Kannada News Now

1.8M Followers

'7ನೇ ವೇತನ ಆಯೋಗ' ಜಾರಿ ನಿರೀಕ್ಷೆಯಲ್ಲಿದ್ದ 'ರಾಜ್ಯ ಸರ್ಕಾರಿ ನೌಕರ'ರಿಗೆ ಭರ್ಜರಿ ಸಿಹಿಸುದ್ದಿ

16 Mar 2022.5:08 PM

ಬೆಂಗಳೂರು: ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿಯವರು ( CM Basavaraj Bommai ) ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರಿಗೆ ( Karnataka Government Employees ) ವೇತನ ತಾರತಮ್ಯ ಬಗ್ಗೆ ಕೇಳಲಾದಂತ ಚುಕ್ಕೆ ಗುರುತಿನ ಪ್ರಶ್ನೆಗೆ ವೇತನ ಪರಿಷ್ಕರಿಸೋದಕ್ಕೆ ಆಯೋಗ ರಚನೆ ಮಾಡೋದಾಗಿ ತಿಳಿಸಿದ್ದರು.

ಇದೀಗ ಇಂದು ವಿಧಾನಸಭೆಯಲ್ಲಿ, ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗಾಗಿ ಸರ್ಕಾರದಿಂದ ಆಯೋಗ ರಚನೆ ಮಾಡೋದಾಗಿ ಘೋಷಣೆ ಮಾಡಿದ್ದಾರೆ.

ACB Raid Update: 'ಎಇಇ ಮನೆ'ಯ ಡಸ್ಟ್ ಬಿನ್, ಖಾಲಿ ಜಾಗದಲ್ಲಿ ಚಿನ್ನ-ಬೆಳ್ಳಿ, ಕಂತೆ, ಕಂತೆ ನೋಟು: 'ACB ಅಧಿಕಾರಿ'ಗಳು ಪತ್ತೆ ಹಚ್ಚಿದ್ದೇಗೆ ಗೊತ್ತಾ.?

ಇಂದು ವಿಧಾನಸಭೆಯಲ್ಲಿ ಈ ಬಗ್ಗೆ ಸದಸ್ಯರು ಕೇಳಿದಂತ ಪ್ರಶ್ನೆಗೆ ಉತ್ತರಿಸಿದಂತ ಸಿಎಂ ಬಸವರಾಜ ಬೊಮ್ಮಾಯಿಯವರು, ಈಗಾಗಲೇ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು 7ನೇ ವೇತನ ಆಯೋಗದ ಅನ್ವಯ ಕೇಂದ್ರ ಸರ್ಕಾರಿ ನೌಕರರಿಗೆ ವೇತನ ನೀತಿ ಜಾರಿಗೊಳಿಸಲಾಗಿದೆ. ರಾಜ್ಯ ಸರ್ಕಾರಿ ನೌಕರರಿಗೂ ವೇತನ ಪರಿಷ್ಕರಣೆ ಸಲುವಾಗಿ ಸಮಿತಿ ರಚಿಸುವಂತೆ ಪತ್ರ ಬರೆದಿರೋದಾಗಿ ಹೇಳಿದರು.

Puneet Rajkumar: ನಾಳೆ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಜನ್ಮದಿನ: ಐವರು ಮಕ್ಕಳಿಗೆ 'ಪುನೀತ್ ರಾಜ್ ಕುಮಾರ್' ಎಂದು ಹೆಸರಿಟ್ಟು, ನಟಿ ತಾರಾ ನಾಮಕರಣ

ಸರ್ಕಾರಿ ನೌಕರರ ವೇತನ ಪರಿಷ್ಕರಣ ಸಂಬಂಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ. ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಸರ್ಕಾರದಿಂದ ಆಯೋಗ ರಚನೆ ಮಾಡೋದಾಗಿ ಸಿಎಂ ಬೊಮ್ಮಾಯಿ ಇದೇ ಸಂದರ್ಭದಲ್ಲಿ ಘೋಷಣೆ ಮಾಡಿದರು.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags