News18 ಕನ್ನಡ

400k Followers

HPCL Recruitment: ಹಿಂದೂಸ್ತಾನ್​ ಪೆಟ್ರೋಲಿಯಂನಲ್ಲಿ 294 ಹುದ್ದೆಗಳಿಗೆ ಅರ್ಜಿ ಆಹ್ವಾನ; ಮಾಸಿಕ 50,000 ವೇತನ

22 Jun 2022.1:38 PM

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್​​ನಲ್ಲಿ (Hindustan Petroleum Corporation Limited) 294 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಮೆಕ್ಯಾನಿಕಲ್ ಇಂಜಿನಿಯರ್, ಫೈರ್ ಮತ್ತು ಸೇಫ್ಟಿ ಆಫೀಸರ್ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಆನ್​​ಲೈನ್ (Online)​ ಮೂಲಕ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನ ಜುಲೈ 22 ಆಗಿದೆ.

ಸಂಸ್ಥೆಯ ಹೆಸರು: ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL)
ಹುದ್ದೆಯ ಹೆಸರು: ಮೆಕ್ಯಾನಿಕಲ್ ಇಂಜಿನಿಯರ್, ಅಗ್ನಿಶಾಮಕ ಮತ್ತು ಸುರಕ್ಷತೆ ಅಧಿಕಾರಿ
ಹುದ್ದೆಗಳ ಸಂಖ್ಯೆ: 294
ಉದ್ಯೋಗ ಸ್ಥಳ: ಭಾರತದಾದ್ಯಂತ
ವೇತನ: 50000-240000 ರೂ ಪ್ರತಿ ತಿಂಗಳು

ಹುದ್ದೆ ಹುದ್ದೆ ಸಂಖ್ಯೆ ವಯೋಮಿತಿ
ಮೆಕ್ಯಾನಿಕಲ್ ಇಂಜಿನಿಯರ್ 103 ಗರಿಷ್ಠ 25 ವರ್ಷ
ಎಲೆಕ್ಟ್ರಿಕಲ್ ಇಂಜಿನಿಯರ್ 42 ಗರಿಷ್ಠ 25 ವರ್ಷ
ಇನ್ಸ್ಟ್ರುಮೆಂಟೇಶನ್ ಇಂಜಿನಿಯರ್ 30 ಗರಿಷ್ಠ 25 ವರ್ಷ
ಸಿವಿಲ್ ಇಂಜಿನಿಯರ್ 25 ಗರಿಷ್ಠ 25 ವರ್ಷ
ಕೆಮಿಕಲ್ ಇಂಜಿನಿಯರ್ 7 ಗರಿಷ್ಠ 25 ವರ್ಷ
ಮಾಹಿತಿ ವ್ಯವಸ್ಥೆ ಅಧಿಕಾರಿ 5 ಗರಿಷ್ಠ 25 ವರ್ಷ
ಸುರಕ್ಷತಾ ಅಧಿಕಾರಿ - ಉತ್ತರ ಪ್ರದೇಶ 6 ಗರಿಷ್ಠ 27 ವರ್ಷ
ಸುರಕ್ಷತಾ ಅಧಿಕಾರಿ - ತಮಿಳುನಾಡು 1 ಗರಿಷ್ಠ 27 ವರ್ಷ
ಸುರಕ್ಷತಾ ಅಧಿಕಾರಿ - ಕೇರಳ 5 ಗರಿಷ್ಠ 27 ವರ್ಷ
ಸುರಕ್ಷತಾ ಅಧಿಕಾರಿ - ಗೋವಾ 1 ಗರಿಷ್ಠ 27 ವರ್ಷ
ಅಗ್ನಿಶಾಮಕ ಮತ್ತು ಸುರಕ್ಷತಾ ಅಧಿಕಾರಿ 2 ಗರಿಷ್ಠ 27 ವರ್ಷ
ಗುಣಮಟ್ಟ ನಿಯಂತ್ರಣ ಅಧಿಕಾರಿ 27 ಗರಿಷ್ಠ 27 ವರ್ಷ
ಬ್ಲೆಂಡಿಂಗ್ ಆಫೀಸರ್ 5 ಗರಿಷ್ಠ 27 ವರ್ಷ
ಚಾರ್ಟರ್ಡ್ ಅಕೌಂಟೆಂಟ್ 15 ಗರಿಷ್ಠ 27 ವರ್ಷ
ಮಾನವ ಸಂಪನ್ಮೂಲ ಅಧಿಕಾರಿ 8 ಗರಿಷ್ಠ 27 ವರ್ಷ
ವೆಲ್​ಫೇರ್​ ಆಫೀಸರ್​​ - ವಿಶಾಖ್ ರಿಫೈನರಿ 1 ಗರಿಷ್ಠ 27 ವರ್ಷ
ವೆಲ್​ಫೇರ್​ ಆಫೀಸರ್ - ಮುಂಬೈ ರಿಫೈನರಿ 1 ಗರಿಷ್ಠ 27 ವರ್ಷ
ಕಾನೂನು ಅಧಿಕಾರಿ 5 ಗರಿಷ್ಠ 26 ವರ್ಷ
ಕಾನೂನು ಅಧಿಕಾರಿ - ಮಾನವ ಸಂಪನ್ಮೂಲ 2 ಗರಿಷ್ಠ 26 ವರ್ಷ
ಮ್ಯಾನೇಜರ್/ಹಿರಿಯ ಮ್ಯಾನೇಜರ್ - ಎಲೆಕ್ಟ್ರಿಕಲ್ 3 3 34-37 ವರ್ಷ


ವಯೋಮಿತಿ ಸಡಿಲಿಕೆ
ಪ.ಜಾ, ಪ.ಪಂ ಅಭ್ಯರ್ಥಿಗಳು: 05 ವರ್ಷಗಳು
ಒಬಿಸಿ ಅಭ್ಯರ್ಥಿಗಳು: 03 ವರ್ಷಗಳು

ಇದನ್ನು : ಕಾರ್ಮಿಕ ರಾಜ್ಯ ವಿಮಾ ನಿಗಮದಲ್ಲಿ ಪ್ರಾಧ್ಯಾಪಕ ಹುದ್ದೆಗೆ ವಾಕ್​-ಇನ್​- ಇಂಟರ್​ವ್ಯೂ

ಅರ್ಜಿ ಶುಲ್ಕ:
ಪ.ಜಾ, ಪ.ಪಂ ಮತ್ತು ವಿಕಲಚೇತನ ಅಭ್ಯರ್ಥಿಗಳು: ಶುಲ್ಕ ವಿನಾಯಿತಿ
ಯುಆರ್,ಒಬಿಸಿ- ಎನ್​ಸಿ ಮತ್ತು ಇಡಬ್ಲ್ಯೂಎಸ್​ ಅಭ್ಯರ್ಥಿಗಳು: 1180 ರೂ

ಪಾವತಿ ವಿಧಾನ: ಆನ್‌ಲೈನ್

ಆಯ್ಕೆ ಪ್ರಕ್ರಿಯೆ:
ಕಂಪ್ಯೂಟರ್ ಆಧಾರಿತ ಪರೀಕ್ಷೆ, ಗುಂಪು ಕಾರ್ಯ ಮತ್ತು ವೈಯಕ್ತಿಕ ಸಂದರ್ಶನ

ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 23 ಜೂನ್​ 2022
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22 ಜುಲೈ 2022

ಅಧಿಸೂಚನೆ ಪ್ರಮುಖ ಲಿಂಕ್‌ಗಳು
ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಜೂನ್​ 23ರಿಂದ ಪ್ರಾರಂಭವಾಗಲಿದೆ.
ಅಧಿಕೃತ ವೆಬ್‌ಸೈಟ್: hindustanpetroleum.com

ಇದನ್ನು : ಪದವಿ ಆಗಿದ್ರೆ ಯಂಗ್ ಪ್ರೊಫೆಷನಲ್ ಹುದ್ದೆಗೆ ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಕೆ ವಿಧಾನ

-ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಂಡು ಮುಂದುವರೆಯಿರಿ.

- ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ.

-ಅಧಿಕೃತ ಅಧಿಸೂಚನೆಯಿಂದ ಅರ್ಜಿ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ.

-ಅನ್ವಯಿಸಿದರೆ, ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ.
ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಸಲ್ಲಿಸು ಬಟನ್ ಅನ್ನು ಕ್ಲಿಕ್ ಮಾಡಿ
Disclaimer

Disclaimer

This story is auto-aggregated by a computer program and has not been created or edited by Dailyhunt Publisher: News18 Kannada

#Hashtags