Oneindia

1.1M Followers

WFH, ಮಕ್ಕಳ ಆರೈಕೆ ರಜೆಗೆ ಯಾರು ಅರ್ಹ, ಹೈಕೋರ್ಟ್ ಆದೇಶ ಹೀಗಿದೆ

27 Mar 2022.10:26 AM

ದುಡಿಯುವ ಮಹಿಳೆಯರು ಮಕ್ಕಳ ಆರೈಕೆ ರಜೆ(child care leave)ಯನ್ನು ಪಡೆಯಲು ಆ ಕಂಪನಿಯಲ್ಲಿ 'ವರ್ಕ್ ಫ್ರಮ್ ಹೋಮ್'(WFH) ಆಯ್ಕೆ ಲಭ್ಯವಿದ್ದರೆ ಮಾತ್ರ, ಅದನ್ನು ತೆಗೆದುಕೊಳ್ಳಲು ಅವಕಾಶವಿದೆಯೇ ಹೊರತು, ಇಲ್ಲವಾದರೆ ಇಲ್ಲ.

ಮಹಿಳೆಯು ಕಾರ್ಯನಿರ್ವಹಿಸುವ ಸಂಸ್ಥೆಯಲ್ಲಿ ಕೆಲಸ ಮನೆಯಿಂದಲೇ ಮಾಡುವಂತಿದ್ದರೆ ಮಾತ್ರ ಮೆಟರ್ನಿಟಿ ಕಾಯಿದೆ(Maternity Benefit Act) ಅನ್ವಯ ಅವರು ಸಿಸಿಎಲ್ ಪಡೆಯಲು ಅರ್ಹರಾಗುತ್ತಾರೆ ಎಂದು ಎಂದು ಹೈಕೋರ್ಟ್ ಇತ್ತೀಚೆಗೆ ಆದೇಶ ನೀಡಿದೆ.

ಖಾಯಂ ವರ್ಕ್ ಫ್ರಮ್‌ ಹೋಮ್‌ ಮಾಡಿದರೆ ಸಂಬಳ ಕಡಿತ: ಶೀಘ್ರ ಕಾರ್ಮಿಕ ಸಚಿವಾಲಯ ಆದೇಶ!

ನ್ಯಾ.ಆರ್.ದೇವದಾಸ್ ಅವರಿದ್ದ ಏಕಸದಸ್ಯಪೀಠ, ಬೆಂಗಳೂರಿನ ಸೆಮಿಕಂಡಕ್ಟರ್ ತಂತ್ರಜ್ಞಾನ ಮತ್ತು ಅನ್ವಯಿಕ ಸಂಶೋಧನಾ ಕೇಂದ್ರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಹಿರಿಯ ಎಕ್ಸಿಕ್ಯೂಟಿವ್ ಎಂಜಿನಿಯರ್ ಪ್ರಾಚೀ ಸೇನ್ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿ ಈ ಆದೇಶ ನೀಡಿದೆ.

''ಕೇಂದ್ರ ಸರ್ಕಾರದ ಕಾನೂನಿನಂತೆ ಎಲ್ಲರೂ ಸಿಸಿಎಲ್ ಪಡೆಯಲು ಅರ್ಹರಾಗಿದ್ದಾರೆ, ಅದರಂತೆ ಸಂಸ್ಥೆಯ ಎಲ್ಲ ಉದ್ಯೋಗಿಗಳಿಗೂ ಸಿಸಿಎಲ್ ರಜೆ ನೀಡಲು ನಿರ್ದೇಶನ ನೀಡಬೇಕು. ಆ ಕುರಿತು ತಿದ್ದುಪಡಿ ಕಾಯಿದೆ ಸೆಕ್ಷನ್ 5(5)ರಲ್ಲಿ ಉಲ್ಲೇಖಿಸಲಾಗಿದ್ದು, ಅದರಂತೆ ಸಿಸಿಎಲ್ ಪಡೆಯಲು ಅರ್ಹರೆಂದು ಅರ್ಜಿದಾರರು ಹಕ್ಕು ಮಂಡಿಸಿದ್ದಾರೆ. ಆದರೆ ಹೆರಿಗೆ ರಜೆಯ ನಂತರ ಸಿಸಿಎಲ್ ಪಡೆಯಬೇಕಾದರೆ ಯಾವ ಕಂಪನಿಯಲ್ಲಿ ಮನೆಯಿಂದಲೇ ಕೆಲಸ ಮಾಡುವ ಸ್ವರೂಪದ ಕೆಲಸವಿದೆಯೇ ಅಂತಹ ಕಡೆ ಮಾತ್ರ ಸಿಸಿಎಲ್ ಪಡೆಯಬಹುದಾಗಿದೆ,'' ಎಂದು ನ್ಯಾಯಪೀಠ ಹೇಳಿದೆ.

ವರ್ಕ್‌ ಫ್ರಂ ಹೋಂ ಬಳಿಕ ನೈಸರ್ಗಿಕ ಗರ್ಭಧಾರಣೆ ಹೆಚ್ಚಳ

ಜೊತೆಗೆ ಕಂಪನಿ ತಮ್ಮ ಉತ್ಪಾದನೆ ಮತ್ತು ವಿತರಣೆ ಕಾಲಮಿತಿಯ ಮೇಲೆ ಪರಿಣಾಮ ಬೀರಲಿರುವ ಹಿನ್ನೆಲೆಯಲ್ಲಿ ಸಿಸಿಎಲ್ ಜಾರಿಗೊಳಿಸದಿರಲು ಮೊದಲೇ ತೀರ್ಮಾನಿಸಿದೆ.

ಹೊಸದಾಗಿ ಮನವಿ ಸಲ್ಲಿಸಲು ಅವಕಾಶ: ಆದರೆ ಅರ್ಜಿದಾರರು ಬೇಕಿದ್ದರೆ ತಾವು ದೀರ್ಘಾವಧಿ ಗೈರು ಹಾಜರಾಗಿರುವುದನ್ನು ಮರೆತು ಆ ಸೇವಾ ಅವಧಿಯನ್ನು ಸಕ್ರಮಗೊಳಿಸಲು ಹೊಸದಾಗಿ ಮನವಿಯನ್ನು ಸಲ್ಲಿಸಬಹುದು, ಅದನ್ನು ಕಂಪನಿ ಪರಿಗಣಿಸಬಹುದು ಎಂದು ಆದೇಶಿಸಿದೆ.

ಅರ್ಜಿದಾರರ ಮನವಿಯನ್ನು ಸಲ್ಲಿಸಿದರೆ, ಅವರು ಮತ್ತೆ ಸೇವೆಗೆ ಹಾಜರಾದರೆ ಆನಂತರ ಸಂಸ್ಥೆ ಅನುಕಂಪದಲ್ಲಿ ಅವರ ಮನವಿಯನ್ನು ಪರಿಗಣಿಸಿ ಸೂಕ್ತ ಆದೇಶ ಹೊರಡಿಸಬಹುದು ಎಂದು ಕೋರ್ಟ್ ಹೇಳಿದೆ.

ಪ್ರಕರಣದ ಹಿನ್ನೆಲೆ ಏನು?: ಅರ್ಜಿದಾರರು 2020ರ ಆ.19ರಂದು ಹೆಣ್ಣುಮಗುವಿಗೆ ಜನ್ಮ ನೀಡಿದರು. ಅವರು 2020ರ ಫೆ.19ರಿಂದ 2021ರ ಫೆ.14ರವರೆಗೆ ಹೆರಿಗೆ ರಜೆಯಲ್ಲಿದ್ದರು. ಆನಂತರ 2021ರ ಫೆ.15ರಿಂದ 2021ರ ಏ.25ರವರೆಗೆ ವೈಯಕ್ತಿಕ ರಜೆಯಲ್ಲಿದ್ದರು. ಕೋವಿಡ್ ಎರಡನೇ ಅಲೆ ವೇಳೆ, ಕರ್ನಾಟಕ ಸರ್ಕಾರ ಲೌಕ್ ಡೌನ್ ಘೋಷಿಸಿತು. ಇತರೆ ಉದ್ಯೋಗಿಗಳಂತೆ ಅವರಿಗೂ ಅದರ ಪ್ರಯೋಜನ ದೊರೆತು ಮನೆಯಿಂದಲೇ ಕೆಲಸ ಮಾಡುತ್ತಿದ್ದರು. 2021ರ ಮೇ 23ರಿಂದ ಅವರು ಕಚೇರಿಗೆ ಹಾಜರಾಗಬೇಕಿತ್ತು.

2021ರ ಆ.7ರಂದು ಕಂಪನಿ ಆಕೆಗೆ ನೋಟಿಸ್ ನೀಡಿ, ತಾವು ಕರ್ತವ್ಯಕ್ಕೆ ಹಾಜರಾಗಿಲ್ಲ, ರಜೆಯನ್ನೂ ಮಂಜೂರು ಮಾಡಿಸಿಕೊಂಡಿಲ್ಲ. ಮತ್ತು ಆ ಅವಧಿಯನ್ನು ವೇತನವಿಲ್ಲದೆ ಅನಧಿಕೃತ ಗೈರು ಎಂದು ತೋರಿಸಲಾಗುವುದೆಂದು ಸೂಚನೆ ನೀಡಿತ್ತು. ಜೊತೆಗೆ 2021ರ ನ.27ರಂದು ಮತ್ತೊಂದು ಪತ್ರ ಕಳುಹಿಸಿ, ತಕ್ಷಣವೇ ಕರ್ತವ್ಯಕ್ಕೆ ಹಾಜರಾದರೆ ತಮ್ಮ ಗೈರು ಹಾಜರಿಯನ್ನು ಸಕ್ರಮಗೊಳಿಸುವುದಾಗಿ ಹೇಳಿತ್ತು.

ಪ್ರಕರಣದಲ್ಲಿ ಮೆಟರ್ನಿಟಿ ಬೆನಿಫಿಟ್ ತಿದ್ದುಪಡಿ ಕಾಯಿದೆ 2017ರ ಸೆಕ್ಷನ್ 5(5)ರ ಅನ್ವಯ ದುಡಿಯುವ ಮಹಿಳಿಗೆ ಮಕ್ಕಳ ಆರೈಕೆ ರಜೆ (ಸಿಸಿಎಲ್) ನೀಡಲು ಕಂಪನಿಗೆ ಎರಡು ಮನವಿಗಳನ್ನು ಸಲ್ಲಿಸಿದ್ದರು. ಅವುಗಳನ್ನು ಕಂಪನಿ ನಿರಾಕರಿಸಿತ್ತು, ಹಾಗಾಗಿ ಕಂಪನಿಗೆ ನಿರ್ದೇಶನ ನೀಡಬೇಕೆಂದು ಆಕೆ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ನ್ಯಾಯಾಲಯ ಮಹಿಳೆಯ ಪರ ಆದೇಶ ನೀಡಲು ನಿರಾಕರಿಸಿರುವುದಲ್ಲದೆ, ಆಕೆಯ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

source: oneindia.com

Disclaimer

Disclaimer

This story is auto-aggregated by a computer program and has not been created or edited by Dailyhunt Publisher: OneIndia Kannada

#Hashtags