Kannada News Now

1.8M Followers

SSLC Exam Revaluation : `SSLC' ಫಲಿತಾಂಶ ತೃಪ್ತಿಯಿಲ್ಲವೇ? ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ

20 May 2022.06:26 AM

ಬೆಂಗಳೂರು : 2021-22 ನೇ ಸಾಲಿನ ಎಸ್‌ಎಸ್‌ಎಲ್ ಸಿ(SSLC) ಮುಖ್ಯ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಎಸ್‌ಎಸ್‌ಎಲ್ ಸಿ ಪರೀಕ್ಷೆಯ ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ, ಮರುಎಣಿಕೆ ಹಾಗೂ ಮರುಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ.

ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿಯನ್ನು ಪಡೆಯಲು ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 20-05-2022 ಆಗಿದ್ದು, ಮೌಲ್ಯಮಾಪನ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿಯನ್ನು ಪಡೆಯಲು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30-05-2022 ಆಗಿದೆ.

ವಿದ್ಯಾರ್ಥಿಗಳು ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್/ ಆನ್ ಲೈನ್ ಬ್ಯಾಂಕಿಂಗ್, ಸೌಲಭ್ಯವಿಲ್ಲದವರು ಆನ್ ಲೈನ್ ನಲ್ಲಿ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿಯನ್ನು ಪಡೆಯಲು ಅರ್ಜಿ ಸಲ್ಲಿಸಿದ ನಂತರ ಆಫ್ ಲೈನ್ ಚಲನ್ ಡೌಲ್ ಲೋಡ್ ಮಾಡಿಕೊಂಡು ಶುಲ್ಕವನ್ನು ಬಿ/ಕೆ/ಬ್ಯಾಂಕಿಗೆ ಪಾವತಿಸಲು ಅಂತಿಮ ದಿನಾಂ 31-05-2022ಆಗಿದೆ.

ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆಗಳ ಮರುಎಣಿಕೆಗೆ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 24-05-22 ಆಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 06-06-2022 ಆಗಿದೆ. ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 24-05-2022 ಆಗಿದೆ. ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿ ಸಲ್ಲಿಸಲು ಕೊನೆಯ ದಿನಾಂಕ 06-06-22 ಆಗಿದೆ.

ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

  1. KSEEB ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ - sslc.karnataka.gov.in.
  2. ವೆಬ್‌ಸೈಟ್‌ನಲ್ಲಿ ಹೋಮ್‌ ಪೇಜ್‌ನಲ್ಲಿ ಲೇಟೆಸ್ಟ್‌ ನ್ಯೂಸ್‌ ಎಂಬ ಆಪ್ಷನ್‌ ಕ್ಲಿಕ್‌ ಮಾಡಿ
  3. Tap to Apply for SSLC Result 2022 Scrutiny ಎಂಬ ಆಪ್ಷನ್‌ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್‌ ಮಾಡಿ.
  4. ವಿದ್ಯಾರ್ಥಿಯ ಮಾಹಿತಿಯನ್ನು ನಮೂದಿಸಿ ಮತ್ತು ಮರುಮೌಲ್ಯಮಾಪನ ಮಾಡಲು ಬಯಸುವ ಉತ್ತರ ಪತ್ರಿಕೆಗಳನ್ನು (ವಿಷಯಗಳನ್ನು) ಸೆಲೆಕ್ಟ್‌ ಮಾಡಿ.
  5. ಪ್ರತಿ ವಿಷಯಗಳಿಗೂ ಮರುಮೌಲ್ಯಮಾಪನಕ್ಕೆ ಇರುವ ಫೀಸನ್ನು ಆನ್‌ಲೈನ್‌ ಮುಖಾಂತರ ಕಟ್ಟಿ.


Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags