ಕನ್ನಡದುನಿಯಾ

1.6M Followers

BREAKING NEWS: ಯುಗಾದಿಗೂ ಮುನ್ನವೇ ಉದ್ಯೋಗಿಗಳಿಗೆ, ಪಿಂಚಣಿದಾರರಿಗೆ ಕೇಂದ್ರ ಸರ್ಕಾರದಿಂದ ʼಬಂಪರ್‌ʼ ಕೊಡುಗೆ

30 Mar 2022.3:26 PM

ಯುಗಾದಿ ಹಬ್ಬಕ್ಕೂ ಮುನ್ನವೇ ಕೇಂದ್ರ ಸರ್ಕಾರ, ತನ್ನ ನೌಕರರಿಗೆ ಬಂಪರ್‌ ಕೊಡುಗೆ ನೀಡಿದೆ. ಕೇಂದ್ರ ಸರ್ಕಾರಿ ನೌಕರರ ಡಿಎ ಮತ್ತು ಪಿಂಚಣಿದಾರರ ಡಿಆರ್‌ ನ್ನು ಶೇ.3 ರಷ್ಟು ಹೆಚ್ಚಳದೊಂದಿಗೆ ಒಟ್ಟು ಶೇ.34 ಕ್ಕೆ ಏರಿಕೆಯಾದಂತಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ಕೇಂದ್ರ ಸರ್ಕಾರದ ಈ ನಿರ್ಧಾರವು ಜನವರಿ, 2022 ರಿಂದಲೇ ಪೂರ್ವಾನ್ವಯವಾಗಲಿದೆ.

2021 ರ ಜುಲೈ ತಿಂಗಳಲ್ಲಿ ಕೇಂದ್ರ ಸರ್ಕಾರವು ಶೇ.17 ರ ಡಿಎ ಮತ್ತು ಡಿಆರ್​ ಅನ್ನು ಶೇ 28ಕ್ಕೆ ಹೆಚ್ಚಳ ಮಾಡಿತ್ತು. ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಕಳೆದ ಒಂದೂವರೆ ವರ್ಷದಿಂದ ಡಿಎ ಏರಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

2021 ರ ಅಕ್ಟೋಬರ್​ನಲ್ಲಿ ಮತ್ತೊಮ್ಮೆ ಶೇ.3ರಷ್ಟು ಹೆಚ್ಚಳ ಮಾಡಿದ್ದರಿಂದ ಕೇಂದ್ರ ಸರ್ಕಾರಿ ನೌಕರರ ಡಿಎ ಶೇ.31ಕ್ಕೆ ತಲುಪಿತು. ಕೇಂದ್ರ ಸರ್ಕಾರಿ ನೌಕರರಿಗೆ ಪರಿಷ್ಕೃತ ಡಿಎ 2021ರ ಜುಲೈನಿಂದ ಜಾರಿಗೆ ಬಂದಿತ್ತು. ಅಲ್ಲದೇ ಕೇಂದ್ರ ಸರ್ಕಾರದ ಪಿಂಚಣಿದಾರರಿಗೆ ಡಿಯರ್​ನೆಸ್ ರಿಲೀಫ್ ಶೇ.31ಕ್ಕೆ ಏರಿತ್ತು.

ಕೇಂದ್ರ ಸರ್ಕಾರ ಈಗ ಶೇ.3ರಷ್ಟು ಡಿಎ ಮತ್ತು ಡಿಆರ್‌ ಹೆಚ್ಚಳ ಮಾಡಿರುವುದರಿಂದ ಸರ್ಕಾರದ ಈ ನಿರ್ಧಾರವು 50 ಲಕ್ಷದಷ್ಟು ಸರ್ಕಾರಿ ನೌಕರರಿಗೆ ಮತ್ತು 65 ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗಿದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada Dunia

#Hashtags