Kannada News Now

1.8M Followers

'SSLC ವಿದ್ಯಾರ್ಥಿ'ಗಳಿಗೆ ಮಹತ್ವದ ಮಾಹಿತಿ: ಮೇ.15ರೊಳಗೆ ಫಲಿತಾಂಶ ಪ್ರಕಟ | Karnataka SSLC Exam Results

03 May 2022.08:23 AM

ಬೆಂಗಳೂರು: ಇತ್ತೀಚಿಗೆ ನಡೆದಿದ್ದಂತ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ( SSLC Exam Results ) ಯಾವಾಗ ಎಂಬುದಾಗಿ ನಿರೀಕ್ಷೆಯಲ್ಲಿದ್ದಂತ ವಿದ್ಯಾರ್ಥಿಗಳಿಗೆ, ಕೊನೆಗೂ ಮಾಹಿತಿ ಹೊರ ಬಿದ್ದಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಮೇ.15ರೊಳಗೆ ಪ್ರಕಟಿಸೋದಾಗಿ ತಿಳಿದು ಬಂದಿದೆ.

ಈ ಬಗ್ಗೆ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮಾಹಿತಿ ನೀಡಿದ್ದು, ಮೌಲ್ಯ ಮಾಪನ ಕಾರ್ಯ ಪ್ರಗತಿಯಲ್ಲಿದ್ದು, ನಿಗದಿತ ಅವಧಿ ಪ್ರಕಾರವೇ ಮುಗಿಯಲಿದೆ. ಸರ್ಕಾರಿ ರಜೆಗಳು ಎದುರಾದ ಹಿನ್ನಲೆಯಲ್ಲಿ ಮೌಲ್ಯ ಮಾಪನ ಕೊಂಚ ವಿಳಂಬವಾಗಿದೆ. ಹೀಗಾಗಿ ಮೇ.15ರೊಳಗೆ ಫಲಿತಾಂಶ ಪ್ರಕಟಿಸೋದಾಗಿ ತಿಳಿಸಿದೆ.

ಪಿಎಸ್‌ಐ ನೇಮಕಾತಿ ಅಕ್ರಮ: ಆರೋಪಿ 'ಮಂಜುನಾಥ್ ಮೇಳಕುಂದಿ' ಸಿಐಡಿಗೆ ಶರಣಾಗಿದ್ದೇ ರೋಚಕ, ಅದೇಗೆ ಗೊತ್ತಾ.? ಇಲ್ಲಿದೇ ಸ್ಪೋಟಕ ಮಾಹಿತಿ

ಇನ್ನೂ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು, ಈ ಮೊದಲು ಮೇ.12ರಂದು ಫಲಿತಾಂಶ ಪ್ರಕಟಿಸೋದಾಗಿ ಹೇಳಿತ್ತು. ಆದ್ರೇ ಮೌಲ್ಯ ಮಾಪನ ಕಾರ್ಯದಲ್ಲಿ ಕೊಂಚ ವಿಳಂಬವಾಗುತ್ತಿರೋ ಕಾರಣದಿಂದಾಗಿ, ಮೇ.15ರೊಳಗೆ ಫಲಿತಾಂಶ ಪ್ರಕಟಿಸಲು ನಿರ್ಧರಿಸಿದೆ.

ಈ ಕುರಿತು ಮಾತನಾಡಿರೋ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಕೂಡ, ಎಸ್ ಎಸ್ ಎಲ್ ಸಿ ಫಲಿತಾಂಶದ ( SSLC Results ) ಬಗ್ಗೆ ಯಾವುದೇ ಅನುಮಾನ ಬೇಡ. ಮೇ.15ರೊಳಗೆ ಫಲಿತಾಂಶ ಹೊರ ಬೀಳಲಿದೆ ಎಂದು ತಿಳಿಸಿದ್ದಾರೆ.


Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags