Oneindia

1.1M Followers

ಜೆಇಇ ಮೇನ್ಸ್ ಪರೀಕ್ಷಾ 2022ರ ಫಲಿತಾಂಶ ಪ್ರಕಟ

11 Jul 2022.4:04 PM

ನವದೆಹಲಿ,ಜು.11: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ಜೆಇಇ ಮೇನ್ಸ್ ಮುಖ್ಯ ಫಲಿತಾಂಶ 2022 ಅನ್ನು ಸೋಮವಾರ ಅಧಿಕೃತ ವೆಬ್‌ಸೈಟ್ jeemain.nta.nic.in ನಲ್ಲಿ ಘೋಷಿಸಿದೆ.

ಜೆಇಇ ಮೇನ್ 2022 ಏಪ್ರಿಲ್‌ನಲ್ಲಿ ಒಂದನೇ ಹಂತದ (ಸೆಷನ್‌) ಪರೀಕ್ಷೆಯನ್ನು ಏಪ್ರಿಲ್ 16, 17, 18, 19, 20, 21, 2022 ರಂದು ನಡೆಸಿತ್ತು.

ಈಗ ಇದರ ಫಲಿತಾಂಶಗಳು ಬಂದಿವೆ.

ಅಭ್ಯರ್ಥಿಗಳು ತಮ್ಮ JEE (ಜಂಟಿ ಪ್ರವೇಶ ಪರೀಕ್ಷೆ) ಮೇನ್ಸ್ 2022 ಸೆಷನ್-1 ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ಅಧಿಕೃತ ವೆಬ್‌ಸೈಟ್ ಮೂಲಕ ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ ಅಥವಾ ಅಭ್ಯರ್ಥಿ ಲಾಗ್ ಇನ್ ಮೂಲಕ ಪರಿಶೀಲಿಸಬಹುದು. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಈಗಾಗಲೇ ಸೆಷನ್‌ಗಾಗಿ ಜಂಟಿ ಪ್ರವೇಶ ಮುಖ್ಯ ಪರೀಕ್ಷೆ 2022 2ರ ನೋಂದಣಿಯನ್ನು ಮುಕ್ತಾಯಗೊಳಿಸಿದೆ. ಅದಕ್ಕಾಗಿ ಪರೀಕ್ಷೆಗಳನ್ನು ಜುಲೈ 21 ರಿಂದ ಜುಲೈ 30, 2022 ರವರೆಗೆ ನಡೆಸಲು ನಿರ್ಧರಿಸಲಾಗಿದೆ.

ಜೆಇಇ ಮೇನ್ ಮುಖ್ಯ ಫಲಿತಾಂಶ ನೋಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ

1. JEEಯ ಅಧಿಕೃತ ವೆಬ್‌ಸೈಟ್ jeemain.nta.nic.in ಅಥವಾ NTA- nta.ac.inಗೆ ಭೇಟಿ ನೀಡಿ.

2. ಮುಖಪುಟದಲ್ಲಿ, JEE ಮುಖ್ಯ 2022 ಫಲಿತಾಂಶ ಎಂದು ಹೇಳುವ ಲಿಂಕ್ ಅನ್ನು ಕ್ಲಿಕ್ ಮಾಡಿ

3. ಹೊಸ ಪುಟದಲ್ಲಿ, ನಿಮ್ಮ ಲಾಗಿನ್ ವಿವರಗಳನ್ನು ನಮೂದಿಸಿ.

4.JEE ಮುಖ್ಯ ಫಲಿತಾಂಶ 2022 ಡೌನ್‌ಲೋಡ್ ಮಾಡಲು ನೇರ ಲಿಂಕ್ jeemain.nta.nic.in ಕ್ಲಿಕ್‌ ಮಾಡಿ

ಬಕ್ರೀದ್ ಸಂಭ್ರಮಕ್ಕೆ‌ ಜಮೀರ್ ಅಹ್ಮದ್ ಜೊತೆ‌ ಮುಸ್ಲಿಂ‌ ವೇಷ ತೊಟ್ಟ ಸಿದ್ದರಾಮಯ್ಯ | *Politics | OneIndia Kannada

5. ಈಗನಿಮ್ಮ JEE ಮುಖ್ಯ ಫಲಿತಾಂಶ ಸೆಷನ್ 1 ಅನ್ನು ಪ್ರದರ್ಶಿಸುತ್ತದೆ.

6. ಈಗ ಜೂನ್‌ನಲ್ಲಿ ನಡೆದ ಪರೀಕ್ಷೆಗಾಗಿ JEE ಮುಖ್ಯ ಸ್ಕೋರ್ ಕಾರ್ಡ್ 2022 ಅನ್ನು ಡೌನ್‌ಲೋಡ್ ಮಾಡಿ ತಿಳಿಯಬಹುದು

ಸೋಮವಾರ ಪ್ರಕಟವಾದ JEE ಮುಖ್ಯ 2022 ಸೆಷನ್ 1ರ ಫಲಿತಾಂಶದಲ್ಲಿ ಗುವಾಹಟಿಯ ಸ್ನೇಹಾ ಪರೀಕ್ ಅವರು 300ಕ್ಕೆ 300 ರಷ್ಟು ಪೂರ್ಣ ಅಂಕ ಪಡೆಯುವ ಮೂಲಕ ಉನ್ನತ ಶ್ರೇಣಿಯನ್ನು ಪಡೆದುಕೊಂಡಿದ್ದಾರೆ.

ಪರೀಕ್ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಟೆಕ್ ಅನ್ನು ಮುಂದುವರಿಸಲು ಬಯಸುತ್ತೇನೆ ಎಂದಿದ್ದಾರೆ. ಎಲ್ಲಾ ಐಐಟಿಗಳು ನುರಿತ ಅಧ್ಯಾಪಕರಿಂದ ಪ್ರತಿನಿಧಿಸಲ್ಪಡುತ್ತವೆ. ಹಾಗಾಗಿ ನಾನು ಬಯಸಿದ ಕೋರ್ಸ್ ಅನ್ನು ಉತ್ತಮವಾಗಿ ಬೋಧಿಸುವ ಯಾವುದೇ ಐಐಟಿಗೆ ಸೇರಲು ನಾನು ಸಿದ್ಧನಿದ್ದೇನೆ. ಇದು ಆದ್ಯತೆಯ ಆಯ್ಕೆಯಾಗಿ ಬಂದರೆ, ನಾನು ಐಐಟಿ ಬಾಂಬೆಯನ್ನು ಆರಿಸಿಕೊಳ್ಳುತ್ತೇನೆ ಎಂದು ಸ್ನೇಹಾ ಪರೀಕ್ ಹೇಳಿದ್ದಾರೆ.

By Punith BU

source: oneindia.com

Disclaimer

Disclaimer

This story is auto-aggregated by a computer program and has not been created or edited by Dailyhunt Publisher: OneIndia Kannada

#Hashtags