TV9 ಕನ್ನಡ

368k Followers

ಸಿಇಟಿ ಪ್ರವೇಶ ಪರೀಕ್ಷೆಗೆ ದಿನಾಂಕ ನಿಗದಿ: ಏಪ್ರಿಲ್ 22ರವರೆಗೆ ಶುಲ್ಕ ಪಾವತಿಗೆ ಅವಕಾಶ

28 Mar 2022.12:17 PM

ಇತರ ರಾಜ್ಯಗಳಲ್ಲಿ ಈಗಾಗಲೇ ಪರೀಕ್ಷೆಯ ಸಂಭನೀಯ ದಿನಾಂಕಗಳು ಪ್ರಕಟವಾಗಿವೆ. ಅದರಂತೆ ರಾಜ್ಯದಲ್ಲಿಯೂ ಸಿಇಟಿ ಪರೀಕ್ಷೆಗೆ ದಿನಾಂಕ ನಿಗದಿ ಮಾಡಲಾಗಿದೆ ಎಂದು ಸಚಿವರು ಹೇಳಿದರು.

ಬೆಂಗಳೂರು: ವೃತ್ತಿಪರ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕಾಗಿ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯ (Common Entrance Test - CET) ದಿನಾಂಕ ನಿಗದಿಯಾಗಿದೆ.

ಜೂನ್ 16, 17, 18ರಂದು ಸಾಮಾನ್ಯ ಪ್ರವೇಶ ಪರೀಕ್ಷೆಗಳು ನಡೆಯಲಿವೆ. ಜೂನ್ 16ರಂದು ಬೆಳಗ್ಗೆ ಜೀವಶಾಸ್ತ್ರ, ಮಧ್ಯಾಹ್ನ ಗಣಿತ, 17ರಂದು ಬೆಳಗ್ಗೆ ಭೌತಶಾಸ್ತ್ರ, ಮಧ್ಯಾಹ್ನ ರಸಾಯನಶಾಸ್ತ್ರ, 18ರಂದು ಹೊರನಾಡು ಗಡಿನಾಡು ಕನ್ನಡಿಗರಿಗೆ ಪರೀಕ್ಷೆಗಳು ನಡೆಯಲಿವೆ. ಏಪ್ರಿಲ್ 5ರಿಂದ 20ರವರೆಗೆ ಸಿಇಟಿಗೆ ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ. ಏಪ್ರಿಲ್ 22ರವರೆಗೆ ಶುಲ್ಕ ಪಾವತಿಗೆ ಅವಕಾಶ ಇರುತ್ತದೆ. ಮಾಹಿತಿ ಪರಿಷ್ಕರಣೆಗೆ ಮೇ 2ರಿಂದ 6ರವರೆಗೆ ಅನುಮತಿ ನೀಡಲಾಗಿದೆ. ಮೇ 30ರಿಂದ ಪ್ರವೇಶ ಪತ್ರಗಳನ್ನು ಡೌನ್​ಲೋಡ್ ಮಾಡಿಕೊಳ್ಳಬಹುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್​.ಅಶ್ವತ್ಥ್​​ ನಾರಾಯಣ ಮಾಹಿತಿ ನೀಡಿದರು.

ಇತರ ರಾಜ್ಯಗಳಲ್ಲಿ ಈಗಾಗಲೇ ಪರೀಕ್ಷೆಯ ಸಂಭನೀಯ ದಿನಾಂಕಗಳು ಪ್ರಕಟವಾಗಿವೆ. ಅದರಂತೆ ರಾಜ್ಯದಲ್ಲಿಯೂ ಸಿಇಟಿ ಪರೀಕ್ಷೆಗೆ ದಿನಾಂಕ ನಿಗದಿ ಮಾಡಲಾಗಿದೆ ಎಂದು ಅವರು ಹೇಳಿದರು.

ವಿವಿಧ ಕಾರಣಗಳಿಂದಾಗಿ ನೀಟ್ ಪರೀಕ್ಷೆ (NEET) ವಿಳಂಬವಾಗಿರುವ ಕಾರಣ ಸಿಇಟಿಗೆ ಅರ್ಜಿ ಅಹ್ವಾನವು ತಡವಾಗಿದೆ ಎಂದು ಸಚಿವ ಅಶ್ವತ್ಥನಾರಾಯಣ ಇತ್ತೀಚೆಗೆ ಹೇಳಿದ್ದರು. ಸಾಮಾನ್ಯವಾಗಿ ಜನವರಿಯಲ್ಲಿ ಸಿಇಟಿಗೆ ಅರ್ಜಿ ಆಹ್ವಾನಿಸಲಾಗುತ್ತಿತ್ತು ಎಂದು ತಿಳಿಸಿದ್ದರು.

Koo App

#CET2022 ಪ್ರಸ್ತಾವಿತ ವೇಳಾಪಟ್ಟಿ ಇಂತಿದೆ - 16/06/2022 - ಜೀವಶಾಸ್ತ್ರ, ಗಣಿತ 17/06/2022 - ಭೌತಶಾಸ್ತ್ರ, ರಸಾಯನಶಾಸ್ತ್ರ 18/06/2022 - ಹೊರನಾಡು ಮತ್ತು ಗಡಿನಾಡ ಕನ್ನಡಿಗರಿಗೆ ಎಪ್ರಿಲ್‌ 05 ರಿಂದ CET-2022ರ ನೋಂದಣಿ, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದೆ. ಹೆಚ್ಚಿನ ಮಾಹಿತಿಗಾಗಿ:

View attached media content

- Dr. Ashwathnarayan C. N. | ಡಾ. ಅಶ್ವಥ್ ನಾರಾಯಣ್ ಸಿ.ಎನ್. (@drashwathnarayan) 28 Mar 2022

ಉಕ್ರೇನ್​ನಲ್ಲಿ ಹಾವೇರಿಯ ನವೀನ್ ಗ್ಯಾನಗೌಡರ್ ನಿಧನರಾದ ನಂತರ ನೀಟ್ ಪರೀಕ್ಷೆಯ ಬದಲು ಸಿಇಟಿಗೆ ಹೆಚ್ಚಿನ ಮಹತ್ವ ಕೊಡಬೇಕು. ಅದನ್ನೇ ಆಧರಿಸಿ ವೈದ್ಯಕೀಯ ಶಿಕ್ಷಣಕ್ಕೆ ಅವಕಾಶ ಕೊಡಬೇಕು ಎಂಬ ಆಗ್ರಹ ಕೇಳಿಬಂದಿತ್ತು. ವಿರೋಧ ಪಕ್ಷದ ನಾಯಕರಾದ ಎಚ್​.ಡಿ.ಕುಮಾರಸ್ವಾಮಿ, ಕಾಂಗ್ರೆಸ್​ನ ಯು.ಟಿ.ಖಾದರ್ ಸಹ ಇದೇ ಒತ್ತಾಯ ಮಾಡಿದ್ದರು. ಆದರೆ ಸಚಿವ ಅಶ್ವತ್ಥ ನಾರಾಯಣ ನೀಟ್ ವ್ಯವಸ್ಥೆಯನ್ನು ಸಮರ್ಥಿಸಿಕೊಂಡಿದ್ದರು.

ನೀಟ್​ನ ಶುಲ್ಕ ವ್ಯವಸ್ಥೆಯ ಬಗ್ಗೆ ಪ್ರತಿಕ್ರಿಯಿಸಿದ್ದ ಅವರು,, ಶೇ 45 ಉಚಿತ ಸೀಟುಗಳನ್ನು ಕೊಡಲಾಗುತ್ತಿದೆ. ಯಾವುದೇ ಮ್ಯಾನೇಜ್​ಮೆಂಟ್ ಕಡಿಮೆ ದರದಲ್ಲಿ ಡಾಕ್ಟರ್ ಮಾಡಲು ಸಾಧ್ಯವಿಲ್ಲ. ಎಲ್ಲರೂ ಡಾಕ್ಟರ್ ಆಗಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಹೆಚ್ಚು ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯಲು ಮುಂದಾಗುತ್ತಿದ್ದಾರೆ. ಮೀಸಲಾತಿ ಬಗ್ಗೆ ಮಾತು ಇದ್ದೇ ಇರುತ್ತದೆ. ಕಡು ಬಡವರು ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುತ್ತಾರೆ. ಪ್ರಧಾನಿಗಳಿಗೆ 60:40 ಅನುಪಾತದಲ್ಲಿ ಎಲ್ಲೆಡೆ ಮೆಡಿಕಲ್ ಕಾಲೇಜು ಇರಬೇಕು ಎಂಬ ಹಂಬಲ‌ ಇದೆ. ಹಾಗಾಗಿ ಬಡವರಿಗೂ ಮೆಡಿಕಲ್ ಸೀಟು ಸಿಗುವ ಕೆಲಸ ಆಗುತ್ತಿದೆ. ನೀಟ್ ಮೂಲಕ ವ್ಯವಸ್ಥೆ ಸರಿಪಡಿಸುವ ಕೆಲಸ ಆಗುತ್ತಿದೆ. ನೀಟ್ ಸಾಮಾನ್ಯ ವ್ಯಕ್ತಿಗೂ ನ್ಯಾಯ ಸಿಗುವ ಕೆಲಸ ಮಾಡುತ್ತಿದೆ. ನೀಟ್ ದೇಶದ ಉತ್ತಮ ವ್ಯವಸ್ಥೆ ಆಗಿದೆ. ನೀಟ್ ವಿರೋಧಿಸುವವರು ಹಣ ಮಾಡುವವರು, ದ್ರೋಹಿಗಳು ಎಂದು ಹೇಳಿದ್ದರು.

ಇದನ್ನೂ ಓದಿ: Karnataka PGCET Counseling 2021: ಪಿಜಿಸಿಇಟಿ ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ನೋಡಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಪಿಯುಸಿ ಪಾಸಾದವರೆಲ್ಲರೂ ಸಿಇಟಿ ಬರೆಯಬಹುದು: ಡಿಸಿಎಂ ಅಶ್ವತ್ಥ್ ನಾರಾಯಣ

Disclaimer

Disclaimer

This story is auto-aggregated by a computer program and has not been created or edited by Dailyhunt Publisher: TV9 Kannada