Oneindia

1.1M Followers

ಕರ್ನಾಟಕ ಪ್ರಾಥಮಿಕ ಶಿಕ್ಷಕರ ನೇಮಕಾತಿ 2022 : ಜುಲೈ ಕೊನೆಯ ವಾರದಲ್ಲಿ ಫಲಿತಾಂಶ..!

02 Jul 2022.3:50 PM

ಬೆೆಂಗಳೂರು, ಜುಲೈ02: ಕರ್ನಾಟಕ ಶಿಕ್ಷಣ ಇಲಾಖೆಯು 15,000 ಶಿಕ್ಷಕರ ನೇಮಕಾತಿಗಾಗಿ ಸಿಇಟಿ 2022 ಪರೀಕ್ಷೆಯನ್ನು ನಡೆಸಿದೆೆ. ಶಾಲೆಗಳು ಆರಂಭವಾಗಿ ಶಿಕ್ಷಕರ ಕೊರತೆಯನ್ನು ಎದುರಿಸುತ್ತಿದ್ದರು ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆಮೆಗತಿಯಲ್ಲಿ ಸಾಗುತ್ತಿದೆ. ಸಿಇಟಿಯ ಪರೀಕ್ಷೆ ಫಲಿತಾಂಶ ಅಂದರೆ ಆಯ್ಕೆ ಪಟ್ಟಿಯನ್ನು ಜುಲೈ ಕೊನೆಯಲ್ಲಿ ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ.

ಸಿಇಟಿ ಪರೀಕ್ಷೆಯ ಮೌಲ್ಯಮಾಪನದ ಕಾರ್ಯ ನಡೆಯುತ್ತಿದೆ ಎರಡು ಪತ್ರಿಕೆಯ ಮೌಲ್ಯ ಮಾಪನ ಮುಗಿದಿದೆ. ಸ್ಕಾನ್ ಮಾಡಿ ಮೌಲ್ಯಮಾಪನ ಮಾಡಲಾಗುತ್ತಿದ್ದು ಜುಲೈ ಕೊನೆಯ ವೇಳೆಗೆ ಮೌಲ್ಯಮಾಪನ ಕಾರ್ಯವನ್ನು ಪೂರ್ಣಗೊಳಿಸಿ ಕಟ್ ಆಫ್ ಪರ್ಸೆಂಜೇಜ್ ಮತ್ತು ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡುವ ಬಗ್ಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಸಚಿವ ಬಿಸಿ ನಾಗೇಶ್ ಮಾಹಿತಿಯನ್ನು ನೀಡಿದ್ದಾರೆ.

ಶಿಕ್ಷಕರಾಗುವ ಕನಸನ್ನು ಹೊತ್ತು ಹಗಲು ರಾತ್ರಿ ಎನ್ನದೇ ಕಷ್ಟು ಪಟ್ಟು ಓದಿ ಸಿಇಟಿಯನ್ನು ಅತ್ಯುತ್ತಮವಾಗಿ ಮಾಡಿರುವ ವಿದ್ಯಾರ್ಥಿಗಳು ಆಸೆಗಣ್ಣಿನಿಂದ ಕಟ್ ಆಫ್ ಶೇಖಡವಾರು ಎಷ್ಟಕ್ಕೆ ನಿಲ್ಲಬಹುದ ಕಾಯುತ್ತಿದ್ದಾರೆ. ಧರ್ಮ, ಜಾತಿ, ಮೀಸಲಾತಿಯ ವ್ಯವಸ್ಥೆಯಲ್ಲಿ ಯಾರು ಸೆಲೆಕ್ಟ್ ಆಗುತ್ತಾರೆ ಎಂದು ಭಾವಿ ಶಿಕ್ಷಕರು ಎದುರು ನೋಡುತ್ತಿದ್ದಾರೆ.

ರಿಷಬ್ ಪಂತ್ ದಾಖಲೆಯ ಶತಕ ನೋಡಿ ಡಗೌಟ್ ನಲ್ಲಿ ಕೂತಿದ್ದ ರಾಹುಲ್ ದ್ರಾವಿಡ್ ಹೇಗಾಡಿದ್ರು ನೋಡಿ.. | OneIndia Kannada

By Puttaraju S
ಮೇ21 ಮತ್ತು ಮೇ22 ನಡೆದಿದ್ದ ಪರೀಕ್ಷೆ

ಶಿಕ್ಷಕರ ಹುದ್ದೆ ನೇಮಕಾತಿ 2022ರ ಪರೀಕ್ಷೆಯು ಮೇ21 ಮತ್ತು ಮೇ22 ನಡೆದಿದೆ. ಶಿಕ್ಷಕರ ನೇಮಕಾತಿ ಪರೀಕ್ಷೆಯನ್ನು ಅಭ್ಯರ್ಥಿಗಳು ಬರೆದಿದ್ದಾರೆ. ಕರ್ನಾಟಕ ಶಿಕ್ಷಕರ ನೇಮಕಾತಿ ಹುದ್ದೆ 2022ರ ಪರೀಕ್ಷೆಗೆ 106083 ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿದ್ದರು. ಈ ಪೈಕಿ ಬೇರೆ ಬೇರೆ ವಿಷಯಕ್ಕೆ ಸಂಬಂಧಿಸಿದಂತೆ ಅರ್ಜಿಯನ್ನು ಸಲ್ಲಿದ್ದವರು 31967 ಅಭ್ಯರ್ಥಿಗಳು. ಶಿಕ್ಷಕ ಹುದ್ದೆಗೆ ಅರ್ಜಿಗಳ ಪರಿಗಣನೆ ಆಗಿರುವುದು 74116 ಮಂದಿ ಅಭ್ಯರ್ಥಿಗಳದ್ದು. ಪರೀಕ್ಷೆಗೆ ಹಾಜರಾದವರ ಸಂಖ್ಯೆ 69159 ಅಭ್ಯರ್ಥಿಗಳು. ಪರೀಕ್ಷೆಗೆ ಗೈರು ಹಾಜರಾದವರು 4957 ಅಭ್ಯರ್ಥಿಗಳು ಅಂದರೆ 93% ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರೇ 7% ಅಭ್ಯರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ. ಎರಡನೇ ಪತ್ರಿಕೆಯನ್ನು ಬರೆಯುವಾಗಲು ಕೆಲ ಅಭ್ಯರ್ಥಿಗಳು ಗೈರು ಹಾಜರಾಗಿದ್ದಾರೆ.

6 ರಿಂದ 8 ನೇ ತರಗತಿಗೆ ಪದವೀಧರ ಶಿಕ್ಷಕರ ನೇಮಕಾತಿ

ಯಾವ ವೇಯ್ಟೇಜ್‌ನಲ್ಲಿ ಮೆರಿಟ್ ನಿರ್ಧಾರವಾಗುತ್ತದೆ ಎಂದು ನೋಡಿದರೆ, 6 ರಿಂದ 8 ನೇ ತರಗತಿಗೆ ಪದವೀಧರ ಶಿಕ್ಷಕರ ನೇಮಕಾತಿಗಾಗಿ ಆಯ್ಕೆ ಪ್ರಾಧಿಕಾರವು ವಿಷಯವಾರು ಮತ್ತು ಮಾಧ್ಯಮವಾರು ಪ್ರವರ್ಗವಾರು ಅಧಿಸೂಚನೆಯಂತೆ ಸ್ಪರ್ಧಾತ್ಮಕ ಪರೀಕ್ಷೆ, ಶಿಕ್ಷಕರ ಅರ್ಹತಾ ಪರೀಕ್ಷೆ (TET), ಪದವಿ ಶಿಕ್ಷಣ (degree) ಮತ್ತು ಶಿಕ್ಷಕರರ ಶಿಕ್ಷಣ (B.ed) ಕೋರ್ಸ್ ಗಳಲ್ಲಿ ಪಡೆದಿರುವ ಶೇಕಡವಾರು ಅಂಕಗಳನ್ನು ಪರಿಗಣಿಸಿ ವೆಯ್ಟೇಜ್ (weightage) ಉಪಯೋಗಿಸಿ ಲೆಕ್ಕಹಾಗಿ divided percentage ಲೆಕ್ಕಹಾಕಿ ಅದರ ಆಧಾರದಲ್ಲಿ ಶಿಕ್ಷಕರನ್ನು ಆಯ್ಕೆ ಮಾಡಲಾಗುತ್ತದೆ.

ಶೇಕಡವಾರು ಲೆಕ್ಕಾಚಾರದ ವಿವರ

ಶಿಕ್ಷಕರ ಕೋರ್ಸ್ ನಲ್ಲಿ ಎರಡು ವರ್ಷ ವ್ಯಾಸಂಗದ ಆಯ್ಕೆ ಮಾದರಿ. 4 ವರ್ಷದ ಕೋರ್ಸ್ ಮಾಡಿದವರ ಆಯ್ಕೆ ಮಾದರಿ ಹೇಗೆ? ಶಿಕ್ಷಕರ ಕೋರ್ಸ್ ಎರಡು ವರ್ಷ ವ್ಯಾಸಂಗ ಮಾಡಿದ್ದಾರೇ ಅವರ ಆಯ್ಕೆಯ ಹೀಗೆ ಮಾಡುತ್ತಾರೆ.

*ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕ 50%

*ಟಿಇಟಿಯಲ್ಲಿ ಪಡೆದ ಅಂಕ 20%

*ಪದವಿಯಲ್ಲಿ ಪಡೆದದ ಅಂಕ 20%

*ಶಿಕ್ಷಕರ ಕೋರ್ಸ್ ನಲ್ಲಿ ಪಡೆದ ಅಂಕ 10% , ಎಲ್ಲಾ ಶೇಕಡವಾರು ಅಂಕಗಳನ್ನು ಪರಿಗಣಿಸಿ 100% ಗೆ ಲೆಕ್ಕಹಾಕಿ ಆಯ್ಕೆ ಪಟ್ಟಿಯನ್ನು ಶಿಕ್ಷಣ ಇಲಾಖೆ ಬಿಡುಗಡೆ ಮಾಡಲಿದೆ.

ಶೇಕಡವಾರು ಲೆಕ್ಕಾಚಾರದ ವಿವರ

ಇನ್ನು ವಿಶೇಷವಾಗಿ ನಾಲ್ಕು ವರ್ಷದ ಕೋರ್ಸ್ ಮಾಡಿರುವ ಅಭ್ಯರ್ಥಿಗಳು ಶಿಕ್ಷಕರ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿದ್ದರೇ ಅವರ ಆಯ್ಕೆ ಹೀಗೆ ನಿರ್ಧರಿಸುತ್ತಾರೆ.

*ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕ 50%

*ಟಿಇಟಿಯಲ್ಲಿ ಪಡೆದ ಅಂಕ 20%

*ನಾಲ್ಕು ವರ್ಷದ ಶಿಕ್ಷಣ ಕೋರ್ಸ್ ಮಾಡಿದವರು 30% ಹೀಗೆ ಅಭ್ಯರ್ಥಿಗಳ ಶೇಕಡಾವಾರು ಅಂಕಗಳನ್ನು ಲೆಕ್ಕಹಾಕಿ 100% ಆಗಿ ಪರಿಗಣಿಸಿ ಶಿಕ್ಷಕರನ್ನು ಆಯ್ಕೆ ಮಾಡಲಾಗುತ್ತದೆ.

ಶಿಕ್ಷಕರು ಪದವಿಯಲ್ಲಿ ಪಡೆದ ಅಂಕ ಶೇಕಡವಾರು, ಬಿ.ಇಡಿಯಲ್ಲಿ ಪಡೆದಿರುವ ಅಂಕ ಶೇಖಡವಾರು, ಟಿಇಟಿಯಲ್ಲಿ ಪಡೆದ ಅಂಕ ಶೇಕಡವಾರು, ಮತ್ತು ಸಿಇಟಿಯಲ್ಲಿ ಪಡೆದ ಶೇಖಡ 50ರಷ್ಟು ಲೆಕ್ಕವನ್ನು ಹಾಕಿ ಕಟ್ ಆಫ್ ಪರ್ಸೆಂಟೇಜ್ ಮತ್ತು ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ. ಅದೇನಾದರು ಜುಲೈ ಕೊನೆಯ ವಾರದಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರಾಗುವ ಯೋಗ ಯಾರಿಗಿದೆ ಅನ್ನೋದು ತಿಳಿಯಲಿದೆ.

source: oneindia.com

Disclaimer

Disclaimer

This story is auto-aggregated by a computer program and has not been created or edited by Dailyhunt Publisher: OneIndia Kannada

#Hashtags