News18 ಕನ್ನಡ

400k Followers

KSMCL Recruitment: ಕರ್ನಾಟಕ ಸ್ಟೇಟ್​ ಮಿನರಲ್ಸ್​ನಲ್ಲಿ ಗುತ್ತಿಗೆ ಆಧಾರದ ಹುದ್ದೆಗೆ ವಾಕ್​ ಇನ್​ ಇಂಟರ್​ವ್ಯೂ

26 May 2022.6:49 PM

ಕರ್ನಾಟಕ ಸ್ಟೇಟ್​ ಮಿನರಲ್ಸ್​ ಕಾರ್ಪೊರೇಷನ್​ ಲಿಮಿಟೆಡ್​​ (Karnataka State Minerals Corporation Limited) ​​ ಖಾಲಿಯಿರುವ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಐದು​ ಹುದ್ದೆ ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಯೂ ಒಂದು ವರ್ಷದ ಗುತ್ತಿಗೆ ಆಧಾರಿತವಾಗಿದೆ.

ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

ಸಂಸ್ಥೆ -ಕರ್ನಾಟಕ ಸ್ಟೇಟ್​ ಮಿನರಲ್ಸ್​ ಕಾರ್ಪೊರೇಷನ್​ ಲಿಮಿಟೆಡ್​​
ಹುದ್ದೆ - ಶಾಸನಬದ್ಧ ಸಹಾಯಕ ವ್ಯವಸ್ಥಾಪಕರು, ​ಗಣಿ ಮುಂದಾಳು, ಗಣಿ ಸಂಗಾತಿ
ಹುದ್ದೆ ಸಂಖ್ಯೆ- 05
ವಾಕ್ ಇನ್​ ಇಂಟರ್​ವ್ಯೂ ನಡೆಯುವ ದಿನಾಂಕ- ಜೂನ್ 23 ಆಗಿದೆ.

ಹುದ್ದೆ ಮಾಹಿತಿ ಹುದ್ದೆ ಸಂಖ್ಯೆ ವಿದ್ಯಾರ್ಹತೆ ವೇತನ ಕಾರ್ಯ ನಿರ್ವಹಣೆ ಸ್ಥಳ
ಶಾಸನಬದ್ಧ ಸಹಾಯಕ ವ್ಯವಸ್ಥಾಪಕರು 2 ಇಂಜಿನಿಯರಿಂಗ್​ ಪದವಿ 36 ಸಾವಿರ ಮಾಸಿಕ ಮೈಸೂರು
ಗಣಿ ಮುಂದಾಳು 2 ಮೈನಿಂಗ್ ಇಂಜಿನಿಯರಿಂಗ್​ನಲ್ಲಿ ಡಿಪ್ಲೋಮಾ 28 ಸಾವಿರ ಮಾಸಿಕ ಬಳ್ಳಾರಿ, ಮೈಸೂರು
ಗಣಿ ಸಂಗಾತಿ 2 ಎಸ್​ಎಸ್​ಎಲ್​ಸಿ 25 ಸಾವಿರ ಬಳ್ಳಾರಿ


ಶೈಕ್ಷಣಿಕ ಅರ್ಹತೆ
ವಿಶ್ವವಿದ್ಯಾಲಯಗಳಿಂದ ಮೈನಿಂಗ್ ಇಂಜಿನಿಯರಿಂಗ್‌ನಲ್ಲಿ ಪದವಿಯನ್ನು ಪೂರ್ಣಗೊಳಿಸಿರಬೇಕು

ವಯೋಮಿತಿ:
ಅಭ್ಯರ್ಥಿ ಗರಿಷ್ಠ 30 ವರ್ಷಗಳನ್ನು ಮೀರಿರಬಾರದು
ಅನುಭವ: ನಿರ್ಧಿಷ್ಟ ಕ್ಷೇತ್ರದಲ್ಲಿ ಅನುಭವ ಇರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು

ಅರ್ಜಿ ಸಲ್ಲಿಕೆ ವಿಧಾನ
ನೇರ ಸಂದರ್ಶನ
ಸಂದರ್ಶನ ನಡೆಯುವ ದಿನಾಂಕ ಜೂ 23, 2022 ಆಗಿದ್ದು ಬೆಳಿಗ್ಗೆ 10.30 ರಿಂದ ಸಂಜೆ 5 ಗಂಟೆ ಆಗಿದೆ.

ಅಧಿಕೃತ ಅಧಿಸೂಚನೆಗೆ ಇಲ್ಲಿ ಕ್ಲಿಕ್​ ಮಾಡಿ
ಅಧಿಕೃತ ವೆಬ್​ ಸೈಟ್​: ksmc.karnataka.gov.in

ಸೂಚನೆ
ಅಂಚೆ ಮೂಲಕ ಅಥವಾ ಖುದ್ದಾಗಿ ನೇರ ಸಂದರ್ಶನದ ದಿನಾಂಕದಂದು ಸಲ್ಲಿಸಲಾಗುವ ಅರ್ಜಿಯನ್ನು ಪರಿಗಣಿಸುವುದಿಲ್ಲ.

ಸಂದರ್ಶನಕ್ಕೆ ಹಾಜರಾಗುವ ಸ್ಥಳ
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಅರಜಿ ಭರ್ತಿ ಮಾಡಬೇಕು ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳನ್ನು ಸಲ್ಲಿಸಬೇಕು.

ಇದನ್ನು : ಜಿಲ್ಲಾಧಿಕಾರಿ ಕಚೇರಿಯಲ್ಲಿ ಟೆಕ್ನಿಕಲ್ ಪ್ರೋಗ್ರಾಮರ್​​ ಹುದ್ದೆಗೆ ಅರ್ಜಿ ಆಹ್ವಾನ

ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಸರಿಯಾದ ಪ್ರಮಾಣಪತ್ರ, ಅನುಭವದ ಒರಿಜಿನಲ್​ ಡಾಕ್ಯುಮೆಂಟ್​ನೊಂದಿಗೆ ಹಾಜರಾಗಬೇಕು.

ಇದನ್ನು : ಬಳ್ಳಾರಿ ಗ್ರಾಮ ಪಂಚಾಯತ್​ನಲ್ಲಿ ನೇಮಕಾತಿ; ಇಲ್ಲಿದೆ ಸಂಪೂರ್ಣ ಮಾಹಿತಿ

ಜನರಲ್ ಮ್ಯಾನೇಜರ್ (ನಿರ್ವಾಹಕರು ಮತ್ತು ವಿಜಿಲೆನ್ಸ್), ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್, T.T.M.C, A ಬ್ಲಾಕ್, 5 ನೇ ಮಹಡಿ, B.M.T.C ಕಟ್ಟಡ, K.H. ಗೆ ಕಳುಹಿಸಬೇಕಾಗುತ್ತದೆ. ರಸ್ತೆ, ಶಾಂತಿ ನಗರ, ಬೆಂಗಳೂರು - 560027.

ಆಯ್ಕೆ ವಿಧಾನ
ಮೆರಿಟ್​
ಅನುಭವ
ನೇರ ಸಂದರ್ಶನದಲ್ಲಿನ ಫಾರ್ಮಮೆನ್ಸ್​​ ಆಧಾರದ ಮೇಲೆ
Disclaimer

Disclaimer

This story is auto-aggregated by a computer program and has not been created or edited by Dailyhunt Publisher: News18 Kannada

#Hashtags