಯಗಳು ಇನ್ನೂ ಯೋಚಿಸುತ್ತಿರುವಾಗಲೇ ಜಾರ್ಖಂಡ್‌ನಲ್ಲಿ ಹಳೆಯ ಪಿಂಚಣಿ ಯೋಜನೆಯನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು. ಜಾರ್ಖಂಡ್‌ ನ ಶಿಕ್ಷಕರಂತೆ ಇತರೆ ಗುತ್ತಿಗೆ ಕಾರ್ಮಿಕರ ಸಮಸ್ಯೆಗಳನ್ನೂ ಶೀಘ್ರವೇ ಪರಿಹರಿಸಲಾಗುವುದು ಎಂದು ಸಿಎಂ ಹೇಳಿದರು.

ಹಿಂದಿನ ಸರ್ಕಾರ ಪ್ಯಾರಾ ಶಿಕ್ಷಕರನ್ನು ಕಡೆಗಣಿಸಿತ್ತು ಎಂದು ಸಿಎಂ ಹೇಮಂತ್ ಸೊರೇನ್ ಹೇಳಿದ್ದಾರೆ. ಆದರೆ ಪ್ರಸ್ತುತ ಸರ್ಕಾರವು 60 ವರ್ಷಗಳಿಂದ ಅರೆ ಶಿಕ್ಷಕರನ್ನು ಕಾಯಂ ಮಾಡಿ ಸಹಾಯಕ ಶಿಕ್ಷಕರೆಂದು ಹೆಸರಿಸಿದೆ. ಇದೇ ವೇಳೆ ಶಾಸಕರ ನಿಧಿಯನ್ನು ನಾಲ್ಕು ಕೋಟಿಯಿಂದ ಐದು ಕೋಟಿಗೆ ಹೆಚ್ಚಿಸುವುದಾಗಿ ಸರ್ಕಾರ ಘೋಷಿಸಿದೆ.

ಕಲ್ಯಾಣ ಇಲಾಖೆಯಿಂದ ನಡೆಯುತ್ತಿರುವ ಹಾಸ್ಟೆಲ್‌ಗಳನ್ನು ನವೀಕರಿಸಲಾಗುತ್ತಿದೆ ಎಂದು ಸಿಎಂ ವಿಧಾನಸಭೆಯಲ್ಲಿ ತಿಳಿಸಿದರು. ಇದರಲ್ಲಿ ವಿದ್ಯಾರ್ಥಿಗಳಿಗೆ ಗರಿಷ್ಠ ಸೌಲಭ್ಯಗಳನ್ನು ಒದಗಿಸಲಾಗುವುದು. ಇದರೊಂದಿಗೆ ಇಲ್ಲಿನ ವಿದ್ಯಾರ್ಥಿಗಳಿಗೆ ಉಚಿತ ಊಟದ ವ್ಯವಸ್ಥೆಯನ್ನೂ ಮಾಡಲಾಗುವುದು. ಅಲ್ಲಿ ಅಡುಗೆಯವರು ಮತ್ತು ಕಾವಲುಗಾರರನ್ನೂ ನೇಮಿಸಲಾಗುವುದು. ಇದಲ್ಲದೇ ಸ್ಕಾಲರ್‌ ಶಿಪ್‌ನಲ್ಲಿ ಕನಿಷ್ಠ ಮೊತ್ತವನ್ನು ಮೂರು ಪಟ್ಟು ಹೆಚ್ಚಿಸುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ.

ಗಣಿಗಾರಿಕೆಯಿಂದ ರಾಜ್ಯ ಸರ್ಕಾರಕ್ಕೆ ಪ್ರಥಮ ಬಾರಿಗೆ ಏಳು ಸಾವಿರ ಕೋಟಿ ರೂಪಾಯಿ ಆದಾಯ ಬಂದಿದ್ದು, ಇದು ಸರ್ಕಾರದ ದೊಡ್ಡ ಸಾಧನೆಯಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ಇಷ್ಟು ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಎಂಟು ಸಾವಿರ ಕೋಟಿ ಸಂಗ್ರಹದ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ. ಇದಲ್ಲದೇ ಬಡವರಿಗಾಗಿ ಸಿಎಂ ದೊಡ್ಡ ಘೋಷಣೆ ಮಾಡಿದ್ದಾರೆ. ಬಡವರಿಗೆ ಮೂರು ಕೋಣೆಗಳ ಮನೆ ನೀಡುವ ವಸತಿ ಯೋಜನೆ ಜಾರಿ ಬಗ್ಗೆಯೂ ಅವರು ಮಾತನಾಡಿದರು.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada Dunia

#Hashtags