Kannada News Now

1.8M Followers

BREAKING NEWS: 'ರಾಜ್ಯ ಸರ್ಕಾರಿ ನೌಕರ'ರಿಗೆ ಭರ್ಜರಿ ಸಿಹಿಸುದ್ದಿ: ಇದೇ ವರ್ಷ 'ಕೇಂದ್ರ ವೇತನ ಮಾದರಿ' ಜಾರಿ - CM ಬೊಮ್ಮಾಯಿ ಘೋಷಣೆ

30 May 2022.7:48 PM

ಬೆಂಗಳೂರು: ನಾನು ಬಜೆಟ್ ಗೆ ಉತ್ತರಿಸುವಾಗ ಯಡಿಯೂರಪ್ಪ ( BS Yediyurappa ) ಒಂದು ಚೀಟಿ ಕಳುಹಿಸಿದರು. ಕೇಂದ್ರ ವೇತನ ಆಯೋಗವನ್ನು ಇವತ್ತೇ ಘೋಷಣೆ ಮಾಡಬೇಕು ಎಂದು ಸೂಚಿಸಿದ್ದರು. ಆ ಹಿನ್ನಲೆಯಲ್ಲಿಯೇ ಈ ವರ್ಷದಲ್ಲಿ ವೇತನ ಆಯೋಗ ರಚಿಸಿ, ವೇತನ ತಾರತಮ್ಯ ನಿವಾರಿಸುತ್ತೇವೆ.

ರಾಜ್ಯ ಸರ್ಕಾರಿ ನೌಕರರಿಗೂ ( Karnataka Government Employees ) ಕೇಂದ್ರ ವೇತನ ಮಾದರಿ ( Central Pay Model ) ಜಾರಿಗೊಳಿಸೋದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( CM Basavaraj Bommai ) ಘೋಷಿಸಿದರು.

UPSC ಫಲಿತಾಂಶ: ಕರ್ನಾಟಕದ 25 ಮಂದಿ ಆಯ್ಕೆ, ಹೀಗಿದೆ ಅಭ್ಯರ್ಥಿಗಳ ಪಟ್ಟಿ

ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು - 2022ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ಆರೋಗ್ಯ ಸಂಜೀವಿನ ಯೋಜನೆಗೆ ಈಗಾಗಲೇ ಸಚಿವ ಸಂಪುಟದಿಂದ ಅನುಮೋದನೆ ಕೊಟ್ಟಿದ್ದೇವೆ. ಆದಷ್ಟು ಬೇಗ ಆ ಯೋಜನೆಯನ್ನು ಲೋಕಾರ್ಪಣೆ ಮಾಡಲಾಗುತ್ತದೆ. ನಿಮ್ಮ ಆರೋಗ್ಯ ಮುಖ್ಯ. ಸರ್ಕಾರಿ ನೌಕರರ ಆರೋಗ್ಯ ಚೆನ್ನಾಗಿದ್ದರೇ ಉತ್ತಮ ಸೇವೆ ನೀಡಲು ಸಾಧ್ಯ ಎಂದರು.

BREAKING NEWS: 'BBMP ಚುನಾವಣೆ'ಯ ಶೇ.50ರ ಮೀಸಲಾತಿ ತಿದ್ದುಪಡಿಗೆ 'ರಾಜ್ಯ ಸಚಿವ ಸಂಪುಟ' ಅಸ್ತು

ನಾವು ಹತ್ತು ಹಲವಾರು ಯೋಜನೆ ಮಾಡುತ್ತೇವೆ. ಬಜೆಟ್ ಗಳನ್ನು ಮಾಡಿರುತ್ತೇವೆ. ಕಟ್ಟ ಕಡೆಯ ಬಡವರು, ದೀನ, ದಲಿತರಿಗೆ, ರೈತರು, ಮಹಿಳೆಯರಿಗೆ ಆ ಎಲ್ಲಾ ಸೌಲಭ್ಯ ಮುಟ್ಟಬೇಕಾದ್ರೆ ಸರ್ಕಾರಿ ನೌಕರರ ಸೇವೆ ಮುಖ್ಯವಾಗಿದೆ. ನಿಮ್ಮ ಶ್ರಮ ಆ ಬಡವರಿಗೆ ಮುಟ್ಟಿದ್ರೇ.. ಕೇವಲ ನಿಮಗೆ ನಿಮ್ಮ ನೌಕರಿಯಿಂದ ಒಳ್ಳೆಯ ಹೆಸರು ಬರೋದಲ್ಲ, ಪುಣ್ಯ ಪ್ರಾಪ್ತಿ ಕೂಡ ಆಗಲಿದೆ. ನಿಮ್ಮ ಸೇವೆ ಪ್ರಾಮಾಣಿಕವಾಗಿರಲಿ ಎಂದು ತಿಳಿಸಿದರು.


Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags