Kannada News Now

1.8M Followers

Good News : `SSLC' ಮೌಲ್ಯಮಾಪಕರು, ಸಿಬ್ಬಂದಿಯ ಸಂಭಾವನೆ ಹೆಚ್ಚಳ

14 Apr 2022.06:27 AM

ಬೆಂಗಳೂರು : ಎಸ್‌ಎಸ್ ಎಲ್ ಸಿ ಮೌಲ್ಯ ಮಾಪಕರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ಪ್ರಸಕ್ತ ಸಾಲಿನ ಎಸ್‌ಎಸ್ ಎಲ್ ಸಿ (SSLC) ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪಕರ ಭತ್ಯೆಯನ್ನು ಶೇ. 5 ರಷ್ಟು ಹೆಚ್ಚಳ ಮಾಡಿದೆ.

BIGG NEWS : 'ಮುಜರಾಯಿ ಇಲಾಖೆ'ಯ ವ್ಯಾಪ್ತಿಯ ದೇವಾಲಯದಲ್ಲಿನ 'ಅರ್ಚಕ'ರಿಗೆ ರಾಜ್ಯ ಸರ್ಕಾರದಿಂದ ಸಿಹಿಸುದ್ದಿ

ಎಸ್‌ಎಸ್ ಎಲ್ ಸಿ ಮೌಲ್ಯಮಾಪನ ಕೇಂದ್ರಗಳ ಅಧೀಕ್ಷರ ಸಂಭಾವನೆ, ಮೌಲ್ಯಮಾಪಕರ ಉತ್ತರ ಪತ್ರಿಕೆಗಳ ಮೌಲ್ಯಮಾಪನ ದರ ಮತ್ತು ವಿವಿಧ ಭತ್ಯೆಗಳನ್ನು ಶೇ.

5 ರಷ್ಟು ಹೆಚ್ಚಳ ಮಾಡಿದೆ. ಪರಿಷ್ಕೃತ ದರದಲ್ಲಿ 6,924 ರೂ. ಇದ್ದ ಜಂಟಿ ಮುಖ್ಯ ಅಧಿಕ್ಷಕರ ಸಂಭಾವನೆಯನ್ನು 7,270 ರೂ.ಗೆ ಏರಿಕೆ ಮಾಡಲಾಗಿದೆ. ಉಪ ಮುಖ್ಯ ಅಧೀಕ್ಷಕರ ಸಂಭಾವನೆ ಇದುವರೆಗೆ 5,204 ರೂ. ಇತ್ತು.ಇದನ್ನು 5,464 ರೂ. ಗೆ ಹೆಚ್ಚಿಸಲಾಗಿದೆ.

BIG NEWS: ಮುಖ್ಯಮಂತ್ರಿ ಕೇಜ್ರಿವಾಲ್ ನಿವಾಸದ ಮುಂದೆ ಗಲಭೆ ಪ್ರಕರಣದಲ್ಲಿ ಬಂಧಿತರಾಗಿದ್ದ ಎಂಟು ಮಂದಿಗೆ ಜಾಮೀನು

ಇನ್ನು ಮೌಲ್ಯಪಾಕರಿಗೆ ಪ್ರತಿ ಉತ್ತರ ಪತ್ರಿಕೆ ಮೌಲ್ಯಮಾಪನ ದರವನ್ನು ಒಂದು ರೂ. ನಷ್ಟು ಹೆಚ್ಚಿಸಲಾಇದೆ. ಇದರಿಂದ 22 ರೂ. ಇದ್ದ ಪ್ರಥಮ ಭಾಷೆ ಪತ್ರಿಕೆ ದರ 23 ರೂ. ದ್ವೀತಿಯ, ತೃತೀಯ ಭಾಷೆ ಮತ್ತು ಐಚ್ಛಿಕ ವಿಚಯಗಳಿಗೆ 20 ರೂ. ಇದ್ದ ಪ್ರತಿ ಉತ್ತರ ಪ್ರತಿಕೆಗಳ ಮೌಲ್ಯಮಾಪನ ದರ 21 ರೂ.ಗೆ ಹೆಚ್ಚಿಸಲಾಗಿದೆ. ಅದೇ ರೀತಿ ದಿನ ಭತ್ಯೆ ಬೆಂಗಳೂರಿನಲ್ಲಿ 596ರೂ. ಇತರೆ ನಗರಗಳಲ್ಲಿ 469 ರೂ. ಸ್ಥಳೀಯ ಭತ್ಯೆ ಬೆಂಗಳೂರಿಗೆ 223 ರೂ. ಇತರೆ ನಗರಗಳಲ್ಲಿ ಸ್ಥಳೀಯ ಭತ್ಯೆಯನ್ನು 180 ರೂ.ಗೆ ಹೆಚ್ಚಿಸಲಾಗಿದೆ.

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಮಾರ್ಚ್ 28ರಿಂದ ಆರಂಭವಾಗಿ ಏಪ್ರಿಲ್ 11ಕ್ಕೆ ಅಂತ್ಯಗೊಂಡಿದ್ದು. ರಾಜ್ಯಾದ್ಯಂತ ಪರೀಕ್ಷಾ ಮೌಲ್ಯಮಾಪನ ಪ್ರಕ್ರಿಯೆಯು ಏಪ್ರಿಲ್ 21ರಿಂದ ಆರಂಭವಾಗಲಿದೆ. 34 ಜಿಲ್ಲೆಗಳಲ್ಲಿನ 234 ಮೌಲ್ಯಮಾಪನ ಕೇಂದ್ರಗಳಲ್ಲಿ ನಡೆಯಲಿದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags