Kannada News Now

1.8M Followers

BIGG NEWS : ಪಡಿತರ ಚೀಟಿದಾರರೇ ಗಮನಿಸಿ : ಇ-ಕೆವೈಸಿ ಮಾಡಿಸಿಕೊಳ್ಳಲು ಜುಲೈ 30 ಕೊನೆಯ ದಿನ

13 Jul 2022.09:11 AM

ಬೆಂಗಳೂರು : ಸರ್ಕಾರದ ನಿರ್ದೇಶನಗಳಂತೆ ಪಡಿತರ ಚೀಟಿಯಲ್ಲಿನ ಪ್ರತಿಯೊಬ್ಬ ಸದಸ್ಯರು ತಮಗೆ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ, ಬಯೋಮೆಟ್ರಿಕ್ ನೀಡಿ ಇ-ಕೆವೈಸಿ (ಜೀವ ಮಾಪಕ/ಹೆಬ್ಬಟ್ಟು ಗುರುತಿನ ದೃಢೀಕರಣ) ಮಾಡಿಸಿಕೊಳ್ಳುವುದು ಅತೀ ಅವಶ್ಯವಾಗಿದೆ.

Watch Video: ಡಾರ್ಜಿಲಿಂಗ್‌ನ ರಸ್ತೆ ಬದಿ ನಿಂತು ಜನರಿಗೆ 'ಪಾನಿ ಪುರಿ' ಸರ್ವ್‌ ಮಾಡಿದ ಪ. ಬಂಗಾಳ ಸಿಎಂ ಮಮತಾ ಬ್ಯಾನರ್ಜಿ!

ಪಡಿತರ ಚೀಟಿದಾರರು ತಮ್ಮ ಕುಟುಂಬದ ಎಲ್ಲಾ ಸದಸ್ಯರ ವಿವರಗಳೊಂದಿಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಿಸಿಕೊಳ್ಳಬೇಕಿದೆ. ಇದುವರೆಗೆ ಮೂಲ ನ್ಯಾಯಬೆಲೆ ಅಂಗಡಿಗಳಲ್ಲಿ ಮಾತ್ರ ಇ-ಕೆವೈಸಿ ಮಾಡಲು ಅವಕಾಶವಿತ್ತು. ಪ್ರಸ್ತುತ ರಾಜ್ಯದ ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಪೋರ್ಟೆಬಿಲಿಟಿ ಮುಖಾಂತರ ಇ-ಕೆವೈಸಿ ಮಾಡಬಹುದಾಗಿರುತ್ತದೆ. ವಲಸೆ ಹೋಗಿ ಅಥವಾ ಬೇರೆ ಜಿಲ್ಲೆಗೆ ಕೆಲಸ ನಿಮಿತ್ತ ತೆರಳಿರುವ ವ್ಯಕ್ತಿಗಳು ಮೂಲ ನ್ಯಾಯಬೆಲೆ ಅಂಗಡಿಗಳಿಗೆ ಬಂದು ಇ-ಕೆವೈಸಿ ಮಾಡಿಸಿರುವುದಿಲ್ಲ. ಆದ್ದರಿಂದ ಅಂತವರಿಗೆ ಅನುಕೂಲವಾಗಲು ಪೋರ್ಟೆಬಿಲಿಟಿಯಲ್ಲಿ ಇ-ಕೆವೈಸಿಯನ್ನು ಮಾಡಲು ಈಗ ಅವಕಾಶ ಕಲ್ಪಿಸಲಾಗಿದೆ.

2002 ರ ಗುಜರಾತ್ ಗಲಭೆ ಪ್ರಕರಣದಲ್ಲಿ ಸುಳ್ಳು ಸಾಕ್ಷ್ಯಾ ಸೃಷ್ಟಿ ಆರೋಪ: ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅರೆಸ್ಟ್

ಕರ್ನಾಟಕದ ಯಾವುದೇ ಭಾಗದಲ್ಲಿರುವ ಪಡಿತರ ಚೀಟಿದಾರರು ತಮ್ಮ ಸಮೀಪದ ಯಾವುದೇ ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ ಇ-ಕೆವೈಸಿ ಮಾಡಿಕೊಳ್ಳಲು ಸರ್ಕಾರವು ಅವಕಾಶ ಕಲ್ಪಿಸಿದ್ದು, ಇ-ಕೆವೈಸಿ ಮಾಡಿಸಿಕೊಳ್ಳದೇ ಇರುವ ಕಾರ್ಡಿನಲ್ಲಿರುವ ಸದಸ್ಯರು ಕಡ್ಡಾಯವಾಗಿ 2022ರ ಜುಲೈ 30 ರೊಳಗಾಗಿ ಇ-ಕೆವೈಸಿ ಮಾಡಿಸಿಕೊಳ್ಳಬೇಕು.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags