Kannada News Now

1.8M Followers

BIGG NEWS: ರಾಜ್ಯದಲ್ಲಿ 'ಜಾತಿ ಸೂಚಕ' ಹೆಸರಿರುವ 'ಗ್ರಾಮಗಳ ಹೆಸರು' ರದ್ದು - ಸಚಿವ ಆರ್ ಅಶೋಕ್

14 Mar 2022.3:47 PM

ಬೆಂಗಳೂರು: ರಾಜ್ಯದಲ್ಲಿ ಅನೇಕ ಗ್ರಾಮಗಳಿಗೆ ಜಾತಿ ಸೂಚಕ ಹೆಸರುಗಳಿವೆ. ವಡ್ಡರಹಟ್ಟಿ, ಗೊಲ್ಲರಹಟ್ಟಿ, ಬೋವಿಹಟ್ಟಿ ಹೀಗೆ ಮೊದಲಾದಂತ ಜಾತಿ ಸೂಚಕ ಹೆಸರಿರುವಂತ ಗ್ರಾಮಗಳ ಹೆಸರನ್ನು ರದ್ದು ಪಡಿಸಲಾಗುತ್ತದೆ ಎಂಬುದಾಗಿ ಕಂದಾಯ ಸಚಿವ ಆರ್ ಅಶೋಕ್ ( Minister R Ashok ) ತಿಳಿಸಿದ್ದಾರೆ.

Click here to get the latest updates on State Elections 2022

BIG NEWS: ವಿಧಾನಸೌಧದಲ್ಲಿ ಮುಖಾಮುಖಿಯಾದ 'ಇಬ್ರಾಹಿಂ-ಸಿದ್ದು': CM ಇಬ್ರಾಹಿಂಗೆ, ಸಿದ್ಧರಾಮಯ್ಯ ಏನ್ ಹೇಳಿದ್ರು ಗೊತ್ತಾ.?

ಇಂದು ವಿಧಾನಸಭೆಯಲ್ಲಿ ಶಾಸಕ ಬಸವನಗೌಡ ತುರವಿಹಾಳ್ ಕೇಳಿದಂತ ಪ್ರಶ್ನೆಗೆ ಉತ್ತರಿಸಿದಂತ ಅವರು, ರಾಜ್ಯದ ಅನೇಕ ಕಡೆಯಲ್ಲಿ ವಡ್ಡರಹಟ್ಟಿ, ಗೊಲ್ಲರಹಟ್ಟಿ, ಕುರುಬರ ಹಟ್ಟಿ ಸೇರಿದಂತೆ ನಾನಾ ರೀತಿಯ ಜಾತಿ ಸೂಚಕ ಹೆಸರುಗಳಿವೆ. ಈ ಜಾತಿ ಸೂಚಕ ಹೆಸರಿರುವಂತ ಗ್ರಾಮಗಳ ಹೆಸರನ್ನು ತಕ್ಷಣವೇ ತೆಗೆದು ಹಾಕಲು ಸೂಚಿಸೋದಾಗಿ ತಿಳಿಸಿದರು.

BIGG BREAKING NEWS: 'ಜೆಇಇ ಮೇನ್-2022'ರ ಪರೀಕ್ಷಾ ದಿನಾಂಕ ಮರುನಿಗದಿ: ಏಪ್ರಿಲ್ 21 ರಿಂದ ಮೇ 4 ರವರೆಗೆ ಪರೀಕ್ಷೆ | JEE Main 2022

ಈ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದಂತ ಕಾಂಗ್ರೆಸ್ ಸದಸ್ಯ ರಮೇಶ್ ಕುಮಾರ್, ಕೆಲವು ಕಡೆಗಳಲ್ಲಿ ವಡ್ಡರಪಾಳ್ಯ, ಮಾದಿಗರಹಳ್ಳಿ ಎಂಬಂತ ಜಾತಿ ಸೂಚಕ ಹೆಸರುಗಳನ್ನು ಇಟ್ಟುಕೊಂಡಿದ್ದಾರೆ. ದಯವಿಟ್ಟು ನಿಮ್ಮ ಅಧಿಕಾರಿಗಳಿಗೆ ಈ ಹೆಸರುಗಳನ್ನು ತೆಗೆಯುವಂತೆ ಸೂಚಿಸಲು ಮನವಿ ಮಾಡಿದರು.

BIGG BREAKING: ಮಾ.16ರಿಂದ 12 ರಿಂದ 14 ವರ್ಷದ ಮಕ್ಕಳಿಗೆ 'ಕೊರೋನಾ ಲಸಿಕೆ' ನೀಡಿಕೆ ಆರಂಭ - ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವೀಯಾ | COVID19 Vaccination

ಇದಕ್ಕೆ ಉತ್ತರಿಸಿದಂತ ಆರ್ ಅಶೋಕ್, ಲಂಬಾಣಿ ತಾಂಡಾ, ಗೊಲ್ಲರಹಟ್ಟಿ, ವಡ್ಡರಹಟ್ಟಿ, ಕುರುಬರಹಟ್ಟಿ, ನಾಯಕರ ಹಟ್ಟಿ, ಮಜರೇ ಗ್ರಾಮ, ಹಾಡಿ, ದೊಡ್ಡಿ, ಪಾಳ್ಯ, ಕ್ಯಾಂಪ್, ಕಾಲೋನಿ ಸೇರಿದಂತೆ ಇತರೆ ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಬೇಕು. ಇದು ಬೇಗ ಮುಗಿಯುವ ಪ್ರಕ್ರಿಯೆಯಲ್ಲ. 8, 9 ತಿಂಗಳು ಆಗಲಿದೆ. ಆದ್ರೇ ಜಾತಿ ಸೂಚಕ ಹೆಸರಿರುವಂತ ಗ್ರಾಮಗಳ ಹೆಸರನ್ನು ರದ್ದುಪಡಿಸಲು ತಕ್ಷಣವೇ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುವುದಾಗಿ ತಿಳಿಸಿದರು.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags