News Next

20k Followers

Nupur Sharma : ದೇಶದಲ್ಲಿ ನಡೆಯುತ್ತಿರುವ ಕೋಲಾಹಲಗಳಿಗೆ ನೂಪುರ್​ ಶರ್ಮಾ ಕಾರಣ : ಸುಪ್ರೀಂಕೋರ್ಟ್ ಅಸಮಾಧಾನ

01 Jul 2022.12:48 PM

ದೆಹಲಿ : Nupur Sharma : ಪ್ರವಾದಿ ಮೊಹಮ್ಮದ್​ ವಿರುದ್ಧ ಅವಹೇಳನಕಾರಿ ಹೇಳಿಕೆಯನ್ನು ನೀಡಿರುವ ಬಿಜೆಪಿಯ ಅಮಾನತುಗೊಂಡ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ದೇಶದ ಕ್ಷಮೆಯಾಚಿಸಬೇಕು ಎಂದು ಸುಪ್ರೀಂಕೋರ್ಟ್​ ಕಟುವಾಗಿ ಟೀಕಿಸಿದೆ. ಅಲ್ಲದೇ ದೇಶಾದ್ಯಂತ ನಡೆಯುತ್ತಿರುವ ಎಲ್ಲಾ ಕೋಲಾಹಲಗಳಿಗೆ ಈ ಮಹಿಳೆಯೇ ಕಾರಣ ಎಂದು ಕಿಡಿಕಾರಿದೆ.

ಈ ರೀತಿಯ ಟೀಕೆಯನ್ನು ಮಾಡುವ ನೂಪುರ್​ ಶರ್ಮಾ ಉದ್ದೇಶವಾದರೂ ಏನಿತ್ತು..? ಈ ಮಹಿಳೆಯು ನೀಡಿದ ಹೇಳಿಕೆಯು ದೇಶಾದ್ಯಂತ ಕೋಮು ಗಲಭೆಯನ್ನು ಹುಟ್ಟು ಹಾಕಿದೆ. ಇಂದು ದೇಶದಲ್ಲಿ ಏನಾಗುತ್ತಿದೆಯೋ ಇವೆಲ್ಲದ್ದಕ್ಕೂ ಈ ಏಕೈಕ ಮಹಿಳೆ ಹೊಣೆಯಾಗಿದ್ದಾರೆ ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ್​ ಹಾಗೂ ಜೆಪಿ ಪರ್ದಿವಾಲಾ ನೇತೃತ್ವದ ನ್ಯಾಯಪೀಠ ಹೇಳಿದೆ. ತಮ್ಮ ಮೇಲಿರುವ ಎಲ್ಲಾ ಎಫ್​ಐಆರ್​ಗಳನ್ನು ದೆಹಲಿಗೆ ವರ್ಗಾಯಿಸುವಂತೆ ಕೋರಿ ನೂಪುರ್​ ಶರ್ಮಾ ಸಲ್ಲಿಸಿರುವ ಮನವಿಯನ್ನು ಆಲಿಸುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ನೂಪುರ್​ ಶರ್ಮಾ ನಡೆ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದೆ.

ನೂಪುರ್​ ಶರ್ಮಾ ನಾಲಿಗೆ ಮೇಲೆ ಹಿಡಿತ ಕಳೆದುಕೊಂಡ ಪರಿಣಾಮ ಇಂದು ಇಡೀ ದೇಶ ಹೊತ್ತಿ ಉರಿಯುತ್ತಿದೆ. ಉದಯಪುರದಲ್ಲಿ ಹಾಡ ಹಗಲೇ ಇಬ್ಬರು ವ್ಯಕ್ತಿಗಳು ಟೈಲರ್​ನ್ನು ಬರ್ಬರವಾಗಿ ಕೊಲೆಯಾಗಿರುವುದು ಇದೇ ಮಹಿಳೆ ನೀಡಿರುವ ಹೇಳಿಕೆಯಿಂದ ಎಂಬುದು ದುರದೃಷ್ಟಕರ ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ಹೊರ ಹಾಕಿದೆ.

ನೂಪುರ್ ಶರ್ಮಾ ಸುಪ್ರೀಂ ಕೋರ್ಟ್‌ನಲ್ಲಿ ವರ್ಗಾವಣೆ ಅರ್ಜಿ ಸಲ್ಲಿಸಿದ್ದರು ಮತ್ತು “ನಿರಂತರ ಬೆದರಿಕೆಗಳಿಂದ ತಮ್ಮ ಜೀವಕ್ಕೆ ಅಪಾಯವಿದೆ” ಎಂದು ತಮ್ಮ ವಿರುದ್ಧದ ವಿವಿಧ ರಾಜ್ಯಗಳಲ್ಲಿನ ಎಲ್ಲಾ ಪ್ರಕರಣಗಳನ್ನು ದೆಹಲಿಗೆ ವರ್ಗಾಯಿಸಲು ಒತ್ತಾಯಿಸಿದ್ದರು. ವಿವಿಧ ರಾಜ್ಯಗಳಿಂದ ನನಗೆ ನಿರಂತರವಾಗಿ ಕೊಲೆ ಬೆದರಿಕೆಯ ಕರೆಗಳು ಬರುತ್ತಿವೆ ಎಂದೂ ನೂಪುರ್​ ಶರ್ಮಾ ಹೇಳಿದ್ದಾರೆ .

ಇದನ್ನು ಓದಿ : ಬೆನ್ನು ಬಿಡದೆ ಫಾಲೋ ಮಾಡಿದ ಕ್ಯಾಮರಾಮೆನ್‌ಗೆ ಸೀರಿಯಸ್ ಲುಕ್ ಕೊಟ್ಟ ಕಿಂಗ್ ಕೊಹ್ಲಿ

ಇದನ್ನೂ ಓದಿ : ಇಂಗ್ಲೆಂಡ್‌ನಲ್ಲಿ ಹಸಿದ ಭಿಕ್ಷುಕನಿಗೆ ಆಹಾರ ನೀಡಿ ಮಾನವೀಯತೆ ಮೆರೆದ ರಿಷಬ್ ಪಂತ್

Nupur Sharma single-handedly responsible for what’s happening in the country: SC on Prophet Muhammad remarks row

Disclaimer

Disclaimer

This story is auto-aggregated by a computer program and has not been created or edited by Dailyhunt Publisher: News Next

#Hashtags