News18 ಕನ್ನಡ

400k Followers

BDA Recruitment: ಎಸ್​ಡಿಎ ಮತ್ತು ಎಫ್​ಡಿಎ ಹುದ್ದೆಗೆ ಅರ್ಜಿ ಆಹ್ವಾನ

19 May 2022.4:05 PM

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ (Bangalore Development Authority- BDA) ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಪ್ರಥಮ ಮತ್ತು ದ್ವಿತೀಯ ದರ್ಜೆ (FDA and SDA) ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸಲಾಗಿದೆ. ಸರ್ಕಾರದ ವಿವಿಧ ಇಲಾಖೆಗಳಿಂದ ನುರಿತ ನೌಕರರುಗಳನ್ನು ನಿಯೋಜನೆ ಮೂಲಕ ಭರ್ತಿ ಮಾಡಿಕೊಳ್ಳಲು ಸರ್ಕಾರ ನಿರ್ಧರಿಸಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜೂನ್​ 18 ಕೊನೆಯ ದಿನಾಂಕವಾಗಿದ್ದು, ಪದವೀಧರರು ಆಫ್​​​ಲೈನ್​ (Offline) ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಬಿಡಿಎಯಲ್ಲಿ ಸಹಾಯಕ ಹುದ್ದೆಗಳಿಗೆ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

ಹುದ್ದೆಯ ಕುರಿತ ವಿವರ ಮಾಹಿತಿ
ಹುದ್ದೆ ಗಳು ಪ್ರಥಮ ದರ್ಜೆ, ದ್ವಿತೀಯ ದರ್ಜೆ ಸಹಾಯಕರು
ಪ್ರಥಮ ದರ್ಜೆ 78
ದ್ವಿತೀಯ ದರ್ಜೆ 98
ಹುದ್ದೆಗಳ ಸಂಖ್ಯೆ 176
ಉದ್ಯೋಗ ಸ್ಥಳ ಬೆಂಗಳೂರು
ವೇತನ ಬಿಡಿಎ ನಿಯಮಾವಳಿ ಪ್ರಕಾರ


ಹುದ್ದೆಗಳು : ಈಗಾಗಲೇ ಸರ್ಕಾರದಲ್ಲಿ ಪ್ರಥಮ ದರ್ಜೆ ಮತ್ತು ದ್ವಿತೀಯ ದರ್ಜೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಡೆಪ್ಯೂಟೆಷನ್​ ಆಧಾರದ ಮೇಲೆ ಬಿಡಿಎನಲ್ಲಿ ಕಾರ್ಯ ನಿರ್ವಹಿಸಲು ಅರ್ಜಿ ಆಹ್ವಾನಿಸಲಾಗಿದೆ. ಬೆಂಗಳೂರಿನಲ್ಲಿ ಕೆಲಸ ಮಾಡುವ ಇತರೆ ಜಿಲ್ಲೆಗಳ ಸರ್ಕಾರಿ ಉದ್ಯೋಗಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ಸಂಖ್ಯೆ: ಪ್ರಥಮ ದರ್ಜೆಯ 78 ಮತ್ತು ದ್ವಿತೀಯ ದರ್ಜೆಯ 98 ಹುದ್ದೆಗಳಿಗೆ ಸೇರಿದಂತೆ ಒಟ್ಟು 176 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಶೈಕ್ಷಣಿಕ ಅರ್ಹತೆ ಮತ್ತು ವಯಸ್ಸಿನ ಮಿತಿ: ಬಿಡಿಎ ನೇಮಕಾತಿ ನಿಯಮಗಳ ಪ್ರಕಾರ

ಮೇಲಿನ ಅರ್ಹತಾ ದಂಡ ಪೂರೈಸುವ ಮತ್ತು ಪ್ರಾಧಿಕಾರದ ನಿಯೋಜನೆ ಮೇರೆಗೆ ಕಾರ್ಯ ನಿರ್ವಹಿಸಲು ಆಸಕ್ತಿ ಇರುವ ಸರ್ಕಾರದ ವಿವಿಧ ಇಲಾಖೆಯ ನೌಕರರು ಕೆಳಕಂಡ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು

ಆಯ್ಕೆ ವಿಧಾನ

ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ಇದನ್ನು : ಅಮುಲ್​ನಲ್ಲಿ ವಾಣಿಜ್ಯ ಪದವೀಧರರ ನೇಮಕಾತಿಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಸುವ ವಿಳಾಸ
ಆಯುಕ್ತರು,
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ,
ಕುಮಾರ ಪಾರ್ಕ್​ ಪಶ್ಚಿಮ,
ಟಿ. ಚೌಡಯ್ಯ ರಸ್ತೆ,
ಬೆಂಗಳೂರು-560020
ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ: ಜೂನ್​​ 18, 2022

ವಿಶೇಷ ಸೂಚನೆ: ಅರ್ಜಿಯ ಒಂದು ಪ್ರತಿಯನ್ನು ನೇರವಾಗಿ ಆಯುಕ್ತರು, ಬೆಂಗಳೂರು ಅಭಿವೃದ್ದಿ ಪ್ರಾಧಿಕಾರಕ್ಕೆ ಸಲ್ಲಿಸಬೇಕು.

ಇದನ್ನು : ಎಂಜಿನಿಯರಿಂಗ್​​ ಪದವೀಧರರಿಗೆ ಉದ್ಯೋಗಾವಕಾಶ; ಯಾವುದೇ ಲಿಖಿತ ಪರೀಕ್ಷೆ ಇಲ್ಲ

ಅರ್ಜಿಯಲ್ಲಿ ತುಂಬ ಬೇಕಾದ ಕಡ್ಡಾಯ ವಿವರಗಳು
ನೌಕರರ ಹೆಸರು:
ಜನ್ಮ ದಿನಾಂಕ:
ಸರ್ಕಾರದ ಸೇವೆಗೆ ಸೇರಿದ ದಿನಾಂಕ:
ಇಲಾಖೆ:
ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಹುದ್ದೆ:
ಕಚೇರಿ ವಿಳಾಸ:
ಇತರೆ ವಿದ್ಯಾರ್ಹತೆ:
ಅನುಭವದ ಕುರಿತು ಅಗತ್ಯ ಮಾಹಿತಿ:

ನೇಮಕಾತಿ ಮಾನದಂಡ
- ಕಳೆದ 10 ವರ್ಷಗಳಲ್ಲಿ ಕೆಪಿಎಸ್‌ಸಿಯಿಂದ ಎಫ್‌ಡಿಎ/ಎಸ್‌ಡಿಎ ಅಥವಾ ತತ್ಸಮಾನ ಹುದ್ದೆಗಳಾಗಿ ನೇರವಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
-ನಗರಾಭಿವೃದ್ಧಿ ಇಲಾಖೆ ಮತ್ತು ಕಂದಾಯ ಇಲಾಖೆಯಲ್ಲಿ ಎಫ್‌ಡಿಎ/ಎಸ್‌ಡಿಎ ಅಥವಾ ತತ್ಸಮಾನ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ಆಯ್ಕೆ ಪ್ರಕ್ರಿಯೆ
-ಸ್ವೀಕೃತವಾದ ಎಲ್ಲಾ ಅರ್ಜಿಗಳನ್ನು ಸರ್ಕಾರದ ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಿ, ನಿಯೋಜನಾ ಆದೇಶವನ್ನು ಪಡೆದ ನಂತರ ಪ್ರಾಧಿಕಾರದಲ್ಲಿ ನಿಯೋಜನೆ ಮೇರೆಗೆ ನೇಮಿಸಿಕೊಳ್ಳಲಾಗುವುದು.

ಪ್ರಮುಖ ಲಿಂಕ್​ಗಳು

ಅಧಿಕೃತ ವೆಬ್​ತಾಣ: bdabangalore.org

ಪ್ರಮುಖ ದಿನಾಂಕಗಳು:
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಏಪ್ರಿಲ್​ 11, 2022
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18 ಜೂನ್​ 2022
Disclaimer

Disclaimer

This story is auto-aggregated by a computer program and has not been created or edited by Dailyhunt Publisher: News18 Kannada

#Hashtags