ಬಾರ್ & ಬೆಂಚ್

5.1k Followers

ಧಾರ್ಮಿಕ ಉದ್ದೇಶಕ್ಕಾಗಿ ಮಾತ್ರ ಹಿಂದೂ ಅವಿಭಜಿತ ಕುಟುಂಬದ ಪಿತ್ರಾರ್ಜಿತ ಆಸ್ತಿ ಉಡುಗೊರೆ ನೀಡಬಹುದು: ಸುಪ್ರೀಂ ಕೋರ್ಟ್

21 Apr 2022.12:22 PM

ಪ್ರೀತಿ ವಾತ್ಸಲ್ಯದಿಂದ ನೀಡುವ ಅವಿಭಕ್ತ ಕುಟುಂಬದ ಪಿತ್ರಾರ್ಜಿತ ಆಸ್ತಿ 'ಭಕ್ತಿಯ ಉದ್ದೇಶʼ ಪದದ ವ್ಯಾಪ್ತಿಗೆ ಬರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ [ಕೆ ಸಿ ಲಕ್ಷ್ಮಣ ಮತ್ತು ಕೆ ಸಿ ಚಂದ್ರಪ್ಪಗೌಡ ನಡುವಣ ಪ್ರಕರಣ].

ನ್ಯಾಯಮೂರ್ತಿಗಳಾದ ಎಸ್ ಅಬ್ದುಲ್ ನಜೀರ್ ಮತ್ತು ಕೃಷ್ಣ ಮುರಾರಿ ಅವರಿದ್ದ ಪೀಠವು ಹಿಂದೂ ತಂದೆ ಅಥವಾ ಹಿಂದೂ ಅವಿಭಜಿತ ಕುಟುಂಬದ ಇತರ ನಿರ್ವಹಣಾ ಸದಸ್ಯರಿಗೆ ಪೂರ್ವಜರ ಆಸ್ತಿಯನ್ನು ಕೇವಲ 'ಭಕ್ತಿಯ ಉದ್ದೇಶಕ್ಕಾಗಿ' ಉಡುಗೊರೆಯಾಗಿ ನೀಡುವ ಅಧಿಕಾರವನ್ನು ಹೊಂದಿದೆ ಎಂದು ಹೇಳಿದೆ. ಧಾರ್ಮಿಕ ಉದ್ದೇಶವು ದತ್ತಿ ಮತ್ತು/ಅಥವಾ ಧಾರ್ಮಿಕ ಉದ್ದೇಶಕ್ಕಾಗಿ ಉಡುಗೊರೆಯಾಗಿದೆ.

ಪೂರ್ವಜರ ಆಸ್ತಿಯನ್ನು ಭಕ್ತಿಯ ಕಾರಣಕ್ಕೆ ದತ್ತಿ ಅಥವಾ ಧಾರ್ಮಿಕ ಉದ್ದೇಶದ ಉಡುಗೊರೆಯಾಗಿ ನೀಡುವ ಅಧಿಕಾರ ಮಾತ್ರ ಹಿಂದೂ ತಂದೆ ಅಥವಾ ಹಿಂದೂ ಅವಿಭಜಿತ ಕುಟುಂಬದ ಯಾವುದೇ ನಿರ್ವಹಣಾ ಸದಸ್ಯರಿಗೆ ಇದೆ ಎಂದು ನ್ಯಾಯಮೂರ್ತಿಗಳಾದ ಎಸ್ ಅಬ್ದುಲ್ ನಜೀರ್ ಮತ್ತು ಕೃಷ್ಣ ಮುರಾರಿ ಅವರಿದ್ದ ಪೀಠ ತಿಳಿಸಿದೆ.

ತಂದೆ-ತಾಯಿ ಬದುಕಿರುವಾಗ ಅವರ ಆಸ್ತಿ ಬಗ್ಗೆ ಮಗ ಹಕ್ಕು ಸಾಧಿಸುವಂತಿಲ್ಲ: ಬಾಂಬೆ ಹೈಕೋರ್ಟ್

ಮೂರು ಸಂದರ್ಭಗಳಲ್ಲಿ ಮಾತ್ರ ಅವಿಭಜಿತ ಹಿಂದೂ ಅವಿಭಕ್ತ ಕುಟುಂಬ ಆಸ್ತಿಯನ್ನು ಪಡೆದುಕೊಳ್ಳಬಹುದಾಗಿದೆ,

1- ಕಾನೂನು ಕಾರಣಗಳಿಗಾಗಿ,

2- ಆಸ್ತಿಯ ಲಾಭಕ್ಕಾಗಿ

3- ಕುಟುಂಬದ ಎಲ್ಲ ಸದಸ್ಯರ ಪರಸ್ಪರ ಒಪ್ಪಿಗೆಯಿಂದ ಮಾತ್ರ

ಅವಿಭಕ್ತ ಕುಟುಂಬದ ಆಸ್ತಿಯನ್ನು ಕುಟುಂಬದ ಸರ್ವ ಸದಸ್ಯರ ಒಪ್ಪಿಗೆ ಇಲ್ಲದೆ ಯಾರಿಗಾದರೂ ನೀಡಿದರೆ ಅದು ಅಂಗೀಕೃತ ಕಾನೂನು ಪದ್ಧತಿಯನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಪ್ರಸ್ತುತ ಪ್ರಕರಣದಲ್ಲಿ ತಂದೆ ತನ್ನ ಸ್ವಂತ ಮಗನಂತೆ ಬೆಳೆಸಿದ್ದ ವ್ಯಕ್ತಿಯೊಬ್ಬರಿಗೆ ಪ್ರೀತಿ ಮತ್ತು ವಾತ್ಸಲ್ಯದಿಂದ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ನೀಡಿದ್ದರು. ಇದನ್ನು ಅವರ ಪುತ್ರ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Bar and Bench kannada

#Hashtags