Kannada News Now

1.8M Followers

ರೈತ ಬಾಂಧವರಿಗೆ ಗುಡ್‌ ನ್ಯೂಸ್‌ : ಈಗ ತಿಂಗಳಿಗೆ ₹6,000 ಜೊತೆಗೆ 3,000 ಲಭ್ಯ : ಲಾಭ ಪಡೆಯೋಕೆ ಜಸ್ಟ್‌ ಇಷ್ಟು ಮಾಡಿ.!!

17 May 2022.7:05 PM

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಫಲಾನುಭವಿಗಳಿಗೆ ಸರ್ಕಾರ ಮತ್ತೊಂದು ದೊಡ್ಡ ಪ್ರಯೋಜನವನ್ನ ನೀಡುತ್ತಿದೆ. ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ವಾರ್ಷಿಕವಾಗಿ 6,000 ರೂಪಾಯಿಯೊಂದಿಗೆ, ಈಗ ಪ್ರತಿ ತಿಂಗಳು 3,000 ರೂ.

ಸಿಗುತ್ತದೆ. ಇದಕ್ಕಾಗಿ ನೀವು ಯಾವುದೇ ವಿಶೇಷ ದಾಖಲೆ ಒದಗಿಸಬೇಕಾಗಿಲ್ಲ. ಹಾಗಾದ್ರೆ, ಮಾಡಬೇಕಿರೋದು ಏನು? ಮುಂದೆ ಓದಿ.

ವಾಸ್ತವವಾಗಿ, ಪಿಎಂ ಕಿಸಾನ್ ಮನ್ ಧನ್ ಯೋಜನೆ ಅಡಿಯಲ್ಲಿ ರೈತರಿಗೆ ಪ್ರತಿ ತಿಂಗಳು ಪಿಂಚಣಿ ನೀಡಲಾಗುತ್ತದೆ. ಇದರ ಅಡಿಯಲ್ಲಿ 60 ವರ್ಷದ ನಂತ್ರ ಪ್ರತಿ ತಿಂಗಳು 3000 ರೂ. ಅಂದರೆ ವರ್ಷಕ್ಕೆ 36000 ರೂ.ಗಳನ್ನು ರೈತರಿಗೆ ಪಿಂಚಣಿಯಾಗಿ ನೀಡಲಾಗುತ್ತದೆ.

ನೀವು ಪಿಎಂ ಕಿಸಾನ್ ಪ್ರಯೋಜನ ಪಡೆಯುತ್ತಿದ್ರೆ, ಇದಕ್ಕಾಗಿ ನೀವು ಯಾವುದೇ ಹೆಚ್ಚುವರಿ ದಾಖಲೆಯನ್ನ ಸಲ್ಲಿಸಬೇಕಾಗಿಲ್ಲ. ಇನ್ನು 18 ವರ್ಷದಿಂದ 40 ವರ್ಷದವರೆಗಿನ ರೈತರು ಇದರಲ್ಲಿ ಹೂಡಿಕೆ ಮಾಡಬಹುದು. ಇನ್ನು ಇದ್ರಲ್ಲಿ ವಯಸ್ಸಿಗೆ ಅನುಗುಣವಾಗಿ ಹೂಡಿಕೆ ಮೊತ್ತವನ್ನ ನಿಗದಿಪಡಿಸಲಾಗಿದೆ. ಅದ್ರಂತೆ,ಕನಿಷ್ಠ 20 ವರ್ಷ ಮತ್ತು ಗರಿಷ್ಠ 40 ವರ್ಷಗಳವರೆಗೆ ರೈತರು ರೈತರ ವಯಸ್ಸಿಗೆ ಅನುಗುಣವಾಗಿ ಮಾಸಿಕ 55 ರಿಂದ 200 ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ.


Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags