Oneindia

1.1M Followers

Breaking : ಅತಿಥಿ ಶಿಕ್ಷಕರಿಗೆ ಸಂಭಾವನೆ ಹೆಚ್ಚಿಸಿ ಸರ್ಕಾರದ ಗುಡ್ ನ್ಯೂಸ್

30 Jun 2022.4:11 PM

ಬೆಂಗಳೂರು, ಜೂನ್ 29: ಸರ್ಕಾರಿ ಶಾಲೆಗಳಲ್ಲಿ ಅಥಿತಿ ಶಿಕ್ಷಕರಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದ ಶಿಕ್ಷಕರ ಬಹು ವರ್ಷದ ಬೇಡಿಕೆಯನ್ನು ಸರ್ಕಾರ ಈಡೇರಿಸಿದೆ ಅಥಿತಿ ಶಿಕ್ಷಕರ ಗೌರವ ಧನವನ್ನು ಏರಿಕೆ ಮಾಡಿ ಸರ್ಕಾರ ಆದೇಶವನ್ನು ಮಾಡಿದೆ.

ಸರ್ಕಾರಿ ಪ್ರಾಥಮಿಕ ಅಥಿತಿ ಶಿಕ್ಷಕರ ಗೌರವ ಧನ 7,500ಗಳಿತ್ತು.

ಈ ಗೌರವ ಧನವನ್ನು 10,000ಕ್ಕೆ ಏರಿಕೆಯನ್ನು ಮಾಡಿದೆ. ಪ್ರೌಢಶಾಲೆಯ ಶಿಕ್ಷಕರಿಗೆ 8,000 ಗೌರವ ಧನವನ್ನು ನೀಡಲಾಗುತ್ತಿತ್ತು. ಇದೀಗ ಈ ಗೌರವ ಧನವನ್ನು 10,500ಕ್ಕೆ ಏರಿಕೆಯನ್ನು ಮಾಡುವ ಮೂಲಕ ಅಥಿತಿ ಶಿಕ್ಷಕರಿಗೆ ಶುಭ ಸುದ್ದಿಯನ್ನು ಸರ್ಕಾರ ನೀಡಿದೆ.

ಅಥಿತಿ ಶಿಕ್ಷಕರ ಗೌರವ ಧನ ಹೆಚ್ಚಾಗಿರುವ ಬಗ್ಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಸಚಿವ ಬಿ. ಸಿ. ನಾಗೇಶ್ ಟ್ವೀಟ್‌ನಲ್ಲಿ ಖಚಿತ ಪಡಿಸಿದ್ದಾರೆ. ""ಅಥಿತಿ ಶಿಕ್ಷಕರ ಬಹುಕಾಲದ ಬೇಡಿಕೆಯನ್ನು ನೆರವೇರಿಸುವ ನಿಟ್ಟಿನಲ್ಲಿ ಬೇಡಿಕೆ ಕೇಳಿಬಂದಿತ್ತು. ಸರ್ಕಾರಿ ಶಾಲೆಗಳ ಅಥಿತಿ ಶಿಕ್ಷಕರ ಮಾಸಿಕ ಗೌರವ ಸಂಭಾವನೆ ಪರಿಷ್ಕರಿಸಿ ಮನವಿಗೆ ಸ್ಪಂದಿಸಿ ರೂ. 2500 ಹೆಚ್ಚಳ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಅಭಿನಂದನೆ''ಯನ್ನು ಸಚಿವರು ಸಲ್ಲಿಸಲಾಗಿದೆ.

15000 ಶಿಕ್ಷಕರ ನೇಮಕಾತಿ ಪ್ರಕ್ರಿಯೆ ವಿಳಂಬ; ಶಿಕ್ಷಣ ಇಲಾಖೆ ಈಗಾಗಲೇ 15000 ಶಿಕ್ಷಕರನ್ನು ನೇಮಕ ಸಿಇಟಿ ಪರೀಕ್ಷೆಯನ್ನು ನಡೆಸಿದೆ. ಆದರೆ ಶಿಕ್ಷಕರ ನೇಮಕಾತಿ ಪ್ರಕ್ರಿಯನ್ನು ಆಮೆಗತಿಯನ್ನು ಮಾಡುತ್ತಿರುವುದರಿಂದ ಶಿಕ್ಷಣ ಇಲಾಖೆ ಅಥಿತಿ ಶಿಕ್ಷಕರನ್ನು ನೆಚ್ಚಿಕೊಳ್ಳುವುದು ಅನಿವಾರ್ಯವಾಗಿದೆ.

ಸಾಕಷ್ಟು ಶಾಲೆಗಳಲ್ಲಿ ಶಿಕ್ಷಕರ ಕೊರತೆಯು ಎದುರಾಗಿದೆ. ಇದರಿಂದಾಗಿ ಅಥಿತಿ ಶಿಕ್ಷಕರ ಬಹುದಿನದ ಬೇಡಿಕೆಗೆ ಸ್ಪದಿಸುವುದು ಅನಿವಾರ್ಯವಾಗಿತ್ತು. ಅಥಿತಿ ಶಿಕ್ಷರ ಗೌರವ ಧನ ಹೆಚ್ಚಿಸಿರುವುದು ಸ್ವಾಗತಾರ್ಹ ವಿಚಾರವಾಗಿದೆ. ಆದರೆ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ತಡಮಾಡದೇ ನೇಮಿಸಿಕೊಳ್ಳಲು ಅಭ್ಯರ್ಥಿಗಳು ಆಗ್ರಹಿಸುತ್ತಿದ್ದಾರೆ.

HD Revanna ನವರು R Ashok ಹೇಳಿಕೆ ವಿರುದ್ಧ ತಿರುಗೇಟು ನೀಡಿದ್ದಾರೆ | Oneindia Kannada

By Puttaraju S

source: oneindia.com

Disclaimer

Disclaimer

This story is auto-aggregated by a computer program and has not been created or edited by Dailyhunt Publisher: OneIndia Kannada

#Hashtags