Suvarna News

1.4M Followers

Karnataka Rain ಕರ್ನಾಟದಲ್ಲಿ ಭಾರಿ ಮಳೆ, ಶಾಲೆಗಳಿಗೆ ಮಹತ್ವದ ಆದೇಶ ನೀಡಿದ ಶಿಕ್ಷಣ ಇಲಾಖೆ!

19 May 2022.5:44 PM

ಬೆಂಗಳೂರು(ಮೇ.19): ಕರ್ನಾಟಕದ ಬಹುತೇಕ ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದೆ. ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳೆ ನಷ್ಟ, ಮನೆ ಕುಸಿತ, ಜೀವ ಹಾನಿ ಘಟನೆಗಳು ವರದಿಯಾಗಿದೆ. ಇತ್ತ ಶಾಲೆಗಳು ಆರಂಭಗೊಂಡಿದ್ದು ಮಳೆಯಿಂದ ಆತಂಕ ಹೆಚ್ಚಿದೆ.

ಹೀಗಾಗಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಶಿಕ್ಷಣ ಇಲಾಕೆ ರಾಜ್ಯದ ಎಲ್ಲಾ ಶಾಲೆಗಳಿಗೆ ಆದೇಶ ನೀಡಿದೆ.

ರಾಜ್ಯದಲ್ಲಿನ ಭೀಕರ ಮಳೆಯಿಂದ 7 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಇನ್ನು ದಕ್ಷಿಣ ಕನ್ನಡ, ಮೈಸೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಪರಿಸ್ಥಿತಿ ಅಪಾಯದ ಮಟ್ಟ ತಲುಪಿದೆ. ಹೀಗಾಗಿ ಶಿಕ್ಷಣ ಇಲಾಖೆ ಶಾಲೆಗಳಲ್ಲಿ ಮುಂಜಾಗ್ರತ ಕ್ರಮ ಕೈಗೊಳ್ಳಬೇಕು ಎಂದಿದೆ. ಜೊತೆಗೆ ಕೆಲ ಸ್ಪಷ್ಟ ನಿರ್ದೇಶನಗಳನ್ನು ನೀಡಿದೆ.

Karnataka SSLC Result 2022 Declared Check: ಫಲಿತಾಂಶ ಪ್ರಕಟ, ಚೆಕ್‌ ಮಾಡೋದು ಹೇಗೆ

ಶಿಥಿಲಾ ಕೊಠಡಿಗಳ ಬಳಕೆ ಬೇಡ
ಶಾಲೆ ಹಾಗೂ ಶಾಲಾ ಕೊಠಡಿಗಳು ಶಿಥಿಲಗೊಂಡಿದ್ದರೆ, ಮಳೆ ನೀರು ಒಳಗೆ ಸುರಿಯುತ್ತಿದ್ದರೆ, ಅಥವಾ ದೋಷಗಳಿರುವ ಕಟ್ಟಡದಲ್ಲಿ ಪಾಠ ನಡೆಸದಂತೆ ಸೂಚಿಸಲಾಗಿದೆ. ಇದರ ಬದಲಾಗಿ ಸುಸ್ಥಿತಿಯಲ್ಲಿರುವ ಕಟ್ಟಡಜಲ್ಲಿ ಶಾಲೆ ಹಾಗೂ ಪಾಠ ನಡೆಸಲು ಸೂಚಿಸಲಾಗಿದೆ. ಈ ಕುರಿತು ಸಂಬಂಬಧ ಪಟ್ಟ ಶಿಕ್ಷಣ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಸಲಹೆ ಹಾಗೂ ಪರಿಹಾರ ಪಡೆಯಲು ಸೂಚಿಸಲಾಗಿದೆ.

ಕೋವಿಡ್ 19 ಮುಂಜಾಗ್ರತಾ ಕ್ರಮ
ತೀವ್ರ ಮಳೆ ಹಾಗೂ ಚಳಿ ವಾತಾವರಣ ಸೃಷ್ಟಿಯಾಗಿರುವ ಕಾರಣ ಮಕ್ಕಳಲ್ಲಿ ಶೀತ, ಜ್ವರ, ಕೆಮ್ಮು ಹಾಗೂ ಸುಸ್ತು ಕಾಣಿಸಿಕೊಂಡರೆ ಕೊರೋನಾ ಮುನ್ನಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು. ಶೀತ, ಜ್ವರ, ಕೆಮ್ಮು ಹಾಗೂ ಸುಸ್ತು ಕಾಣಿಸಿಕೊಂಡ ವಿದ್ಯಾರ್ಥಿಗಳಿಗೆ ರಜೆ ನೀಡಿ ಆರೋಗ್ಯ ತಪಾಸಣೆಗೆ ಪೋಷಕರಿಗೆ ಸೂಚಿಸಬೇಕು ಎಂದಿದೆ.

ಸ್ಥಳೀಯ ಸಂಸ್ಥೆಗಳ ಸಂಪರ್ಕ
ಮಳೆಯಿಂದ ನೆರೆ ಅಥವಾ ಪ್ರವಾಹ ಪರಿಸ್ಥಿತಿ ನಿರ್ಮಾಣಾದರೆ ತಕ್ಷಣವೇ ಸ್ಥಳೀಯ ಸಂಸ್ಥೆಗಳ ನೆರವು ಪಡೆಯಲು ಸೂಚಿಸಲಾಗಿದೆ.

ಮುಂಗಾರು ಆರಂಭಕ್ಕೂ ಮುನ್ನವೇ ಬೆಂಗ್ಳೂರಲ್ಲಿ 10,282 ರಸ್ತೆ ಗುಂಡಿ ಭರ್ತಿ: ಬಿಬಿಎಂಪಿ

ಶಾಲೆಗೆ ರಜೆ ಘೋಷಣೆ
ಮಳೆಯಿಂದ ಶಾಲೆ ಹಾಗೂ ಶಾಲೆಯ ಆವರಣ ಜಲಾವೃತಗೊಂಡಿದ್ದರೆ, ತಕ್ಷಣವೇ ಸಂಬಂಧಪಟ್ಟ ಶಿಕ್ಷಣ ಅಧಿಕಾರಿಗಳು, ಜಿಲ್ಲಾ ಉಪನಿರ್ದೇಶಕ ಅನುಮತಿ ಪಡೆಯಬೇಕು. ಶಾಲಾ ಮುಖ್ಯೋಪಾದ್ಯಾಯರು ಅನುಮತಿ ಪಡೆದು ರಜೆ ಘೋಷಿಸಬೇಕು. ಮಳೆಯ ರಜಾ ದಿನಗಳನ್ನು ಮುಂಬರವು ಸರ್ಕಾರಿ ರಜಾ ದಿನಗಳಲ್ಲಿ ಸರಿದೂಗಿಸಲು ಅವಕಾಶ ನೀಡಲಾಗಿದೆ.

ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು
ಶಾಲೆಯಲ್ಲಿ , ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗಬಾರದು. ಜೀವ ಹಾನಿಯಾಗದಂತೆ ಕ್ರಮ ಕೈಗೊಳ್ಳಬೇಕು. ಆರೋಗ್ಯ ಇಲಾಖೆ, ತಾಲೂಕು, ಜಿಲ್ಲಾಡಳಿತ ಹಾಗೂ ಸ್ಥಳೀಯ ಸಂಸ್ಥೆಗಳ ಅಗತ್ಯ ನರೆವು ಪಡೆಯಲು ಆದೇಶದಲ್ಲಿ ಸೂಚಿಸಲಾಗಿದೆ.

3-4 ದಿನ ರಾಜ್ಯದಲ್ಲಿ ಭರ್ಜರಿ ಮಳೆ
ರಾಜ್ಯದಲ್ಲಿ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ಮೂರ್ನಾಲ್ಕು ದಿನ ಗುಡುಗು ಮಿಂಚು ಮತ್ತು ಗಾಳಿ ಸಹಿತ ಭರ್ಜರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕರಾವಳಿಗೆ ಗುರುವಾರ ಅತಿ ಭಾರಿ ಮಳೆಯ ರೆಡ್‌ ಅಲರ್ಚ್‌ ನೀಡಲಾಗಿದೆ. ಕರಾವಳಿಯಲ್ಲಿ ಬುಧವಾರ ಮತ್ತು ಶುಕ್ರವಾರ, ದಕ್ಷಿಣ ಒಳನಾಡಿನಲ್ಲಿ ಶುಕ್ರವಾರದವರೆಗೆ ಭಾರಿ ಮಳೆಯ ಆರೆಂಜ್‌ ಅಲರ್ಚ್‌ ನೀಡಲಾಗಿದೆ. ಉತ್ತರ ಒಳನಾಡಿನ ಜಿಲ್ಲೆಗಳಿಗೆ ಮೇ 21ರವರೆಗೂ ಹೆಚ್ಚು ಮಳೆಯ ಆರೆಂಜ್‌ ಅಲರ್ಚ್‌ ನೀಡಲಾಗಿದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Asianet News Kannada

#Hashtags