Zee News ಕನ್ನಡ

352k Followers

PM Kisan FPO Yojana: ಕೇಂದ್ರ ಸರ್ಕಾರದ ವತಿಯಿಂದ ರೈತರಿಗೆ 15 ಲಕ್ಷ ರೂ. ಸಹಾಯ ಧನ, ಇಂದೇ ಇದರ ಲಾಭ ಪಡೆದುಕೊಳ್ಳಿ

25 May 2022.4:11 PM

PM Kisan FPO Yojana: ನೀವು ಕೂಡ ಪಿಎಂ ಕಿಸಾನ್ ಯೋಜನೆಯ ಫಲಾನುಭಾವಿಗಳಾಗಿದ್ದರೆ, ಈ ಸುದ್ದಿ ನಿಮಗಾಗಿ. ಕೇಂದ್ರ ಸರ್ಕಾರ ರೈತರ ಸಹಾಯಕ್ಕೆ ನಿರಂತರವಾಗಿ ಕೆಲಸ ಮಾಡುತ್ತಿದೆ. ರೈತರ ಆದಾಯ ಹೆಚ್ಚಿಸಿ ಅವರ ಸಾಲ ತೀರಿಸಲು ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ.

ಇದೀಗ ರೈತರಿಗೆ ಹೊಸದಾಗಿ ಕೃಷಿ ಉದ್ಯಮ ಆರಂಭಿಸಲು ಸರಕಾರ 15 ಲಕ್ಷ ರೂ. ವರೆಗೆ ಸಹಾಯಧನವನ್ನು ಒದಗಿಸುತ್ತಿದೆ. ಈ ಯೋಜನೆಯ ಲಾಭವನ್ನು ನೀವು ಹೇಗೆ ಪಡೆಯಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ರೈತರಿಗೆ 15 ಲಕ್ಷ ರೂ ಸಹಾಯಧನ
ರೈತರ ಆರ್ಥಿಕ ಸಹಾಯಕ್ಕಾಗಿ ಸರ್ಕಾರವು 'ಪಿಎಂ ಕಿಸಾನ್ ಎಫ್‌ಪಿಒ ಯೋಜನೆ' ಪ್ರಾರಂಭಿಸಿದೆ. ಈ ಯೋಜನೆಯಡಿ ಫಾರ್ಮರ್ಸ್ ಪ್ರೋಡ್ಯುಸರ್ಸ್ ಆರ್ಗನೈಝೇಶನ್ ಗೆ 15 ಲಕ್ಷ ರೂ. ಸಹಾಯಧನ ನೀಡಲಾಗುತ್ತಿದೆ. ಹೊಸ ಕೃಷಿ ಉದ್ಯಮವನ್ನು ಪ್ರಾರಂಭಿಸಲು ದೇಶಾದ್ಯಂತ ರೈತರಿಗೆ ಸರ್ಕಾರ ಈ ಆರ್ಥಿಕ ನೆರವು ನೀಡುತ್ತಿದೆ. ಈ ಯೋಜನೆಯ ಲಾಭ ಪಡೆಯಲು 11 ರೈತರು ಒಟ್ಟಿಗೆ ಸೇರಿ ಸಂಸ್ಥೆ ಅಥವಾ ಕಂಪನಿಯನ್ನು ರಚಿಸಬೇಕಾಗುತ್ತದೆ. ಇದರಿಂದ ರೈತರಿಗೆ ಕೃಷಿ ಉಪಕರಣಗಳು ಅಥವಾ ರಸಗೊಬ್ಬರಗಳು, ಬೀಜಗಳು ಅಥವಾ ಔಷಧಿಗಳನ್ನು ಖರೀದಿಸಲು ಸಹಾಯವಾಗಲಿದೆ.

ಈ ರೀತಿ ಅರ್ಜಿ ಸಲ್ಲಿಸಿ
>> ಮೊದಲಿಗೆ ರಾಷ್ಟ್ರೀಯ ಕೃಷಿ ಮಾರುಕಟ್ಟೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
>> ಈಗ ನಿಮ್ಮ ಮುಂದೆ ಹೋಮ್ ಪೇಜ್ ತೆರೆದುಕೊಳ್ಳುತ್ತದೆ.
>> ಈಗ ಹೋಮ್ ಪೇಜ್ ನಲ್ಲಿರುವ FPO ಆಯ್ಕೆಯನ್ನು ಕ್ಲಿಕ್ ಮಾಡಿ.
>> ನಂತರ ಅಲ್ಲಿರುವ 'ನೋಂದಣಿ' ಆಯ್ಕೆಯನ್ನು ಕ್ಲಿಕ್ ಮಾಡಿ.
>> ನೋಂದಣಿ ಫಾರ್ಮ್ ನಿಮ್ಮ ಮುಂದೆ ತೆರೆದುಕೊಳ್ಳಲಿದೆ.
>> ಈಗ ನಮೂನೆಯಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ.
>> ಇದರ ನಂತರ, ನೀವು ಪಾಸ್‌ಬುಕ್, ರದ್ದುಗೊಳಿಸಿದ ಚೆಕ್ ಮತ್ತು ಐಡಿ ಪ್ರೂಫ್ ಅನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
>> ಬಳಿಕ ನೀವು ಸಬ್ಮಿಟ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು.

ಈ ರೀತಿ ಲಾಗಿನ್ ಆಗಿ
>> ಒಂದು ವೇಳೆ ನೀವು ಲಾಗಿನ್ ಮಾಡಲು ಬಯಸುತ್ತಿದ್ದರೆ, ಮೊದಲು ರಾಷ್ಟ್ರೀಯ ಕೃಷಿ ಮಾರುಕಟ್ಟೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
>> ನಿಮ್ಮ ಮುಂದೆ ಹೋಮ್ ಪೇಜ್ ತೆರೆದುಕೊಳ್ಳಲಿದೆ.
>> ಈಗ ನೀವು FPO ಆಯ್ಕೆಯನ್ನು ಕ್ಲಿಕ್ಕಿಸಬೇಕು.
>> ನಂತರ ನೀವು ಲಾಗಿನ್ ಆಯ್ಕೆಯನ್ನು ಕ್ಲಿಕ್ ಮಾಡಿ.
>> ಇದರ ನಂತರ ಲಾಗಿನ್ ಫಾರ್ಮ್ ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ.
>> ಈಗ ಅದರಲ್ಲಿ ಬಳಕೆದಾರ ಹೆಸರು, ಪಾಸ್‌ವರ್ಡ್ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ.
>> ಈ ರೀತಿ ನೀವು ಲಾಗ್ ಇನ್ ಆಗಬಹುದು.

ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
https://bit.ly/3hDyh4G
https://apple.co/3hEw2hy
Twitter, Facebook, Youtube

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Zee News Kannada

#Hashtags