Kannada News Now

1.8M Followers

'15,000 ಶಿಕ್ಷಕರ ಹುದ್ದೆ'ಗೆ ಸಲ್ಲಿಕೆಯಾಗಿರೋ ಅರ್ಜಿಗಳು ಎಷ್ಟು ಗೊತ್ತಾ.?

02 May 2022.08:32 AM

ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇದ್ದಂತ 15,000 ಶಿಕ್ಷಕರ ಹುದ್ದೆಗೆ ಅರ್ಜಿಯನ್ನು ಕರೆಯಲಾಗಿತ್ತು. ಈ ಹುದ್ದೆಗಳಿಗೆ ಏಪ್ರಿಲ್ 22ರಂದು ಅರ್ಜಿ ಸಲ್ಲಿಕೆ ಕೊನೆಗೊಂಡಿದೆ. ಮೇ.21 ಮತ್ತು 22ರಂದು ಸ್ಪರ್ಧಾತ್ಮಕ ಪರೀಕ್ಷೆ ಕೂಡ ನಡೆಯಲಿದೆ.

ಹೀಗೆ ನಡೆಯುತ್ತಿರುವಂತ ನೇಮಕಾತಿಗಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಸಂಖ್ಯೆ ಮಾತ್ರ, ಲಕ್ಷಕ್ಕೂ ಅಧಿಕವಾಗಿದೆ.

ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಮಾಹಿತಿ ಹಂಚಿಕೊಂಡಿದ್ದು, 15 ಸಾವಿ ಪ್ರಾಥಮಿಕ ಶಾಲೆಗಳಲ್ಲಿನ ಪದವೀಧರ ಶಿಕ್ಷಕರ ( 6 ರಿಂದ 8ನೇ ತರಗತಿ ) ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯಾಧ್ಯಂತ 1 ಲಕ್ಷಕ್ಕೂ ಹೆಚ್ಚು ಮಂದಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿಸಿದೆ.

'ಪಿಎಸ್‌ಐ ಹುದ್ದೆ'ಗಾಗಿ ಹಣ ಕೊಟ್ಟವರಿಗೆ ಈಗ ಬಂಧನ ಭೀತಿ: 545 ಹುದ್ದೆಗಳಲ್ಲಿ '250 ಪೋಸ್ಟ್ ಡೀಲ್'ನಲ್ಲಿ ಸೇಲ್.?

ಮಾರ್ಚ್ 23, 2022ರಿಂದ ಆರಂಭಗೊಂಡ ಅರ್ಜಿ ಸಲ್ಲಿಕೆ ಏಪ್ರಿಲ್ 22, 2022ರಂದು ಮುಕ್ತಾಯಗೊಂಡಿತ್ತು. ಈ ವೇಳೆಯಲ್ಲಿ 15 ಸಾವಿರ ಶಿಕ್ಷಕರ ಹುದ್ದೆಗೆ ಒಟ್ಟು 1,16,063 ಪರೀಕ್ಷಾರ್ಥಿಗಳು ಅರ್ಜಿಸಲ್ಲಿಸಿದ್ದಾರೆ.

ಇಂಗ್ಲೀಷ್ ಭಾಷಾ ಪದವೀಧರ ಶಿಕ್ಷಕರ ಹುದ್ದೆಗೆ 15,858 ಮಂದಿ, ಸಮಾಜ ವಿಜ್ಞಾನ ಶಿಕ್ಷಕರ ಹುದ್ದೆಗೆ 74,574 ಮಂದಿ, ಗಣಿತ ಮತ್ತು ವಿಜ್ಞಾನ ಶಿಕ್ಷಕರ ಹುದ್ದೆಗೆ 20.745 ಮಂದಿ, ಜೀವ ವಿಜ್ಞಾನ ಶಿಕ್ಷಕರ ಹುದ್ದೆಗೆ 4,886 ಮಂದಿ ಅರ್ಜಿಯನ್ನು ಸಲ್ಲಿಸಿದ್ದಾರೆ.

Job Alert: 'ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್'ನ ವಿವಿಧ 48 ಹುದ್ದೆಗಳಿಗೆ ಅರ್ಜಿ ಆಹ್ವಾನ: ಜೂ.1 ಕೊನೆಯ ದಿನ

ಇನ್ನೂ ಈ ನೇಮಕಾತಿಗಾಗಿ ಮೇ.21, 2022 ಮತ್ತು 22ರಂದು ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿವೆ. ಸಲ್ಲಿಕೆಯಾದಂತ ಒಟ್ಟು 1,16,063 ಅರ್ಜಿಗಳಲ್ಲಿ ಸಿಂಧುವಾದ ಅರ್ಜಿದಾರರಿಗೆ ಪರೀಕ್ಷೆ ಬರೆಯಲು ಅವಕಾಶ ದೊರೆಯಲಿದೆ.

ಹೀಗಿರಲಿದೆ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆ ಪತ್ರಿಕೆ ಹಾಗೂ ಅಂಕಗಳು

15 ಶಿಕ್ಷಕರ ಹುದ್ದೆಗಳಿಗೆ ಆಯ್ಕೆಗಾಗಿ ಸಿಇಟಿ ಪರೀಕ್ಷೆ ನಡೆಸಲಾಗುತ್ತಿದೆ. ಮೂರು ಪ್ರಶ್ನೆ ಪತ್ರಿಕೆಗಳಿದ್ದು, ಪತ್ರಿಕೆ-1 ಬಹು ಆಯ್ಕೆ ಮಾದರಿಯಲ್ಲಿ ಇರಲಿದ್ದು, 150 ಅಂಕಗಳದ್ದಾಗಿದೆ. ಈ ಪತ್ರಿಕೆಯಲ್ಲಿ ಕನಿಷ್ಠ ಅಂಕಗಳಿಕೆ ಮಾನದಂಡವಿಲ್ಲ. ಇನ್ನು ಪತ್ರಿಕೆ-2ರ ಸಾಮಾನ್ಯ ಜ್ಞಾನ ಪತ್ರಿಕೆಯನ್ನು 150 ಅಂಕಗಳಿಗೆ ನಿಗದಿ ಪಡಿಸಲಾಗಿದೆ. 50 ಅಂಕಗಳಿಗೆ ಬಹು ಆಯ್ಕೆ ಮತ್ತು 100 ಅಂಕಗಳಿಗೆ ವಿವರಣಾತ್ಮಕ ಮಾದರಿ ಪ್ರಶ್ನೆಗಳಿರುತ್ತವೆ. ಆಯ್ಕೆಗೆ ಅರ್ಹತೆ ಪಡೆಯಲು ಈ ಪತ್ರಿಕೆಯಲ್ಲಿ ಕನಿಷ್ಠ ಶೇ.45 ಪಡೆಯುವುದು ಕಡ್ಡಾಯ. ಪತ್ರಿಕೆ-3 ಭಾಷಾ ಸಾಮರ್ಥ್ಯಕ್ಕೆ ಸಂಬಂಧಿಸಿದ್ದಾಗಿದ್ದು, ಗರಿಷ್ಠ 100 ಅಂಕಗಳಿಗೆ ವಿವರಣಾತ್ಮಕ ಮಾದರಿ ಪ್ರಶ್ನೆಗಳಿರುತ್ತವೆ. ಈ ಪತ್ರಿಕೆಯಲ್ಲಿ ಆಯ್ಕೆಗಾಗಿ ಅರ್ಹತೆ ಪಡೆಯಲು ಅಭ್ಯರ್ಥಿ ಕನಿಷ್ಠ ಶೇ.50 ಅಂಕ ಪಡೆಯಲೇ ಬೇಕಾಗಿದೆ.

'15,000 ಶಿಕ್ಷಕರ ಹುದ್ದೆ'ಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳೇ ಗಮನಿಸಿ: ನೇಮಕಾತಿಗಾಗಿ ಮೇ 21, 22ರಂದು 'ಸ್ಪರ್ಧಾತ್ಮಕ ಪರೀಕ್ಷೆ'


Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags