Oneindia

1.1M Followers

ನಕಲಿ ಅಂಕಪಟ್ಟಿ ಕೊಟ್ಟು ನ್ಯಾಯಾಲಯದಲ್ಲಿ ಕೆಲಸ: ಇಬ್ಬರ ವಜಾ, ನಾಲ್ವರ ವಿರುದ್ಧ ಕೇಸ್

16 Jun 2022.4:42 PM

ಶಿವಮೊಗ್ಗ, ಜೂ16: ನಕಲಿ ಅಂಕಪಟ್ಟಿ ಹಾಜರುಪಡಿಸಿ ನ್ಯಾಯಾಲಯದಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದ ಮಹಿಳೆ ಸೇರಿ ಇಬ್ಬರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಅಲ್ಲದೆ ಕೆಲಸ ಪಡೆಯಲು ಅಡ್ಡದಾರಿ ಹಿಡಿದಿದ್ದರಿಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಎರಡು ಪ್ರಕರಣದಲ್ಲಿ ನಕಲಿ ಅಂಕಪಟ್ಟಿ ಒದಗಿಸಿ ಕೆಲಸ ಪಡೆಯಲಾಗಿತ್ತು. ಈ ಸಂಬಂಧ ಇಬ್ಬರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಇನ್ನು, ನಕಲಿ ಅಂಕಪಟ್ಟಿ ಮೇಲೆ ಸೀಲ್ ಹಾಕಿದ್ದಕ್ಕಾಗಿ ಇಬ್ಬರು ಮುಖ್ಯೋಪಾಧ್ಯಾಯರ ವಿರುದ್ಧ ಪ್ರಕರಣ ದಾಖಲಾಗಿದೆ.

ಪಠ್ಯ ಪರಿಷ್ಕರಣೆ ವಿರುದ್ಧ ಆಕ್ರೋಶ; ತೀರ್ಥಹಳ್ಳಿಯಲ್ಲಿ ಪಾದಯಾತ್ರೆ

ತೀರ್ಥಹಳ್ಳಿ ಜೆಎಂಎಫ್'ಸಿ ನ್ಯಾಯಾಲಯದಲ್ಲಿ ಆದೇಶ ಜಾರಿಕಾರರಾಗಿದ್ದ ತೀರ್ಥಮ್ಮ ಎಂಬುವವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ತೀರ್ಥಮ್ಮ ಕೆಲಸಕ್ಕೆ ಸೇರುವಾಗ 7ನೇ ತರಗತಿ ಪಾಸಾದ ಅಂಕಪಟ್ಟಿಯನ್ನು ಒದಗಿಸಿದ್ದರು. ಮೂಲ ದಾಖಲೆಗಳ ಪರಿಶೀಲನೆ ನಡೆಸಿದಾಗ ಅಂಕಪಟ್ಟಿ ನಕಲು ಎಂದು ತಿಳಿದು ಬಂದಿತ್ತು. ಹಾಗಾಗಿ ತೀರ್ಥಮ್ಮ ಸೇವೆಯಿಂದ ವಜಾಗೊಂಡಿದ್ದರು. ಆದರೆ ಹೈಕೋರ್ಟ್'ಗೆ ಮೇಲ್ಮನವಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಹೈಕೋರ್ಟ್ ತೀರ್ಥಮ್ಮಳನ್ನು ಸೇವೆಯಿಂದ ವಜಾಗೊಳಿಸುವಂತೆ ಆದೇಶಿಸಿದೆ. ಈಗ ನಕಲಿ ಅಂಕಪಟ್ಟಿ ಒದಗಿಸಿದ್ದಕ್ಕೆ ತೀರ್ಥಮ್ಮ ವಿರುದ್ಧ ಪ್ರಕರಣ ದಾಖಲಾಗಿದೆ. ಅಲ್ಲದೆ ನಕಲಿ ಅಂಕಪಟ್ಟಿ ಮೇಲೆ ಮುಖ್ಯೋಪಾಧ್ಯಾಯಿನಿ ಅವರ ಸೀಲ್ ಇತ್ತು. ಹಾಗಾಗಿ ಜಾನಕಮ್ಮ ಎಂಬುವವರ ವಿರುದ್ಧವು ಪ್ರಕರಣ ದಾಖಲು ಮಾಡಲಾಗಿದೆ.

ಬಿ. ಸಿ. ನಾಗೇಶ್ ಮಂತ್ರಿಯಾಗಲು ನಾಲಾಯಕ್; ಸಿದ್ದರಾಮಯ್ಯ

7ನೇ ತರಗತಿಯ ನಕಲಿ ಅಂಕಪಟ್ಟಿ: ಸೇವೆಯಿಂದ ವಜಾಗೊಳಿಸಿದ ಹೈಕೋರ್ಟ್

ತೀರ್ಥಹಳ್ಳಿ ಜೆಎಂಎಫ್'ಸಿ ನ್ಯಾಯಾಲಯದಲ್ಲಿ ಅಟೆಂಡರ್ ಆಗಿದ್ದ ಮಂಜಪ್ಪ ಎಂಬಾತ ಕೂಡ 7ನೇ ತರಗತಿಯ ನಕಲಿ ಅಂಕಪಟ್ಟಿ ನೀಡಿ, ಕೆಲಸ ಗಿಟ್ಟಿಸಿಕೊಂಡಿದ್ದ. ಹೈಕೋರ್ಟ್ ಈತನನ್ನು ಸೇವೆಯಿಂದ ವಜಾಗೊಳಿಸಿದೆ. ಹಾಗಾಗಿ ಮಂಜಪ್ಪ ವಿರುದ್ಧವು ಪ್ರಕರಣ ದಾಖಲಾಗಿದೆ.

ಮುಖ್ಯೋಪಾಧ್ಯಾಯರಿಗೆ ಸಂಕಷ್ಟ

ಎರಡು ಪ್ರಕರಣದಲ್ಲಿ ಆಯಾ ಶಾಲೆಯ ಮುಖ್ಯೋಪಾಧ್ಯಾಯರ ವಿರುದ್ಧ ಪ್ರಕರಣ ದಾಖಲಾಗಿದೆ. ಜಾನಕಮ್ಮ ಪ್ರಕರಣದಲ್ಲಿ ಟ್ಯಾಂಕ್ ಮೊಹಲ್ಲಾದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋ ಪಾಧ್ಯಾಯಿನಿ ಜಾನಕಮ್ಮ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ. ಮಂಜಪ್ಪ ಪ್ರಕರಣದಲ್ಲಿ ಹೊನ್ನಾಳಿ ತಾಲೂಕು ಸುರಹೊನ್ನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಕೇಸರಪ್ಪ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ. ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

(ಒನ್‌ಇಂಡಿಯಾ ಸುದ್ದಿ)

ಕತ್ತೆ ಹಾಲಿನಿಂದ 17 ಲಕ್ಷಕ್ಕೂ ಅಧಿಕ ದುಡಿಮೆ: ಮಂಗಳೂರಿನ ಈ ವ್ಯಕ್ತಿಯ ಯಶೋಗಾಥೆ | Oneindia Kannada

source: oneindia.com

Disclaimer

Disclaimer

This story is auto-aggregated by a computer program and has not been created or edited by Dailyhunt Publisher: OneIndia Kannada

#Hashtags