ಕನ್ನಡದುನಿಯಾ

1.6M Followers

ಶಾಲೆಯಲ್ಲೇ ನಿದ್ರೆಗೆ ಜಾರಿದ ಶಿಕ್ಷಕಿ - ಗಾಳಿ ಬೀಸಿದ ವಿದ್ಯಾರ್ಥಿನಿ

07 Jun 2022.10:42 AM

ಶಿಕ್ಷಕ ವೃತ್ತಿ ಪವಿತ್ರವಾದದ್ದು. ಭವಿಷ್ಯದ ಪ್ರಜೆಗಳನ್ನು ರೂಪಿಸುವ ಗುರುತರ ಜವಾಬ್ದಾರಿಯನ್ನು ಶಿಕ್ಷಕ ಸಮುದಾಯ ಹೊಂದಿದೆ. ಆದರೆ ಕೆಲ ಶಿಕ್ಷಕರು ತಾವು ಮಾಡುವ ಕೆಲಸದಿಂದಾಗಿ ಈ ವೃತ್ತಿಗೆ ಕಳಂಕ ತರುತ್ತಿದ್ದಾರೆ.

ಈ ಹಿಂದೆ ವಿದ್ಯಾರ್ಥಿಗಳಿಂದ ಶಿಕ್ಷಕರೊಬ್ಬರು ಮನೆ ಕೆಲಸ ಮಾಡಿಸಿಕೊಂಡ ವಿಡಿಯೋ ವೈರಲ್‌ ಆಗಿತ್ತು.

ಈಗ ಅಂತಹುದೇ ಪ್ರಕರಣವೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಬಿಹಾರದ ಪಶ್ಚಿಮ ಚಂಪಾರಣ್‌ ಜಿಲ್ಲೆಯ ಬಿತಾಯಿಯಲ್ಲಿ ಈ ಘಟನೆ ನಡೆದಿದ್ದು, ಶಿಕ್ಷಕಿಯೊಬ್ಬರು ಶಾಲೆಯಲ್ಲೇ ಗಡದ್ದಾಗಿ ನಿದ್ರೆ ಹೊಡೆದಿದ್ದಾರೆ. ಇದು ಸಾಲದೆಂಬಂತೆ ಈ ಶಿಕ್ಷಕಿ ತನಗೆ ಗಾಳಿ ಬೀಸಲು ವಿದ್ಯಾರ್ಥಿನಿಯೊಬ್ಬಳಿಗೆ ಸೂಚಿಸಿದ್ದಾರೆ.

ಶಿಕ್ಷಕಿಗೆ ಅರಿವಾಗದಂತೆ ವ್ಯಕ್ತಿಯೊಬ್ಬರು ಇದರ ವಿಡಿಯೋ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ ಲೋಡ್‌ ಮಾಡಿದ್ದಾರೆ. ಇದು ವೈರಲ್‌ ಆದ ಬಳಿಕ ಶಿಕ್ಷಣಾಧಿಕಾರಿಗಳು ಘಟನೆಯ ತನಿಖೆಗೆ ಆದೇಶಿಸಿದ್ದಾರೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada Dunia

#Hashtags