ಕನ್ನಡದುನಿಯಾ

1.6M Followers

ಮಗುವನ್ನು ಅತಿ ಚಿಕ್ಕ ವಯಸ್ಸಿನಲ್ಲೇ ಶಾಲೆಗೆ ಕಳುಹಿಸಬೇಡಿ; ಸುಪ್ರೀಂ ಕೋರ್ಟ್ ಮಹತ್ವದ ಹೇಳಿಕೆ

26 Apr 2022.10:42 AM

ಮಕ್ಕಳ ಶಾಲಾ ಪ್ರವೇಶ ಕುರಿತಂತೆ ಸುಪ್ರಿಂ ಕೋರ್ಟ್ ಮಹತ್ವದ ಅಭಿಪ್ರಾಯವೊಂದನ್ನು ದಾಖಲಿಸಿದೆ. ಕೇಂದ್ರೀಯ ವಿದ್ಯಾಲಯಗಳಲ್ಲಿ ಒಂದನೇ ತರಗತಿಗೆ ಪ್ರವೇಶ ಪಡೆಯಲು ಕನಿಷ್ಠ ಆರು ವರ್ಷ ವಯಸ್ಸಿನ ಮಾನದಂಡ ರೂಪಿಸಿರುವುದನ್ನು ಪ್ರಶ್ನಿಸಿ ಪೋಷಕರು ಸಲ್ಲಿಸಿದ ಮೇಲ್ಮನವಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿದೆ, ಈ ವೇಳೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ.

ಪಾಲಕರು ತಮ್ಮ ಮಕ್ಕಳಿಗೆ ಎರಡು ವರ್ಷ ತುಂಬಿದ ಕೂಡಲೇ ಶಾಲೆಗೆ ಕಳಿಸಬೇಕೆಂದು ಬಯಸುತ್ತಾರೆ, ಆದರೆ ಇದು ಅವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎಂ.ಎಂ. ಸುಂದರೇಶ್ ಅವರಿದ್ದ ಪೀಠ ಪ್ರತಿಕ್ರಿಯಿಸಿದೆ.

ಹಿಂದಿನಿಂದ ರೂಢಿಯ ಪ್ರಕಾರ ಒಂದನೇ ತರಗತಿ ಪ್ರವೇಶಕ್ಕೆ ವಯೋಮಿತಿ ಐದು ವರ್ಷವಾಗಿತ್ತು. ಮಕ್ಕಳನ್ನು ಶಾಲೆಗೆ ಕಳುಹಿಸಲು ಸರಿಯಾದ ವಯಸ್ಸು ಯಾವುದು ಎಂಬ ಬಗ್ಗೆ ಅಧ್ಯಯನ ನಡೆಸಲಾಗಿದೆ ಎಂದು ವಿಚಾರಣೆ ವೇಳೆ ನ್ಯಾಯಾಲಯ ಹೇಳಿದೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಒತ್ತಾಯಿಸಬೇಡಿ, ಇದು ಅವರ ಆರೋಗ್ಯದ ಮೇಲೆ ಆಳವಾದ ಪರಿಣಾಮ ಬೀರಬಹುದು ಎಂದು ಪೋಷಕರಿಗೆ ಸಲಹೆ ನೀಡಿದೆ.

ಮುಂದಿನ ಶೈಕ್ಷಣಿಕ ಅವಧಿಗೆ ಕೇಂದ್ರೀಯ ವಿದ್ಯಾಲಯದಲ್ಲಿ ಒಂದನೇ ತರಗತಿಗೆ ಪ್ರವೇಶಕ್ಕೆ ಆರು ವರ್ಷಗಳ ಕನಿಷ್ಠ ವಯಸ್ಸಿನ ಮಾನದಂಡವನ್ನು ಪ್ರಶ್ನಿಸಿದ ಪೋಷಕರ ಮನವಿಯನ್ನು ನ್ಯಾಯ ಪೀಠವು ಆಲಿಸುತ್ತಿದೆ.

ಮಾರ್ಚ್ 2022 ರಲ್ಲಿ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗುವ ಕೇವಲ ನಾಲ್ಕು ದಿನಗಳ ಮೊದಲು ಕೇಂದ್ರೀಯ ವಿದ್ಯಾಲಯ ಸಂಘಟನೆ 1ನೇ ತರಗತಿ ಪ್ರವೇಶ ಮಾನದಂಡವನ್ನು ಆರು ವರ್ಷಗಳವರೆಗೆ ಹಠಾತ್ತನೆ ಬದಲಾಯಿಸಿದೆ ಎಂಬುದು ಪೋಷಕರ ವಾದವಾಗಿದ್ದು, ಇದನ್ನು ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ವಕೀಲರು, 2020ರಲ್ಲಿ ಜಾರಿಗೆ ಬಂದ ಎನ್‌ಇಪಿ ಅಡಿಯಲ್ಲಿ 21 ರಾಜ್ಯಗಳು ಒಂದನೇ ತರಗತಿಗೆ ಆರು ವರ್ಷದ ವ್ಯವಸ್ಥೆಯನ್ನು ಜಾರಿಗೆ ತಂದಿವೆ ಮತ್ತು ಈ ನೀತಿಯನ್ನು ಪ್ರಶ್ನಿಸಲಾಗಿಲ್ಲ ಎಂದು ಹೇಳಿದರು.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada Dunia

#Hashtags