Kannada News Now

1.8M Followers

BIGG NEWS : ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ : ಮೇ 21, 22ರಂದು `CET' ಪರೀಕ್ಷೆ

02 May 2022.06:53 AM

ಬೆಂಗಳೂರು : ಪ್ರಾಥಮಿಕ ಶಾಲೆಗಳಲ್ಲಿನ ಪದವೀಧರ 15 ಸಾವಿರ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯಾದ್ಯಂತ 1 ಲಕ್ಷಕ್ಕೂ ಹೆಚ್ಚು ಮಂದಿ ಪರೀಕ್ಷಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.

Job Alert: 'ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್'ನ ವಿವಿಧ 48 ಹುದ್ದೆಗಳಿಗೆ ಅರ್ಜಿ ಆಹ್ವಾನ: ಜೂ.1 ಕೊನೆಯ ದಿನ

ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿನ ಪದವೀಧರ ಶಿಕ್ಷಕರ (6 ರಿಂದ 8 ನೇ ತರಗತಿ) ನೇಮಕಾತಿ ನಡೆಯುತ್ತಿದೆ.

ಇಂಗ್ಲಿಷ್, ಗಣಿತ, ವಿಜ್ಞಾನ, ಜೀವ ವಿಜ್ಞಾನ ಹಾಗೂ ಸಮಾಜ ಪಠ್ಯ ವಿಷಯಕ್ಕೆ ಸಂಬಂಧಿಸಿದಂತೆ ನೇಮಕಾತಿಗೆ ಮೇ 21 ಮತ್ತು 22 ರಂದುಉ ಸ್ಪರ್ಧಾತ್ಮಕ ಪರೀಕ್ಷೆ (CET) ನಡೆಯಲಿದೆ.

Good News : ರಾಜ್ಯ ಸರ್ಕಾರದಿಂದ ಮತ್ತೊಂದು ಸಿಹಿಸುದ್ದಿ : ಅರ್ಜಿ ಸಲ್ಲಿಸಿದ 72 ಗಂಟೆಯೊಳಗೆ ಮನೆ ಬಾಗಿಲಿಗೆ ಬರಲಿದೆ ಪಿಂಚಣಿ!

ಮಾರ್ಚ್ 21 ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿದ್ದು, ಮಾರ್ಚ್ 23 ರಿಂದ ಏಪ್ರಿಲ್ 22 ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. 15 ಸಾವಿರ ಹುದ್ದೆಗಳಿಗೆ ಒಟ್ಟು 1,16,063 ಅರ್ಜಿಗಳು ಸಲ್ಲಿಕೆಯಾಗಿವೆ.

ಮೇ. 21 ಮತ್ತು 22 ರಂದು ಸಿಇಟಿ ಪರೀಕ್ಷೆಗಳು ನಡೆಯಲಿವೆ. ಅರ್ಜಿ ಸಲ್ಲಿಸಿದವರ ಪೈಕಿ ಸಿಂಧುವಾದ ಅರ್ಜಿದಾರು ಪರೀಕ್ಷೆ ಬರೆಯುವರು. ಈ ಸಿಇಟಿಯಲ್ಲಿ ಮೂರು ಪ್ರಶ್ನೆ ಪತ್ರಿಕೆಗಳಿವೆ. ಪತ್ರಿಕೆ-1 ರಲ್ಲಿ ಬಹು ಆಯ್ಕೆ ಮಾದರಿ ಇರಲಿದ್ದು, 150 ಅಂಕಗಳದ್ದಾಗಿದೆ. ಪತ್ರಿಕೆ-2 ಸಾಮಾನ್ಯ ಜ್ಞಾನ ಒಳಗೊಂಡಿರುತ್ತದೆ. 150 ಅಂಕಗಳದ್ದಾಗಿದೆ. 50 ಅಂಕಗಳಿಗೆ ಬಹುಆಯ್ಕೆ ಮತ್ತು 100 ಅಂಕಗಳಿಗೆ ವಿವರಣಾತ್ಮಕ ಮಾದರಿ ಪ್ರಶ್ನೆಗಳಿರುತ್ತವೆ. ಈ ಪತ್ರಿಕೆಯಲ್ಲಿ ಕನಿಷ್ಠ ಶೇ. 45 ಪಡೆಯುವುದು ಕಡ್ಡಾಯ.

ಪತ್ರಿಕೆ-3 ರಲ್ಲಿ ಭಾಷಾ ಪತ್ರಿಕೆಯಾಗಿದ್ದು, ಗರಿಷ್ಟ 100 ಅಂಕಗಳಿಗೆ ವಿವರಣಾತ್ಮಕ ಮಾದರಿ ಪ್ರಶ್ನೆಗಳಿರುತ್ತವೆ. ಆಯ್ಕೆ ಅರ್ಹತೆಗೆ ಈ ಪತ್ರಿಕೆಯಲ್ಲಿ ಅಭ್ಯರ್ಥಿ ಶೇ. 50 ಅಂಕ ಪಡೆಯುವುದು ಕಡ್ಡಾಯ.

BIG NEWS: 'ಖ್ಯಾತ ಗಾಯಕ ಪಂಡಿತ್ ರಾಜಶೇಖರ್ ಮನಸೂರ' ಇನ್ನಿಲ್ಲ | Vocalist Pandit Rajshekar Mansu No More


Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags