ಉದಯವಾಣಿ

1.4M Followers

ಸೇವೆಯಲ್ಲಿಲ್ಲದಾಗ "ದಿವ್ಯಾಂಗ'ರಾದರೆ ಪಿಂಚಣಿಯಿಲ್ಲ! ಸುಪ್ರೀಂ ಕೋರ್ಟ್‌ ತೀರ್ಪು

20 Jul 2022.06:55 AM

ನವದೆಹಲಿ: ಯೋಧನೊಬ್ಬ ದೇಶ ಸೇವೆಯಲ್ಲಿ ನಿರತನಾಗಿದ್ದಾಗ ಅಂಗವೈಕಲ್ಯಕ್ಕೆ ತುತ್ತಾದರೆ ಮಾತ್ರ ಆತ ಯೋಧರಿಗೆ ನೀಡಲಾಗುವ “ದಿವ್ಯಾಂಗ ಪಿಂಚಣಿ’ ಸೌಲಭ್ಯಕ್ಕೆ ಅರ್ಹನಾಗುತ್ತಾನೆ ಎಂದು ಸುಪ್ರೀಂ ಕೋರ್ಟ್‌ ಐತಿಹಾಸಿಕ ತೀರ್ಪು ನೀಡಿದೆ.

ಸುಮಾರು 23 ವರ್ಷಗಳ ಹಿಂದಿನ ಪ್ರಕರಣವೊಂದರ ವಿಚಾರಣೆ ನಡೆಸಿರುವ ನ್ಯಾಯಪೀಠ, ಸೇವೆಯಲ್ಲಿಲ್ಲದ ವೇಳೆ ಯೋಧನೊಬ್ಬ ಅಪಘಾತ ಅಥವಾ ಮತ್ತಿತರ ಕಾರಣದಿಂದ ಅಂಗವೈಕಲ್ಯಕ್ಕೀಡಾದರೆ, ಅಂಥವರಿಗೆ ಈ ಸೌಲಭ್ಯ ನೀಡಲು ಸಾಧ್ಯವಿಲ್ಲ. ಆದರೆ, ಸೇವೆಯಲ್ಲಿದ್ದಾಗಲೇ ಗಾಯಗೊಂಡು ವಿಕಲತೆಗೆ ಒಳಗಾಗಿದ್ದು ಆ ವಿಕಲತೆ ಶೇ. 20ಕ್ಕಿಂತ ಹೆಚ್ಚಿದ್ದರೆ, ಅಥವಾ ಈ ಹಿಂದೆ ಸೇನಾ ಸೇವೆಯಲ್ಲಿದ್ದಾಗ ಆಗಿದ್ದ ಲಘು ಅಂಗವೈಕಲ್ಯವು ಸೇವೆಯಲ್ಲಿದ್ದಾಗ ಉಲ್ಬಣಗೊಂಡರೆ ಅಂಥವರಿಗೆ ದಿವ್ಯಾಂಗ ಪಿಂಚಣಿ ಸೌಲಭ್ಯ ನೀಡಬಹುದು ಎಂದು ಸ್ಪಷ್ಟವಾಗಿ ಹೇಳಿದೆ.

1999ರಲ್ಲಿ ಯೋಧರೊಬ್ಬರು ರಜೆಯ ಮೇಲೆ ಊರಿಗೆ ತೆರಳಿದ್ದಾಗ ರಸ್ತೆ ಅಪಘಾತದಲ್ಲಿ ಅಂಗವಿಕಲರಾಗಿದ್ದರು. ಅವರಿಗೆ ಸೇನಾ ನ್ಯಾಯಾಲಯ ಅವರಿಗೆ ಪಿಂಚಣಿಯ ಸೌಲಭ್ಯ ಕಲ್ಪಿಸಿತ್ತು. ಆದರೆ, ಇದನ್ನು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Udayavani

#Hashtags