Kannada News Now

1.8M Followers

BIGG BREAKING NEWS: ನಾಳೆ ಬೆಳಿಗ್ಗೆ 11 ಗಂಟೆಗೆ ದ್ವಿತೀಯ PUC ಫಲಿತಾಂಶ ಪ್ರಕಟ - ಬಿಯು ಬೋರ್ಡ್ ಘೋಷಣೆ | Karnataka Second PUC Result 2022

17 Jun 2022.3:35 PM

ಬೆಂಗಳೂರು: ಏಪ್ರಿಲ್ 22 ರಿಂದ ಆರಂಭವಾಗಿ ಮೇ 18ರವರೆಗೆ ನಡೆದಿದ್ದಂತ ದ್ವಿತೀಯ ಪಿಯುಸಿ ಪರೀಕ್ಷೆಯ ( Karnataka Second PU Exam ) ಫಲಿತಾಂಶವನ್ನು ನಾಳೆ ಬೆಳಿಗ್ಗೆ 11 ಗಂಟೆಗೆ ಪ್ರಕಟಿಸಲಾಗುತ್ತಿದೆ ಎಂಬುದಾಗಿ ಪಿಯು ಬೋರ್ಡ್ ಪ್ರಕಟಿಸಿದೆ.

ಈ ಕುರಿತಂತೆ ಮಾಹಿತಿ ಬಿಡುಗಡೆ ಮಾಡಿರುವಂತ ಪದವಿ ಪೂರ್ವ ಶಿಕ್ಷಣ ಮಂಡಳಿಯು, 2021-22ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ, ಏಪ್ರಿಲ್ 22 ರಿಂದ ಆರಂಭವಾಗಿ ಮೇ 18 ಕ್ಕೆ ಮುಕ್ತವಾಗಿದ್ದಂತ ದ್ವಿತೀಯ ಪಿಯುಸಿಯ ಉತ್ತರ ಪತ್ರಿಕೆಯ ಮೌಲ್ಯ ಮಾಪನ ಮುಕ್ತಾಯವಾಗಿದೆ. ನಾಳೆ ದ್ವಿತೀಯ ಪಿಯು ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸೋದಾಗಿ ತಿಳಿಸಿದೆ.

BIG NEWS: ವಿಪಕ್ಷ ನಾಯಕ ಸಿದ್ದರಾಮಯ್ಯ ಬಂಧಿಸುವಂತೆ MLC ಛಲವಾದಿ ನಾರಾಯಣಸ್ವಾಮಿ ಒತ್ತಾಯ

ಅಂದಹಾಗೆ ದ್ವಿತೀಯ ಪಿಯುಸಿ 2021-22ನೇಸಾಲಿನ ಫಲಿತಾಂಶವನ್ನು ಜೂನ್‌ 25 ರೊಳಗೆ ಪ್ರಕಟಿಸೋದಾಗಿ ಹೇಳಿತ್ತು. ಫಲಿತಾಂಶವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ ಸೈಟ್ www.karresult.nic.in ನಲ್ಲಿ ಪಡೆಯಬಹುದಾಗಿದೆ.

2021-22ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ, ಏಪ್ರಿಲ್ 22 ರಿಂದ ಆರಂಭವಾಗಿ ಮೇ 18 ಕ್ಕೆ ಮುಕ್ತವಾಗಿದ್ದವು. ಈ ಬಾರಿ ಒಟ್ಟು 6,84,255 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags