Kannada News Now

1.8M Followers

ರಾಜ್ಯದ 'ಖಾಸಗಿ ನೌಕರ'ರಿಗೆ ಗುಡ್ ನ್ಯೂಸ್: 'ನಿವೃತ್ತಿ ವಯಸ್ಸು' ಏರಿಕೆಗೆ ಹೈಕೋರ್ಟ್ ಅಸ್ತು

11 Jul 2022.10:11 AM

ಧಾರವಾಡ: ಖಾಸಗಿ ವಲಯದ ನೌಕರರ ನಿವೃತ್ತಿಯ ವಯಸ್ಸನ್ನು 58 ವರ್ಷದಿಂದ 60 ವರ್ಷಕ್ಕೆ ಏರಿಸಬೇಕು ಎಂಬ ಸರ್ಕಾರದ ಆದೇಶವನ್ನು ಧಾರವಾಡ ಹೈಕೋರ್ಟ್ ನ್ಯಾಯಪೀಠವು ಎತ್ತಿ ಹಿಡಿದಿದೆ. ಈ ಮೂಲಕ ಖಾಸಗಿ ನೌಕರರ ನಿವೃತ್ತಿಯ ವಯಸ್ಸು ಏರಿಕೆಗೆ ಅಸ್ತು ಎಂದಿದೆ.

Covid19 Update: ದೇಶದಲ್ಲಿ ಕಳೆದ 24 ಗಂಟೆಲ್ಲಿ 16,678 ಮಂದಿಗೆ ಕೋವಿಡ್ ದೃಢ, ಸೋಂಕಿನಿಂದ 26 ಮಂದಿ ಸಾವು

ಅಂದಹಾಗೇ ಕರ್ನಾಟಕ ಕೈಗಾರಿಕಾ ಉದ್ಯೋಗ ಸ್ಥಾಯಿ ಆದೇಶಗಳ ತಿದ್ದುಪಡಿ ನಿಯಮಗಳ ಮಾದರಿ ಅನ್ವಯ ನೌಕರರ ನಿವೃತ್ತಿ ವಯಸ್ಸು ಏರಿಸಿ, ಸರ್ಕಾರ ಆದೇಶಿಸಿತ್ತು. ರಾಜ್ಯ ಸರ್ಕಾರದ ಈ ಆದೇಶವನ್ನು ಹರಿಹರದ ಗ್ರಾಸಿಂ ಇಂಡಸ್ಟ್ರೀಸ್ ಕಂಪನಿಯು ಪ್ರಶ್ನಿಸಿ, ಹೈಕೋರ್ಟ್ ಮೊರೆ ಹೋಗಿತ್ತು.

BIGG NEWS: ಸಾಹಿತಿ ಬಿ.ಎಲ್ ವೇಣುಗೆ ಬೆದರಿಕೆ ಪತ್ರ: ಬಹಿರಂಗ ಕ್ಷಮೆಗೆ ಒತ್ತಾಯ

ಕಂಪನಿ ಸಲ್ಲಿಸಿದ್ದಂತ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠವು 2021, ಸೆಪ್ಟೆಂಬರ್ 17ರಂದು ವಜಾಗೊಳಿಸಿತ್ತು. ಈ ವಜಾ ಆದೇಶವನ್ನು ಪ್ರಶ್ನಿಸಿ ಮತ್ತೆ ಮೇಲ್ಮನವಿ ಸಲ್ಲಿಸಲಾಗಿತ್ತು. ಈ ಸಂಬಂಧದ ಸುದೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠವು ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿದೆ. ಅಲ್ಲದೇ 2018ರ ಮಾರ್ಚ್ 17 ಅಥವಾ ನಂತ್ರದಲ್ಲಿ 59 ವರ್ಷಗಳನ್ನು ಪೂರೈಸಿ ನಿವೃತ್ತರಾದವರಿಗೆ ನಿವೃತ್ತಿ ದಿನಾಂಕ ಮತ್ತು ಅವರು 60 ವರ್ಷ ತಲುಪಿದ ದಿನಾಂಕದ ನಡುವಿನ ಅವಧಿಗೆ ಶೇ.50ರಷ್ಟು ವೇತನವನ್ನು ಮರುಪಾವತಿ ಮಾಡಬೇಕು ಎಂದು ಮೇಲ್ಮನವಿದಾರರಿಗೆ ಸೂಚಿಸಿದೆ.

ಲಂಕಾ ಪ್ರಧಾನಿ ಮನೆಯಲ್ಲೇ ಪ್ರತಿಭಟನಾಕಾರರ ಠಿಕಾಣಿ: ಅಲ್ಲೇ ಆಟ, ಊಟ, ಮೋಜು ಮಸ್ತಿ… Video



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags