Kannada News Now

1.8M Followers

BREAKING NEWS: '15,000 ಶಿಕ್ಷಕರ ನೇಮಕಾತಿ ಪರೀಕ್ಷೆ'ಗೆ ಮಾರ್ಗಸೂಚಿ ಪ್ರಕಟ: ಈ ನಿಮಯ ಪಾಲನೆ ಕಡ್ಡಾಯ

13 May 2022.3:08 PM

ವರದಿ: ವಸಂತ ಬಿ ಈಶ್ವರಗೆರೆ

ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮದ ( PSI Recruitment Scam ) ನಡುವೆಯೂ ನಡೆಯುತ್ತಿರುವಂತ 15,000 ಶಿಕ್ಷಕರ ನೇಮಕಾತಿಗೆ ( Teacher Recruitment ) ಸಂಬಂಧಿಸಿದಂತ ಸ್ಪರ್ಧಾತ್ಮಕ ಪರೀಕ್ಷೆಯನ್ನು ( Commutative Exam ) ಕಟ್ಟು ನಿಟ್ಟಾಗಿ ಯಾವುದೇ ಅಕ್ರಮ ನಡೆಯದಂತೆ ನಡೆಸಲು ಸರ್ಕಾರ ನಿರ್ಧರಿಸಿದೆ.

ಈ ನಿಟ್ಟಿನಲ್ಲಿ ಮಹತ್ವದ ಕ್ರಮಗಳನ್ನು ಕೈಗೊಂಡಿರುವಂತ ಸಾರ್ವಜನಿಕ ಶಿಕ್ಷಣ ಇಲಾಖೆಯು, ಮೇ.21, 22ರಂದು ನಡೆಯಲಿರುವಂತ ಶಿಕ್ಷಕರ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಮಾರ್ಗಸೂಚಿಯನ್ನು ಪ್ರಕಟಿಸಿದೆ.

ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದ್ದು, ಅಭ್ಯರ್ಥಿಯು ಪರೀಕ್ಷಾ ಕೇಂದ್ರಕ್ಕೆ ಪ್ರತೀ ಅಧಿವೇಶನದ ಪರೀಕ್ಷಾ ಪ್ರಾರಂಭದ ಅವಧಿಗಿಂತ ಒಂದು ಗಂಟೆ ಮುಂಚಿತವಾಗಿ ಹಾಜರಿರುವುದು ಕಡ್ಡಾಯವಾಗಿದೆ. ಪರೀಕ್ಷೆಯನ್ನು ಅತ್ಯಂತ ಕಟ್ಟುನಿಟ್ಟಾಗಿ ನಡೆಸಲಾಗುವುದು .ಎಲ್ಲಾ ಅಭ್ಯರ್ಥಿಗಳನ್ನು ಪರೀಕ್ಷಾ ಕೇಂದ್ರದಲ್ಲಿ ಎರಡು ಬಾರಿ ತಪಾಸಣೆಗೆ ಒಳಪಡಿಸಲಾಗುವುದು. ಮೊದಲ ಬಾರಿ ಪರೀಕ್ಷಾಕೇಂದ್ರದಆವರಣಕ್ಕೆ ಪ್ರವೇಶಿಸುವಾಗ ಪೊಲೀಸ್ ಸಿಬ್ಬಂದಿಯವರಿಂದ ತಪಾಸಣೆ ನಡೆಯಲಿದೆ. ಎರಡನೇ ಬಾರಿ ಪರೀಕ್ಷಾ ಕೊಠಡಿಗೆ ಪ್ರವೇಶಿಸುವ ಮುನ್ನ ಕೊಠಡಿ ಮೇಲ್ವಿಚಾರಕರಿಂದ ತಪಾಸಣೆ ಮಾಡಲಾಗುತ್ತದೆ ಎಂದು ತಿಳಿಸಿದೆ.

ಪತಿಯ ಸಾವಿನ ನೋವಲ್ಲೂ ಸಾರ್ಥಕತೆ ಮೆರೆದ ಗರ್ಭಿಣಿ ಪತ್ನಿ: ಗಂಡನ ಅಂಗಾಗ ದಾನ ಮಾಡಿ, 8 ಮಂದಿಗೆ ಜೀವದಾನ | Donates Organs

ಈ ಕೆಳಕಂಡಂತಿವೆ 15,000 ಶಿಕ್ಷಕರ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಯ ಮಾರ್ಗಸೂಚಿ ಕ್ರಮಗಳು

