Kannada News Now

1.8M Followers

BIG NEWS: 2021ನೇ ಸಾಲಿನ ಯುಪಿಎಸ್ಸಿ ಪರೀಕ್ಷೆ ಫಲಿತಾಂಶ ಪ್ರಕಟ: ಕರ್ನಾಟಕದ 24 ಅಭ್ಯರ್ಥಿಗಳು ಉತ್ತೀರ್ಣ

30 May 2022.3:11 PM

ನವದೆಹಲಿ: ಇಂದು 2021ನೇ ಸಾಲಿನ ಯುಪಿಎಸ್ಸಿ ( UPSC ) ನಾಗರೀಕ ಸೇವಾ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಈ ಪರೀಕ್ಷೆಯಲ್ಲಿ ಕರ್ನಾಟಕದ 22 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ದಾವಣಗೆರೆಯ ಅವಿನಾಶ್ ಎಂಬುವರು 31ನೇ Rank ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.

ಇವರ ಜೊತೆಗೆ 24 ಕರ್ನಾಟಕದ ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ.

ಕೇಂದ್ರ ಲೋಕಸೇವಾ ಆಯೋಗ (Union Public Service Commission - UPSC) ಇಂದು ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆ 2021 ರ ಅಂತಿಮ ಫಲಿತಾಂಶಗಳನ್ನು ( UPSC Civil Services exam 2021 ) ಮೇ 30ರ ಇಂದು ಪ್ರಕಟಿಸಿದೆ. ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ upsc.gov.in ನಲ್ಲಿ ತಮ್ಮ ಫಲಿತಾಂಶಗಳನ್ನು ವೀಕ್ಷಿಸಬಹುದಾಗಿದೆ. ಇಂದು ಪ್ರಕಟಗೊಂಡಂತ ಯುಪಿಎಸ್ಸಿ ಪರೀಕ್ಷೆ ಫಲಿತಾಂಶದಲ್ಲಿ ದಾವಣಗೆರೆಯ ಅವಿನಾಶ್ 31ನೇ Rank ಪಡೆದು, ಕರ್ನಾಟಕದಲ್ಲೇ ಮೊದಲ ಸ್ಥಾನ ಗಳಿಸಿದ್ದಾರೆ.

ಜೂ.21ರಂದು ಮೈಸೂರಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ: ಸಿದ್ಧತೆ ಬಗ್ಗೆ ಸಿಎಂ ಬೊಮ್ಮಾಯಿ ಜತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಪಿಎಂ ಮೋದಿ

ಇಂದು ಪ್ರಕಟವಾದ ಅಂತಿಮ ಫಲಿತಾಂಶದಲ್ಲಿ ಶ್ರುತಿ ಶರ್ಮಾ ಅಖಿಲ ಭಾರತ ಮಟ್ಟದಲ್ಲಿ 1ನೇ ಸ್ಥಾನ ಪಡೆದಿದ್ದಾರೆ. ಎಲ್ಲಾ ಮೊದಲ ಮೂರು ಸ್ಥಾನಗಳನ್ನು ಈ ವರ್ಷ ಮಹಿಳಾ ಅಭ್ಯರ್ಥಿಗಳು ಪಡೆದಿದ್ದಾರೆ. ಶ್ರುತಿ ಸೇಂಟ್ ಸ್ಟೀಫನ್ಸ್ ಕಾಲೇಜು ಮತ್ತು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿದ್ದು, ಜಾಮಿಯಾ ಮಿಲಿಯಾ ಇಸ್ಲಾಮಿಯಾ ರೆಸಿಡೆನ್ಷಿಯಲ್ ಕೋಚಿಂಗ್ ಅಕಾಡೆಮಿಯಲ್ಲಿ ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆಗೆ ತಯಾರಿ ನಡೆಸಿದ್ದರು.

ಯುಪಿಎಸ್ಸಿ ಸಿಎಸ್‌ಇ ಪೂರ್ವಭಾವಿ ಪರೀಕ್ಷೆಯನ್ನು ಅಕ್ಟೋಬರ್ 10, 2021 ರಂದು ನಡೆಸಲಾಯಿತು. ಪರೀಕ್ಷೆಯ ಫಲಿತಾಂಶಗಳನ್ನು ಅಕ್ಟೋಬರ್ 29 ರಂದು ಬಿಡುಗಡೆ ಮಾಡಲಾಯಿತು. ಮುಖ್ಯ ಪರೀಕ್ಷೆಯನ್ನು ಜನವರಿ 7 ರಿಂದ 16, 2022 ರವರೆಗೆ ನಡೆಸಲಾಯಿತು. ಫಲಿತಾಂಶಗಳನ್ನು ಮಾರ್ಚ್ 17, 2022 ರಂದು ಘೋಷಿಸಲಾಯಿತು. ಏಪ್ರಿಲ್ 5 ರಂದು ಪ್ರಾರಂಭವಾದ ಮತ್ತು ಮೇ 26ರಂದು ಮುಕ್ತಾಯಗೊಂಡ ಪರೀಕ್ಷೆಯ ಕೊನೆಯ ಸುತ್ತಿನ ಸಂದರ್ಶನ ನಡೆಸಲಾಯಿತು.

ಕರ್ನಾಟಕದ 24 ಅಭ್ಯರ್ಥಿಗಳು UPSC ಪರೀಕ್ಷೆಯಲ್ಲಿ ಉತ್ತೀರ್ಣ

  • ಬೆನಕ ಪ್ರಸಾದ್ 92 Rank
  • ನಿಖಿಲ್ ಬಸವಾರಾಜ್ ಪಾಟೀಲ್- 139
  • ಮೆಲ್ವನ್ 118
  • ವಿನಯ್ ಕುಮಾರ್ 151
  • ಚಿತ್ರಂಜನ್ 155
  • ಅಪೂರ್ವ ಬಸೂರ್ 191
  • ಮನೋಜ್ ಹೆಗ್ಡೆ 213
  • ಮುಂಜುನಾಥ್ 219
  • ರಾಜೇಶ್ ಪೊನ್ನಪ್ಪ 22
  • ಹರ್ಷವರ್ಧನ್ 318
  • ಗಜಾನನ ಬಾಳೆ 319
  • ವಿನಯ್ ಕುಮಾರ್ - 352
  • ಕಲ್ಪಶ್ರೀ 291
  • ಕ್ಯೂಮರ್ ಉದ್ದೇನ್ ಖಾನ್ 414
  • ಮೇಘನಾ 425
  • ಚೇತನ ಕೆ 532
  • ರವಿನಂದನ್ 455
  • ಸವಿತಾ 497
  • ಮೊಹ್ಮದ್ ಷರೀಪ್ 479
  • ಸಚಿನ್ 682
  • ಪ್ರಶಾಂತ್ ಕುಮಾರ್ 641
  • ರಾಘವೇಂದ್ರ 649 Rank ಗಳಿಸಿದ್ದಾರೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags