ಉದಯವಾಣಿ

1.4M Followers

ಕರ್ತವ್ಯ ಲೋಪ; ಮೂವರು ಶಿಕ್ಷಕರ ಅಮಾನತು

12 May 2022.3:26 PM

ಆಳಂದ: ಕರ್ತವ್ಯಲೋಪದಡಿ ತಾಲೂಕಿನ ಅಂಬೇವಾಡ ಶಾಲೆಯ ಇಬ್ಬರು ಶಿಕ್ಷಕರು ಮತ್ತು ಕರ್ತವ್ಯಲೋಪ, ಅವ್ಯವಹಾರ ಆರೋಪದಡಿ ಖಜೂರಿಯ ಓರ್ವ ಶಿಕ್ಷಕಿ ಸೇರಿ ಮೂವರನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಅಶೋಕ ಭಜಂತ್ರಿ ಅಮನಾತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ತಾಲೂಕಿನ ಅಂಬೇವಾಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಅಬ್ದುಲ್‌ ರಜಾಕ್‌, ಪ್ರಭಾರಿ ಮುಖ್ಯ ಶಿಕ್ಷಕ ಜಹೀರ್‌ ಅಬ್ಟಾಸ್‌ ಅವರ ಕರ್ತವ್ಯ ಲೋಪದ ಕುರಿತು ಶಾಸಕ ಸುಭಾಷ ಗುತ್ತೇದಾರ ದೂರಿನನ್ವಯ ಶಿಕ್ಷಣ ಸಂಯೋಜಕರು, ಕ್ಷೇತ್ರ ಬಿಆರ್‌ಪಿ, ಸಿಆರ್‌ಪಿ ನೀಡಿದ ವರದಿಗಳನ್ನು ಕ್ರೋಢಿಕರಿಸಿ, ಪರಿಶೀಲಿಸಿ ವರದಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ರಶೇಖರ ದೇಗುಲಮಡಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ವರದಿ ಸಲ್ಲಿಸಿದ ಹಿನ್ನೆಲೆಯಲ್ಲಿ ಇಬ್ಬರು ಶಿಕ್ಷಕರನ್ನು ಅಮಾನತುಗೊಳಿಸಿ ಆದೇಶಿದ್ದಾರೆ.

ಇನ್ನೊಂದೆಡೆ ಖಜೂರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ವೀರಮ್ಮ ಕಲ್ಲಪ್ಪ ಸರ್ಕಾರದ ಮಹತ್ತರ ಯೋಜನೆಗಳನ್ನು ಅನುಷ್ಠಾನ ಗೊಳಿಸುವಲ್ಲಿ ವಿಫಲವಾಗಿದ್ದಾರೆ. ಹೀಗಾಗಿ ಇವರ ಮೇಲೆ ಕರ್ತವ್ಯ ನಿರ್ಲಕ್ಷ್ಯತೆ ಅಂಶಗಳ ಆಧಾರದ ಮೇರೆಗೆ ಶಿಕ್ಷಣ ಇಲಾಖೆ ಉಪನಿರ್ದೇಶಕರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಈ ಹಿಂದೆ ಮುಖ್ಯ ಶಿಕ್ಷಕಿ ವೀರಮ್ಮ ವಿರುದ್ಧ ನಮ್ಮ ಕರುನಾಡು ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಗಂಗಾಧರ ಕುಂಬಾರ, ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಬಸವರಾಜ ಎಸ್‌. ಕೊರಳ್ಳಿ ನೀಡಿದ ದೂರು ಮತ್ತು ಸಹಾಯಕ ನಿರ್ದೇಶಕರು, ಅಕ್ಷರ ದಾಸೋಹ ಅವರು ಶಿಕ್ಷಣಾಧಿಕಾರಿಗೆ ಸಲ್ಲಿಸಿದ ವರದಿ ಅನ್ವಯ ಶಿಕ್ಷಣಾಧಿಕಾರಿಗಳು ಸಲ್ಲಿಸಿದ ಅಂತಿಮ ವರದಿ ಆಧರಿಸಿ ಶಿಕ್ಷಕಿಯನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Udayavani