  • ದಿನಾಂಕ 21-05-2022ರಂದು ಅಭ್ಯರ್ಥಿಗಳು ಕೇಂದ್ರಕ್ಕೆ ಮೊದಲ ಅಧಿವೇಶನ ಸಮಯದ ಪರೀಕ್ಷೆಗೆ ಬೆಳಿಗ್ಗೆ 9 ಗಂಟೆಗೆ ಹಾಜರಾಗಬೇಕು. 2ನೇ ಅವಧಿಯ ಪರೀಕ್ಷೆಗೆ 1.30ಕ್ಕೆ ಹಾಜರಾಗಬೇಕು. ದಿನಾಂಕ 22-05-2022ರ 3ನೇ ಅಧಿವೇಶನ ಪರೀಕ್ಷೆಗೆ ಬೆಳಿಗ್ಗೆ 9 ಗಂಟೆಗೆ, 4ನೇ ಅಧಿವೇಶನ ಪರೀಕ್ಷೆಗೆ 2.30ರೊಳಗೆ ಪರೀಕ್ಷಾ ಕೇಂದ್ರದೊಳಗೆ ಹಾಜರಾಗುವುದು ಕಡ್ಡಾಯವಾಗಿದೆ.
  • ಕೈ ಗಡಿಯಾರ, ಮೊಬೈಲ್, ಕ್ಯಾಲ್‌ಕ್ಯುಲೇಟರ್, ಪೇಜರ್, ಬ್ಲೂಟೂತ್ ಹಾಗೂ ಇತರೆ ಎಲೆಕ್ಟಾçನಿಕ್ಸ್ ವಸ್ತುಗಳನ್ನು ಮತ್ತು ಲಾಗ್‌ಟೇಬಲ್, ಬಿಳಿ ಫ್ಲೂಯಿಡ್ ಬೆಂಕಿಪೊಟ್ಟಣ ಅಥವಾ ಸಿಗರೇಟ್ ಲೈಟರ್ ಮುಂತಾದ ವಸ್ತುಗಳನ್ನು ಪರೀಕ್ಷಾ ಕೊಠಡಿಯೊಳಗೆ ತರುವುದನ್ನು ನಿಷೇಧಿಸಲಾಗಿದೆ. ಈ ಬಗ್ಗೆ ಪರೀಕ್ಷಾ ಸಿಬ್ಬಂದಿಯ ತಪಾಸಣೆಗೆ ಒಳಪಡಿಸಲಾಗುತ್ತದೆ.
  • ಅಭ್ಯರ್ಥಿಯು ಪರೀಕ್ಷಾ ಪ್ರವೇಶ ಪತ್ರವನ್ನು ಸಾಕಷ್ಟು ಮುಂಚಿತವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವೆಬ್‌ಸೈಟ್ ನಿಂದ ಡೌನ್‌ಲೋಡ್ ಮಾಡಿಕೊಂಡು, ತಮಗೆ ಹಂಚಿಕೆಯಾಗಿರುವ ಪರೀಕ್ಷಾ ಕೇಂದ್ರದ ವಿಳಾಸವನ್ನು ತಿಳಿದು, ಕನಿಷ್ಟ ಒಂದು ದಿನ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ಸರಿಯಾದ ವಿಳಾಸವನ್ನು ಖಾತ್ರಿಪಡಿಸಿಕೊಳ್ಳತಕ್ಕದ್ದು.
  • ಒಂದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸಿರುವ ಅಭ್ಯರ್ಥಿಗಳು, ತಾನು ಅಂತಿಮವಾಗಿ ಪರೀಕ್ಷೆ ಬರೆಯಲು ಇಚ್ಚಿಸುವ ಜಿಲ್ಲೆಗೆ ಸಲ್ಲಿಸಿರುವ ಆನ್‌ಲೈನ್ ಅರ್ಜಿಯ ಸಂಖ್ಯೆ/ನೋಂದಣಿ ಸಂಖ್ಯೆಯಲ್ಲಿಯೇ (ಒಂದೇ ಅರ್ಜಿ/ನೋಂದಣಿ ಸಂಖ್ಯೆಯಲ್ಲಿಯೇ ನೇಮಕಾತಿ ಪರೀಕ್ಷೆಯ ಎಲ್ಲಾ ಪತ್ರಿಕೆಗಳನ್ನು ಉತ್ತರಿಸುವುದು ಕಡ್ಡಾಯವಾಗಿರುತ್ತದೆ.) ಪರೀಕ್ಷೆಯನ್ನು ಬರೆಯಬೇಕು
  • ಪರೀಕ್ಷಾ ಕೇಂದ್ರದ ವಿಳಾಸಕ್ಕೆ ಸಂಬಂಧಿಸಿದಂತೆ ವಿವರ ಬೇಕಾದಲ್ಲಿ ತಾವು ಪರೀಕ್ಷೆ ಬರೆಯಲಿರುವ ಜಿಲ್ಲೆಯ ನೋಡಲ್ ಅಧಿಕಾರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ಪಡೆಯಬಹುದು. ನೋಡಲ್ ಅಧಿಕಾರಿಯ ದೂರವಾಣಿ ಸಂಖ್ಯೆ ವೆಬ್‌ಸೈಟ್‌ನಲ್ಲಿ ಲಭ್ಯವಿರಿಸಿದೆ.
  • ಅಭ್ಯರ್ಥಿಯು ಪರೀಕ್ಷಾ ಕೇಂದ್ರಕ್ಕೆ ಪ್ರತೀ ಅಧಿವೇಶನದ ಪರೀಕ್ಷಾ ಪ್ರಾರಂಭದ ಅವಧಿಗಿಂತ ಒಂದು ಗಂಟೆ ಮುಂಚಿತವಾಗಿ ಹಾಜರಿರುವುದು ಕಡ್ಡಾಯ.
  • ಪರೀಕ್ಷೆಗೆ ಹಾಜರಾಗುವ ಪ್ರತಿ ಅಭ್ಯರ್ಥಿಯು ಕಡ್ಡಾಯವಾಗಿ ಮುಖಗವಸು (ಫೇಸ್ ಮಾಸ್ಕ್) ಧರಿಸಿರಬೇಕು.
  • ಪ್ರತಿ ಅಭ್ಯರ್ಥಿಯು ತನ್ನ ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳುವುದು.
  • ಪ್ರತಿ ಅಭ್ಯರ್ಥಿಯು ತಮ್ಮದೇ ಆದ ನೀರಿನ ಬಾಟಲಿಗಳನ್ನು ತಪ್ಪದೇ ತರುವುದು
  • ಅಭ್ಯರ್ಥಿಯು ಪರೀಕ್ಷಾ ಕೇಂದ್ರ ಹಾಗೂ ಕೊಠಡಿಯಲ್ಲಿ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಕಾಯ್ದುಕೊಳ್ಳುವುದು.
  • ಪರೀಕ್ಷೆ ಪ್ರಾರಂಭವಾಗುವ 30 ನಿಮಿಷಗಳ ಮೊದಲು ಅಭ್ಯರ್ಥಿಗಳಿಗೆ ಪರೀಕ್ಷಾ ಕೊಠಡಿಗೆ ಪ್ರವೇಶವನ್ನುನೀಡಲಾಗುವುದು.
  • ಕೊಠಡಿಯನ್ನು ಪ್ರವೇಶಿಸಿದ ನಂತರ, ಅಭ್ಯರ್ಥಿಗಳು ಪ್ರವೇಶ ಪತ್ರದಲ್ಲಿರುವ ತಮ್ಮ ಅರ್ಜಿ ಸಂಖ್ಯೆಯನ್ನು ನಮೂದಿಸಿರುವ ಡೆಸ್ಕ್ನಲ್ಲಿಯೇ ಕುಳಿತುಕೊಳ್ಳುವುದು.
  • ಯಾವುದೇ ಕಾರಣಕ್ಕೂ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರ ಅಥವಾ ಕೊಠಡಿಯ ಪಕ್ಕ, ಪರೀಕ್ಷೆಯ ಮೊದಲಾಗಲೀ ಅಥವಾ ನಂತರದಲ್ಲಾಗಲಿ ಗುಂಪು ಸೇರುವಂತಿಲ್ಲ.
  • ಪ್ರವೇಶ ಪತ್ರವಿಲ್ಲದ ಯಾವುದೇ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶವಿರುವುದಿಲ್ಲ. ಈ ಬಗ್ಗೆ ಯಾವುದೇ ವಿನಾಯಿತಿ ಇರುವುದಿಲ್ಲ

ಪರೀಕ್ಷಾ ಕೊಠಡಿ ಪ್ರವೇಶಿಸಿದ ನಂತರ ಪರೀಕ್ಷೆ ಬರೆಯಲು ಪ್ರಾರಂಭಿಸುವುದಕ್ಕೆ ಪೂರ್ವದಲ್ಲಿ

1. ಪರೀಕ್ಷೆ ಪ್ರಾರಂಭವಾಗುವುದಕ್ಕಿಂತ 30 ನಿಮಿಷ ಮುಂಚಿತವಾಗಿ ಪ್ರವೇಶ ಪತ್ರದೊಂದಿಗೆ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಗೆಪ್ರವೇಶಿಸುವುದು.
2. ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರದಲ್ಲಿರುವ ಅರ್ಜಿ/ನೋಂದಣಿ ಸಂಖ್ಯೆ ನಮೂದಿಸಿರುವ ಆಸನದಲ್ಲಿ ಕುಳಿತಿರುವ ಬಗ್ಗೆ ಖಾತರಿಪಡಿಸಿಕೊಳ್ಳುವುದು.
3. ಪೂರ್ವ ಮುದ್ರಿತ ಓ.ಎಂ.ಆರ್ ಮತ್ತು ವಿವರಣಾತ್ಮಕ ಉತ್ತರ ಪತ್ರಿಕೆ ಪುಸ್ತಿಕೆಯಲ್ಲಿ ಅಭ್ಯರ್ಥಿಯ ಅರ್ಜಿಯಲ್ಲಿನ ಮುಖ್ಯ ಅಂಶಗಳು ಪೂರ್ವ ಮುದ್ರಿತವಾಗಿರುವುದರಿಂದ ತನ್ನದೇ ಓ.ಎಂ.ಆರ್. ಮತ್ತು ವಿವರಣಾತ್ಮಕ ಉತ್ತರ ಪತ್ರಿಕೆ ಪುಸ್ತಿಕೆಯ ಎಂಬುದನ್ನು ಖಾತ್ರಿ ಪಡಿಸಿಕೊಳ್ಳುವುದು.
4. ಅಭ್ಯರ್ಥಿಗಳು ಪೂರ್ವ ಮುದ್ರಿತ ಓ.ಎಂ.ಆರ್ ಶೀಟ್‌ನಲ್ಲಿಮತ್ತು ವಿವರಣಾತ್ಮಕ ಉತ್ತರ ಪತ್ರಿಕೆ ಪುಸ್ತಿಕೆಯಲ್ಲಿ ತಮ್ಮ ಅರ್ಜಿಸಂಖ್ಯೆಯನ್ನು ನಿಗದಿತ ಅಂಕಣದಲ್ಲಿ ತುಂಬಿ ಶೇಡ್ ಮಾಡುವುದು ಹಾಗೂ ಈಗಾಗಲೇ ಓ.ಎಂ.ಆರ್ ಶೀಟ್‌ನಲ್ಲಿ ಮತ್ತು ವಿವರಣಾತ್ಮಕ ಉತ್ತರ ಪತ್ರಿಕೆ ಪುಸ್ತಿಕೆಯಲ್ಲಿ ಮುದ್ರಿತವಾಗಿರುವ ಅರ್ಜಿ/ನೋಂದಣಿ ಸಂಖ್ಯೆ ಹಾಗೂ ತಾವು ¨ರೆದಿರುವ ಅರ್ಜಿ/ನೋಂದಣಿ ಸಂಖ್ಯೆ ಒಂದೇ ಎಂಬುದನ್ನು ಖಾತರಿ ಪಡಿಸಿಕೊಳ್ಳುವುದು.
5. ಪೂರ್ವ ಮುದ್ರಿತ ಓ.ಎಂ.ಆರ್ ಸಹಿತ ಪ್ರಶ್ನೆಪತ್ರಿಕೆ ಪುಸ್ತಿಕೆಯನ್ನು ಸ್ವೀಕರಿಸಿದ ನಂತರ ಓ.ಎಂ.ಆರ್.ನ ಕ್ರಮಸಂಖ್ಯೆ ಪ್ರಶ್ನೆಪತ್ರಿಕೆ ಪುಸ್ತಿಕೆಯ ಕ್ರಮ ಸಂಖ್ಯೆ ಎರಡೂ ಒಂದೇ ಆಗಿರುವುದನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳುವುದು. ಒಂದೊಮ್ಮೆ ಬೇರೆ ಓ.ಎಂ.ಆರ್ ಸಹಿತ ಪ್ರಶ್ನೆಪತ್ರಿಕೆ ಪುಸ್ತಿಕೆಯನ್ನು ನೀಡಿದ್ದಲ್ಲಿ ನಿಮ್ಮದೇ ಪೂರ್ವಮುದ್ರಿತ ಓ.ಎಂ.ಆರ್ ಸಹಿತ ಪ್ರಶ್ನೆಪತ್ರಿಕೆ ಪುಸ್ತಿಕೆಯನ್ನು ಪಡೆದುಕೊಂಡ ನಂತರವೇ ಉತ್ತರಿಸಲು ಪ್ರಾರಂಭಿಸುವುದು.
6. ಪೂರ್ವಮುದ್ರಿತ ಓ.ಎಂ.ಆರ್ ಸಂಖ್ಯೆ ಮತ್ತು ಪ್ರಶ್ನೆಪತ್ರಿಕೆ ಪುಸ್ತಿಕೆ ಒಂದೇ ಆಗದಿದ್ದಲ್ಲಿ ಅಂತಹ ಓ.ಎಂ.ಆರ್ ಉತ್ತರಪತ್ರಿಕೆಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸಲಾಗುವುದಿಲ್ಲ. ಮುಂದಿನ ಆಗುಹೋಗುಗಳಿಗೆ ಅಭ್ಯರ್ಥಿಗಳೇ ಹೊಣೆಗಾರರಾಗುತ್ತಾರೆ.
7. ಪೂರ್ವಮುದ್ರಿತ ಓ.ಎಂ.ಆರ್.ನಲ್ಲಿ ಅಭ್ಯರ್ಥಿಯ ಅರ್ಜಿ ಸಂಖ್ಯೆಯನ್ನು ನಮೂದಿಸಿ, ನೀಡಿರುವ ನಿಗದಿತ ಅಂಕಣದಲ್ಲಿ ಅರ್ಜಿ ಸಂಖ್ಯೆಯನ್ನು ತಪ್ಪದೇ ತುಂಬಿ ಶೇಡ್ ಮಾಡುವುದು (ಓ.ಎಂ.ಆರ್ ನಲ್ಲಿ ಪೂರ್ವ ಮುದ್ರಿತವಾಗಿರುವ ಅರ್ಜಿಸಂಖ್ಯೆ ಮತ್ತು ಪ್ರವೇಶ ಪತ್ರದಲ್ಲಿರುವ ಅರ್ಜಿಸಂಖ್ಯೆ ಎರಡನ್ನೂ ನೋಡಿ ತಾಳೆಯಾಗುವಂತೆ ನಮೂದಿಸಬೇಕು)ಪೂರ್ವ ಮುದ್ರಿತ ಅರ್ಜಿಸಂಖ್ಯೆ ಹಾಗೂ ಪ್ರವೇಶ ಪತ್ರದಲ್ಲಿರುವ ಅರ್ಜಿಸಂಖ್ಯೆ ಒಂದೇ ಆಗದಿದ್ದಲ್ಲಿ ಅಂತಹ ಓ.ಎಂ.ಆರ್ ಉತ್ತರಪತ್ರಿಕೆಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸಲಾಗುವುದಿಲ್ಲ. ಮುಂದಿನ ಆಗುಹೋಗುಗಳಿಗೆ ಅಭ್ಯರ್ಥಿಗಳೇ ನೇರ ಹೊಣೆಗಾರರಾಗುತ್ತಾರೆ.
8. ನಿಮ್ಮ ಪ್ರವೇಶ ಪತ್ರದ ಹಿಂಭಾಗದಲ್ಲಿ ಮುದ್ರಿತವಾಗಿರುವ ಬೆಲ್ ವೇಳಾಪಟ್ಟಿಯ ಬಗ್ಗೆ ಗಮನ ಹರಿಸುವುದು.
9. ಪೂರ್ವ ಮುದ್ರಿತ ಓ.ಎಂ.ಆರ್.ನ ಕೆಳಗೆ ನಿಗದಿಪಡಿಸಿರುವ ಚೌಕದಲ್ಲಿ ಅಭ್ಯರ್ಥಿಯು ಸಹಿ ಮಾಡಬೇಕು (ಸಹಿಯು ಅರ್ಜಿಯಲ್ಲಿ ಹಾಕಿರುವ ಸಹಿಗೆ ಹೋಲಿಕೆಯಾಗಬೇಕು) ಮತ್ತು ಎಡಗೈ ಹೆಬ್ಬೆರಳಿನ ಗುರುತನ್ನು ಸ್ಪಷ್ಟವಾಗಿ ಒತ್ತಬೇಕು. ನಂತರ ತಮ್ಮ ಕೊಠಡಿ ಮೇಲ್ವಿಚಾರಕರಿಂದ ಪೂರ್ವ ಮುದ್ರಿತ ಓ.ಎಂ.ಆರ್.ನಲ್ಲಿ ಸಹಿಯನ್ನು ಮಾಡಿಸಿಕೊಳ್ಳಬೇಕು. ಅಭ್ಯರ್ಥಿಗಳ ಸಹಿ ಮತ್ತು ಹೆಬ್ಬೆಟ್ಟಿನ ಗುರುತು ಹಾಗೂ ಕೊಠಡಿ ಮೇಲ್ವಿಚಾರಕರ ಸಹಿ ಇಲ್ಲದಿರುವ ಓ.ಎಂ.ಆರ್.ಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸಲಾಗುವುದಿಲ್ಲ.

BIG NEWS: ಇನ್ಮುಂದೆ ರಾಜ್ಯದಲ್ಲಿ 'ಒತ್ತಾಯದ ಮತಾಂತರ'ಕ್ಕೆ 'ಹತ್ತು ವರ್ಷ ಜೈಲು' ಫಿಕ್ಸ್: ಕಾಯ್ದೆಯಲ್ಲಿ ಏನಿದೆ.? ಇಲ್ಲಿದೆ ಸಂಪೂರ್ಣ ಮಾಹಿತಿ

10. ನಾಮಿನಲ್ ರೋಲ್‌ನಲ್ಲಿ ಅಭ್ಯರ್ಥಿಗಳು ತಮ್ಮ ಹೆಸರಿನ ಮುಂದೆಯೇ ಸಹಿ ಮಾಡಬೇಕು ಹಾಗೂ ಎಡಗೈ ಹೆಬ್ಬೆರಳಿನ ಗುರುತನ್ನು ಸ್ಪಷ್ಟವಾಗಿ ಒತ್ತಬೇಕು. ಎರಡನೇ ಬಾರಿ ಸಹಿ ಮಾಡದ ಪಕ್ಷದಲ್ಲಿ ಅಂತಹ ಅಭ್ಯರ್ಥಿಗಳು ಪೂರ್ವ ಮುದ್ರಿತ ಓ.ಎಂ.ಆರ್/ವಿವರಣಾತ್ಮಕ ಉತ್ತರ ಪತ್ರಿಕೆ ಸಲ್ಲಿಸಿಲ್ಲ ಎಂದು ಭಾವಿಸಿ ಮೌಲ್ಯ ಮಾಪನಕ್ಕೆ ಪರಿಗಣಿಸಲಾಗುವುದಿಲ್ಲ. ಇದಕ್ಕೆ ಸ್ವತಃ ಅಭ್ಯರ್ಥಿಗಳೇ ಜವಾಬ್ದಾರರಾಗಿರುತ್ತಾರೆ.
11. ಅಂತಿಮವಾಗಿ ಅಭ್ಯರ್ಥಿಯು ಉತ್ತರಪತ್ರಿಕೆಯನ್ನು ಕೊಠಡಿ ಮೇಲ್ವಿಚಾರಕರಿಗೆ ಒಪ್ಪಿಸಿದ ನಂತರವೇ ಕಾರ್ಬನ್‌ಲೆಸ್ ಪ್ರತಿಯನ್ನು ಮತ್ತು ಪ್ರಶ್ನೆಪತ್ರಿಕೆಯನ್ನು ತೆಗೆದುಕೊಂಡು ಪರೀಕ್ಷಾ ಕೊಠಡಿಯಿಂದ ಹೋಗತಕ್ಕದ್ದು.

ಪರೀಕ್ಷಾ ಅವಧಿ ಹಾಗೂ ಸಮಯ

  • ಅಧಿವೇಶನ-1 ದಿನಾಂಕ: 21/05/2022 ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 12.30 ಗಂಟೆ(ಪೇಪರ್-1)
    ಸಾಮಾನ್ಯ ಅಧ್ಯಯನ (ಬಹು ಆಯ್ಕೆ ಪ್ರಶ್ನೆಗಳು)
  • ಅಧಿವೇಶನ-2 ದಿನಾಂಕ: 21/05/2022 ಮಧ್ಯಾಹ್ನ 2.30 ರಿಂದ 5.30 ಗಂಟೆ (ಪೇಪರ್-2) ಆಂಗ್ಲ ಭಾಷಾ ಹುದ್ದೆಗೆ
    ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ (2.30 ರಿಂದ 3.30 ರವರೆಗೆ ಬಹು ಆಯ್ಕೆ ಪರೀಕ್ಷೆ 3.30 ರಿಂದ 5.30 ರವರೆಗೆ
    ವಿವರಣಾತ್ಮಕ ಪರೀಕ್ಷೆ)
  • ಅಧಿವೇಶನ-3 ದಿನಾಂಕ: 22/05/2022 ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 01.00 ಗಂಟೆ (ಪೇಪರ್-2)
    ಗಣಿತ ಮತ್ತು ವಿಜ್ಞಾನ / ಜೀವ ವಿಜ್ಞಾನ / ಸಮಾಜ ಪಾಠಗಳು ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ
    (10.00 ರಿಂದ 11.00 ರವರೆಗೆ ಬಹು ಆಯ್ಕೆ ಪರೀಕ್ಷೆ 11.00 ರಿಂದ 1.00 ರವರೆಗೆ ವಿವರಣಾತ್ಮಕ ಪರೀಕ್ಷೆ)
  • ಅಧಿವೇಶನ-4 ದಿನಾಂಕ: 22/05/2022 ಮಧ್ಯಾಹ್ನ 3.00 ರಿಂದ 05.00 ರವರೆಗೆ (ಪೇಪರ್-3) (ವಿವರಣಾತ್ಮಕ ಪರೀಕ್ಷೆ)
    ಅರ್ಜಿ ಸಲ್ಲಿಸಿದ ಹುದ್ದೆಯ ಮಾಧ್ಯಮದ ಭಾಷಾ ಸಾಮರ್ಥ್ಯ ಪರೀಕ್ಷೆ

ಸಾಮಾನ್ಯ ಸೂಚನೆಗಳು
12. ಪರೀಕ್ಷಾ ಗೌಪ್ಯತೆಗೆ ಮತ್ತು ನಿಯಮಗಳಿಗೆ ಚ್ಯುತಿ ಬರದಂತೆ ಪರೀಕ್ಷೆ ಬರೆಯುವುದು.
13. ಪರೀಕ್ಷಾ ಅವಧಿಯಲ್ಲಿ ಕೊನೆಯ 5 ನಿಮಿಷ ಉಳಿದಿರುವ ಬಗ್ಗೆ ಎಚ್ಚರದ ಗಂಟೆಯನ್ನು ಗಮನಿಸುವುದು.
ಅಭ್ಯರ್ಥಿಯು ಉತ್ತರ ಪತ್ರಿಕೆಯನ್ನು ಒಪ್ಪಿಸುವಾಗ ನಾಮಿನಲ್ ರೋಲ್‌ನಲ್ಲಿ ಕಡ್ಡಾಯವಾಗಿ ಎರಡನೇ ಬಾರಿ ಸಹಿ ಮಾಡುವುದು
14. ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರದಲ್ಲಿ ನಮೂದಿಸಿರುವ ವಿಷಯ/ಮಾಧ್ಯಮದ ಪ್ರಶ್ನೆಪತ್ರಿಕೆಯನ್ನೇ ಉತ್ತರಿಸುವುದು ಕಡ್ಡಾಯವಾಗಿರುತ್ತದೆ.
15. ಪೂರ್ವ ಮುದ್ರಿತ ಓ.ಎಂ.ಆರ್. ನಲ್ಲಿ ಒಮ್ಮೆ ಬರೆದಿರುವುದನ್ನು ಪುನಃ ಬದಲಾಯಿಸುವುದು, ಚಿತ್ತು ಮಾಡುವುದು, ಬಿಳಿ ಫ್ಲೂಯಿಡ್ ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ.
16. ಉತ್ತರಪತ್ರಿಕೆಯ ಮೇಲೆ ಯಾವುದೇ ಕಚ್ಚಾ ಕಾರ್ಯ(ಖough ತಿoಡಿಞ) ಮಾಡಬಾರದು ಹಾಗೂ ಯಾವುದೇ ವರ್ಕ್ ಶೀಟ್‌ನ್ನು ಓ.ಎಂ.ಆರ್ ಜೊತೆ ಕಟ್ಟಬಾರದು. (ಲಗತ್ತಿಸಬಾರದು).
17. ಪರೀಕ್ಷಾ ಕೊಠಡಿಯೊಳಕ್ಕೆ ಉತ್ತರಿಸಲು ಬೇಕಾದ ನೀಲಿ ಅಥವಾ ಕಪ್ಪು ಶಾಯಿಯ ಬಾಲ್‌ಪಾಯಿಂಟ್ ಪೆನ್ ಮತ್ತು ಗಣಿತಕ್ಕೆ ಸಂಬಂಧಿಸಿದ ಜಾಮೀಟ್ರಿ ಪರಿಕರಗಳನ್ನು ಮಾತ್ರ ಪ್ರವೇಶ ಪತ್ರದೊಂದಿಗೆ ತೆಗೆದುಕೊಂಡು ಹೋಗಲು ಅವಕಾಶವಿರುತ್ತದೆ.
18. ಕ್ಯಾಲ್‌ಕ್ಯುಲೇಟರ್, ಮೊಬೈಲ್, ಪೇಜರ್, ಬ್ಲೂಟೂತ್ ಹಾಗೂ ಇತರೆ ಎಲೆಕ್ಟಾçನಿಕ್ಸ್ ವಸ್ತುಗಳನ್ನು ಮತ್ತು ಲಾಗ್‌ಟೇಬಲ್, ಬಿಳಿ ಫ್ಲೂಯಿಡ್ ಬೆಂಕಿಪೊಟ್ಟಣ ಅಥವಾ ಸಿಗರೇಟ್ ಲೈಟರ್ ಮುಂತಾದ ವಸ್ತುಗಳನ್ನು ಪರೀಕ್ಷಾ ಕೊಠಡಿಯೊಳಗೆ ತರುವುದನ್ನು ನಿಷೇಧಿಸಲಾಗಿದೆ. ಈ ಬಗ್ಗೆ ಪರೀಕ್ಷಾ ಸಿಬ್ಬಂದಿಯು ತಪಾಸಣೆಗೆ ಒಳಪಡುವುದು.

19. ಯಾವುದೇ ಅಭ್ಯರ್ಥಿಯು ನಕಲು ಮಾಡುವುದು ಅಥವಾ ಪೂರ್ವ ಮುದ್ರಿತ ಓ.ಎಂ.ಆರ್ ಬೇರೆಯವರಿಗೆ ಕೊಡಲು ಪ್ರಯತ್ನಿಸುವುದು, ಮುಂತಾದವುಗಳನ್ನು ಪರೀಕ್ಷಾ ಕೊಠಡಿಯಲ್ಲಿ ಕಡ್ಡಾಯವಾಗಿ ನಿಷೇಧಿಸಲಾಗಿದೆ.
20. ಪ್ರತಿ ಅಭ್ಯರ್ಥಿಯು ಮುಖ್ಯ ಅಧೀಕ್ಷಕರು ಅಥವಾ ಕೊಠಡಿ ಮೇಲ್ವಿಚಾರಕರು ನೀಡಿದ ಸೂಚನೆಗಳಿಗೆ / ನಿಯಮಗಳಿಗೆ ಬದ್ಧರಾಗಿರಬೇಕು. ಹಾಗೂ ಅಭ್ಯರ್ಥಿಗಳ ಬಗ್ಗೆ ಏನಾದರೂ ಹೆಚ್ಚಿನ ಮಾಹಿತಿಯನ್ನು ಮುಖ್ಯ ಅಧೀಕ್ಷಕರು ಅಥವಾ ಕೊಠಡಿ ಮೇಲ್ವಿಚಾರಕರು ಪಡೆಯಬಯಸಿದಲ್ಲಿ ಅಭ್ಯರ್ಥಿಗಳು ಆ ಮಾಹಿತಿಯನ್ನು ನೀಡಲು ಸಿದ್ಧರಿರಬೇಕು.
21. ಪರೀಕ್ಷಾ ಕೊಠಡಿಯಲ್ಲಿ ನಿಶ್ಯಬ್ಧತೆ, ಪರೀಕ್ಷಾ ಶಿಸ್ತನ್ನು ಮತ್ತು ಗೌಪ್ಯತೆಯನ್ನು ಕಾಪಾಡಿಕೊಳ್ಳುವುದು. ಅಭ್ಯರ್ಥಿಯು ಪರೀಕ್ಷಾ ಸೂಚನೆ / ನಿಯಮಗಳನ್ನು ಪಾಲಿಸುವಲ್ಲಿ ವಿಫಲರಾದರೆ ಅಥವಾ ನಿಯಮಗಳನ್ನು ಉಲ್ಲಂಘಿಸಿದ ಪಕ್ಷದಲ್ಲಿ ಅವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು.

ವಿಶೇಷ ಸೂಚನೆ

22. ವಿಶೇಷಚೇತನ ಅಭ್ಯರ್ಥಿಗಳಿಗೆ ಪ್ರತ್ಯೇಕ ಕೊಠಡಿಯನ್ನು ಹಂಚಿಕೆ ಮಾಡಲಾಗಿದ್ದು, ನಿಯಮಾನುಸಾರ ನೆಲಮಹಡಿಯಲ್ಲಿ ರ‍್ಯಾಂಪ್ ಸೌಲಭ್ಯವಿರುವ) ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶವಿರುತ್ತದೆ.
23. ವಿಶೇಷಚೇತನ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಅಂಗವಿಕಲತೆಯ ಪ್ರಮಾಣಪತ್ರವನ್ನಾಧರಿಸಿ ಪರೀಕ್ಷೆ ಬರೆಯಲು ಒಂದು ಗಂಟೆಗೆ
20 ನಿಮಿಷದಂತೆ ಹೆಚ್ಚಿನ ಕಾಲಾವಕಾಶವನ್ನು ನೀಡಲಾಗುವುದು.
24. ಕೋವಿಡ್ ನಿಯಮಗಳ ಅಡಿಯಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ (ಮಾಸ್ಕ್ -ಎನ್95 ಹೊರತುಪಡಿಸಿ) ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು.


Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags