Kannada News Now

1.8M Followers

BIG NEWS: ಡಿ.31ರೊಳಗೆ 'ರಾಜ್ಯ ಸರ್ಕಾರಿ ನೌಕರ'ರು CLT ಉತ್ತೀರ್ಣರಾಗದಿದ್ದಲ್ಲಿ ಮುಂಬಡ್ತಿ, ವಾರ್ಷಿಕ ವೇತನ ಬಡ್ತಿಗೆ ಅನರ್ಹ - ರಾಜ್ಯ ಸರ್ಕಾರ ಆದೇಶ

09 Jun 2022.12:38 PM

ಬೆಂಗಳೂರು: ರಾಜ್ಯ ಸರ್ಕಾರಿ ಅಧಿಕಾರಿ, ನೌಕರನು ದಿನಾಂಕ 31-12-2022ರೊಳಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ( Computer Literacy Test - CLT ) ಉತ್ತೀರ್ಣನಾಗದೇ ಇದ್ದಲ್ಲಿ, ಮುಂಬಡ್ತಿ ಮತ್ತು ವಾರ್ಷಿಕ ವೇತನ ಬಡ್ತಿಯನ್ನು ಹೊಂದಲು ಅರ್ಹನಾಗಿರುವುದಿಲ್ಲ ಎಂಬುದಾಗಿ ರಾಜ್ಯ ಸರ್ಕಾರ ( Karnataka Government ) ಖಡಕ್ ಆದೇಶದಲ್ಲಿ ತಿಳಿಸಿದೆ.

ಈ ಸಂಬಂಧ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಇ-ಆಡಳಿತ ಕೇಂದ್ರ ಸಾಮರ್ಥ್ಯ ಸಂಘಟನೆಯ ಯೋಜನಾ ನಿರ್ದೇಶಕರು ಪತ್ರ ಬರೆದಿದ್ದು, ಒಟ್ಟು ಸುಮಾರು 5,40,000 ಸರ್ಕಾರಿ ಅಧಿಕಾರಿಗಳು ಮತ್ತು ನೌಕರರುಗಳು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಕಡ್ಡಾಯವಾಗಿ ತೇರ್ಗಡೆ ಹೊಂದುವಂತೆ ಸರ್ಕಾರವು ಆದೇಶ ನೀಡಿರುತ್ತದೆ. ಈ ಹಿನ್ನಲೆಯಲ್ಲಿ ಈವರೆಗೆ 2,60,000ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ನೌಕರರುಗಳು ಪರೀಕ್ಷೆಯನ್ನು ತೆಗೆದುಕೊಂಡಿದ್ದು, ಅವರಲ್ಲಿ 1,73,500 ಅಧಿಕಾರಿಗಳು ಮತ್ತು ನೌಕರರು ಉತ್ತೀರ್ಣರಾಗಿದ್ದು, ಎಲ್ಲರಿಗೂ ಡಿಜಿಟಲ್ ಪ್ರಮಾಣಪತ್ರ ನೀಡಲಾಗಿರುತ್ತದೆ ಎಂದು ತಿಳಿಸಿದ್ದಾರೆ.

Rajya Sabha Election: ಬಿಜೆಪಿ ಸೋಲಿಸಲು 'ಜೆಡಿಎಸ್‌' ಅನ್ನು 'ಕಾಂಗ್ರೆಸ್‌' ಬೆಂಬಲಿಸಬೇಕು - HDK

ಇನ್ನೂ ಸುಮಾರು 3,50,000ಕ್ಕೂ ಹೆಚ್ಚು ಸರ್ಕಾರಿ ಅಧಿಕಾರಿಗಳು ಮತ್ತು ನೌಕರರುಗಳು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ತೆಗೆದುಕೊಳ್ಳಬೇಕಾಗಿರುವುದರಿಂದ, ಸರ್ಕಾರವು ದಿನಾಂಕ 31-12-2022ರವರೆಗೆ ಸಮಯಾವಕಾಶ ನೀಡಿದೆ. ಈ ಹಿನ್ನಲೆಯಲ್ಲಿ, ಉತ್ತೀರ್ಣರಾಗದಂತ ಸರ್ಕಾರಿ ನೌಕರರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ, ತಮ್ಮ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸರ್ಕಾರಿ ಅಧಿಕಾರಿ, ನೌಕರರ ವಿವರಗಳನ್ನು ನೀಡುವಂತೆ ಕೋರಿದ್ದಾರೆ.

ಇದಷ್ಟೇ ಅಲ್ಲದೇ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ತೆಗೆದುಕೊಳ್ಳದಿರುವ ಅಧಿಕಾರಿ ಮತ್ತು ನೌಕರರುಗಳಿಗೆ ಆಯಾ ಇಲಾಖೆಯ ಮೇಲಧಿಕಾರಿಗಳು ಮಾಹಿತಿ ನೀಡುವಂತೆ ಕೋರಲಾಗಿದೆ. ಈ ಹಿನ್ನಲೆಯಲ್ಲಿ ತಮ್ಮ ಜಿಲ್ಲೆಯಲ್ಲಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ತೆಗೆದುಕೊಳ್ಳದಿರುವ ಅಧಿಕಾರಿ, ನೌಕರರುಗಳ ವಿವರಗಳನ್ನು ತುರ್ತಾಗಿ ಸಲ್ಲಿಸುವಂತೆಯೂ ಕೋರಿ, ನಿರ್ದೇಶಿಸಿದ್ದಾರೆ.

BREAKING NEWS : ʻ ಹಿಜಾಬ್ ಧರಿಸದೇ 46 ವಿದ್ಯಾರ್ಥಿನಿಯರು ʼ ಉಪ್ಪಿನಂಗಡಿ ಕಾಲೇಜಿಗೆ ಹಾಜರು | Hijab row



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags