ನ್ಯೂಸ್ ಕರ್ನಾಟಕ ಕನ್ನಡ

241k Followers

ಮೇ.16 ರಂದೇ ಶಾಲೆಗಳು ಪ್ರಾರಂಭ, ಯಾವುದೇ ಬದಲಾವಣೆ ಇರುವುದಿಲ್ಲ: ಬಿ.ಸಿ.ನಾಗೇಶ್

08 May 2022.10:27 AM

ಬಂಟ್ವಾಳ: ಮೇ. 16 ರಂದೇ ಶಾಲೆಗಳನ್ನು ಪ್ರಾರಂಭಿಸಲಾಗುವುದು, ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ.16 ರಂದೇ ಶಾಲೆಗಳನ್ನು ಪ್ರಾರಂಭಿಸಲಾಗುವುದು, ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

9 ತಿಂಗಳನ್ನು ಮೂರು ಭಾಗಗಳನ್ನಾಗಿ ಮಾಡಿ ಕಲಿಕೆ ಮಾಡಲಾಗುವುದು. ರಾಜ್ಯದ ಎಲ್ಲ ಶಾಲೆಗಳಲ್ಲಿ ವಾರಕ್ಕೊಂದು ದಿನ ನೈತಿಕ ಶಿಕ್ಷಣ ಜಾರಿಗೊಳಿಸುವ ಚಿಂತನೆ ಇದೆ. ಮಕ್ಕಳನ ವಿಕಸನಕ್ಕಾಗಿ ಏಕರೂಪ ಭಾರತೀಯ ಶಿಕ್ಷಣ ನೀತಿಯನ್ನು 1 ಮತ್ತು 2 ನೇ ತರಗತಿಗಳಲ್ಲಿ ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ಎಸ್‌ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶದ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಈ ಸಾಲಿನ ಎಸ್‌ಎಸ್‌ಎಲ್ ಸಿ ಪರೀಕ್ಷೆ ಸೂಸೂತ್ರವಾಗಿ ಪೂರ್ಣಗೊಂಡಿದ್ದು, ಮೇ ಮೂರನೇ ವಾರದಲ್ಲಿ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಹೇಳಿದ್ದಾರೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: News Kannada