Kannada News Now

1.8M Followers

SIM Card Rules : ಒಂದು 'ಆಧಾರ್‌ ಕಾರ್ಡ್‌'ನಿಂದ ಎಷ್ಟು 'SIM' ಖರೀದಿಸ್ಬೋದು.? ನಿಮ್ಮ ಹೆಸ್ರಲ್ಲಿರೋ 'ಸಿಮ್‌'ಗಳೆಷ್ಟು? ಈ ರೀತಿ ಚೆಕ್‌ ಮಾಡಿ.!

17 Jul 2022.07:02 AM

ನವದೆಹಲಿ : ಮಾರುಕಟ್ಟೆಯಲ್ಲಿ ಸಿಮ್ ಕಾರ್ಡ್ ಖರೀದಿಸೋಕೆ ನಿಮಗೆ ಐಡಿ ಪುರಾವೆ ಬೇಕು. ಇದಕ್ಕಾಗಿ ಜನ ಆಧಾರ್ ಕಾರ್ಡ್ ಸಲ್ಲಿಸುತ್ತಾರೆ. SIM ಕಾರ್ಡ್ ಪಡೆಯಲು, KYC ಮಾಡುವುದು ಅವಶ್ಯಕ. ಇದರ ನಂತ್ರವೇ ಟೆಲಿಕಾಂ ಕಂಪನಿಯು ನಮ್ಮ ಸಿಮ್ ಸಕ್ರಿಯಗೊಳಿಸುತ್ತದೆ.

ಹಾಗಾಗಿ ಸಿಮ್ ಕಾರ್ಡ್ ಪಡೆಯಲು ನೀವು ಆಧಾರ್ ಕಾರ್ಡ್ ಹೊಂದಿರುವುದು ಬಹಳ ಮುಖ್ಯ. ಇಂತಹ ಪರಿಸ್ಥಿತಿಯಲ್ಲಿ ವ್ಯಕ್ತಿಯೊಬ್ಬನ ಹೆಸರಿನಲ್ಲಿ ಹಲವು ಸಿಮ್‌ಗಳು ಸಕ್ರಿಯವಾಗಿರುವಾಗಲೂ ಇಂತಹ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಅಚ್ಚರಿಯೆಂದ್ರೆ, ಅವ್ರಿಗೂ ಇದರ ಅರಿವಿಲ್ಲ.

ಹಲವು ಬಾರಿ ಈ ಸಿಮ್ʼಗಳಿಂದ ಅಕ್ರಮ ಚಟುವಟಿಕೆಗಳೂ ನಡೆಯುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಎಷ್ಟು ಸಿಮ್‌ಗಳು ಸಕ್ರಿಯವಾಗಿವೆ ಅನ್ನೋದನ್ನ ಕಾಲಕಾಲಕ್ಕೆ ಪರಿಶೀಲಿಸುವುದು ಬಹಳ ಮುಖ್ಯ. ನೀವು ಸಹ ಇದರ ಬಗ್ಗೆ ತಿಳಿದುಕೊಳ್ಳಲು ಬಯಸಿದ್ರೆ, ಅದನ್ನ ಹೇಗೆ ಪರಿಶೀಲಿಸುವುದು? ಅನ್ನೋದನ್ನ ತಿಳಿಯೋಣಾ ಬನ್ನಿ.

ಒಂದು ಆಧಾರ್‌ನಲ್ಲಿ ಎಷ್ಟು ಸಿಮ್‌ಗಳನ್ನು ಪಡೆಯಬಹುದು?
ಸರ್ಕಾರದ ಟೆಲಿಕಾಂ ಇಲಾಖೆ ಮಾಡಿರುವ ನಿಯಮಗಳ ಪ್ರಕಾರ ಆಧಾರ್ ಕಾರ್ಡ್‌ನಲ್ಲಿ ಒಟ್ಟು 9 ಸಿಮ್‌ಗಳನ್ನು ತೆಗೆದುಕೊಳ್ಳಬಹುದು. ಆದ್ರೆ, ಈ ಎಲ್ಲಾ ಸಿಮ್‌ಗಳನ್ನ ಒಬ್ಬ ಆಪರೇಟರ್ ಮಾತ್ರ ಬಳಸಲಾಗುವುದಿಲ್ಲ. ನೀವು ಒಂದು ಸಮಯದಲ್ಲಿ 6 ಸಿಮ್ ಕಾರ್ಡ್‌ಗಳನ್ನ ಬಳಸಬಹುದು. ನಿಮ್ಮ ಆಧಾರ್‌ನಲ್ಲಿ ಎಷ್ಟು ಸಿಮ್‌ಗಳು ಸಕ್ರಿಯವಾಗಿವೆ ಎಂದು ನಿಮಗೆ ತಿಳಿದಿಲ್ಲದಿದ್ದರೆ, ಕೆಲವು ಸರಳ ಹಂತಗಳನ್ನ ಅನುಸರಿಸುವ ಮೂಲಕ ನೀವು ಅದನ್ನು ಸುಲಭವಾಗಿ ಕಂಡುಹಿಡಿಯಬಹುದು.

ಟೆಲಿಕಾಂ ಪೋರ್ಟಲ್‌ನಲ್ಲಿ ಪರಿಶೀಲಿಸಿ..!
ಟೆಲಿಕಾಂ ಇಲಾಖೆಯ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ನಿಮ್ಮ ಆಧಾರ್‌ನಲ್ಲಿ ಎಷ್ಟು ಸಿಮ್‌ಗಳು ಸಕ್ರಿಯವಾಗಿವೆ ಎಂಬುದನ್ನ ನೀವು ಸುಲಭವಾಗಿ ಪರಿಶೀಲಿಸಬಹುದು. ಇದರೊಂದಿಗೆ, ನೀವು ಪಟ್ಟಿಯಲ್ಲಿ ನಕಲಿ ಸಿಮ್ ಕಂಡುಕೊಂಡರೆ, ನೀವು ಅದನ್ನ ನಿರ್ಬಂಧಿಸಬಹುದು. ಇದರೊಂದಿಗೆ, ಬಳಕೆಯಲ್ಲಿಲ್ಲದ ಸಿಮ್ ಇದ್ರೆ, ಅದನ್ನೂ ನಿಮ್ಮ ಆಧಾರ್‌ನಿಂದ ತೆಗೆದುಹಾಕಬೋದು. ಇದಕ್ಕಾಗಿ ಆರಂಭಿಸಿರುವ ಪೋರ್ಟಲ್‌ನ ಹೆಸರು ಟೆಲಿಕಾಂ ಅನಾಲಿಟಿಕ್ಸ್ ಫಾರ್ ಫ್ರಾಡ್ ಮ್ಯಾನೇಜ್‌ಮೆಂಟ್ ಮತ್ತು ಕನ್ಸ್ಯೂಮರ್ ಪ್ರೊಟೆಕ್ಷನ್ (TAFCO).

ಲಿಂಕ್ ಮಾಡಲಾದ ಸಿಮ್ ಸಂಖ್ಯೆಯನ್ನ ಈ ರೀತಿಯಲ್ಲಿ ಪರಿಶೀಲಿಸಿ..!
1. ಇದಕ್ಕಾಗಿ, ಮೊದಲು ವೆಬ್‌ಸೈಟ್ https://www.tafcop.dgtelecom.gov.in/ ಗೆ ಭೇಟಿ ನೀಡಿ.
2. ಇಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನ ನಮೂದಿಸಿ. ಮುಂದೆ, ಮೊಬೈಲ್‌ನಲ್ಲಿ OTP ಬರುತ್ತದೆ, ಅದನ್ನೂ ನಮೂದಿಸಬೇಕು.
3. ನೀವು OTP ಭರ್ತಿ ಮಾಡಿದ ತಕ್ಷಣ, ಆಧಾರ್‌ನೊಂದಿಗೆ ಲಿಂಕ್ ಮಾಡಲಾದ ಸಿಮ್‌ನ ಪಟ್ಟಿಯು ನಿಮ್ಮ ಮುಂದೆ ತೆರೆಯುತ್ತದೆ.
4. ಮತ್ತೊಂದೆಡೆ, ಅಕ್ರಮ ಸಂಖ್ಯೆ ಕಂಡುಬಂದ್ರೆ, ನೀವು ಅದನ್ನ ನಿರ್ಬಂಧಿಸಬಹುದು.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags