Suvarna News

1.4M Followers

ಐಟಿ ರಿಟರ್ನ್ ಸಲ್ಲಿಕೆ ಮಾಡಿರೋರು ರೀಫಂಡ್ ಸ್ಟೇಟಸ್ ಚೆಕ್ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ

08 Aug 2022.2:34 PM

Business Desk:2022-2023ನೇ ಮೌಲ್ಯಮಾಪನ ವರ್ಷದ ಆದಾಯ ತೆರಿಗೆ ರಿಟರ್ನ್ (ಐಟಿಆರ್ ) ಸಲ್ಲಿಕೆ ಗಡುವು ಜುಲೈ 31ಕ್ಕೆ ಮುಕ್ತಾಯವಾಗಿದೆ. ಈ ಐಟಿಆರ್ 2021-22ನೇ ಹಣಕಾಸು ಸಾಲಿನಲ್ಲಿ ಗಳಿಸಿದ ಆದಾಯಕ್ಕೆ ಸಲ್ಲಿಕೆ ಮಾಡುವ ರಿಟರ್ನ್ ಆಗಿದೆ.

ಐಟಿಆರ್ ಸಲ್ಲಿಕೆಗೆ ಕೊನೆಯ ದಿನವಾದ ಜುಲೈ 31ರ ತನಕ ಒಟ್ಟು 58.3 ಮಿಲಿಯನ್ ಆದಾಯ ತೆರಿಗೆ ರಿಟರ್ನ್ ಗಳು ಸಲ್ಲಿಕೆಯಾಗಿವೆ. ಇನ್ನು ಕೊನೆಯ ದಿನವಾದ ಜುಲೈ 31ರಂದು 7.24 ಮಿಲಿಯನ್ ಅಥವಾ ಒಟ್ಟು ರಿಟರ್ನ್ ನ ಸುಮಾರು 1/8ರಷ್ಟನ್ನು ಜುಲೈ 31ರಂದೇ ಫೈಲ್ ಮಾಡಲಾಗಿತ್ತು. ಐಟಿಆರ್ ಸಲ್ಲಿಕೆ ಅವಧಿ ಮುಗಿದಿದೆ, ಇನ್ನೂ ಸಲ್ಲಿಕೆ ಮಾಡದಿರೋರಿಗೆ ವಿಳಂಬ ಐಟಿಆರ್ ಸಲ್ಲಿಕೆಗೆ ಅವಕಾಶವಿದೆ. ಆದ್ರೆ ದಂಡ ಕಟ್ಟಬೇಕಾಗುತ್ತದೆ ಅಷ್ಟೇ. ಇನ್ನು ನೀವು ಈಗಾಗಲೇ ಐಟಿಆರ್ ಸಲ್ಲಿಕೆ ಮಾಡಿದ್ರೆ ನಿಮಗೆ ತೆರಿಗೆ ಹಣ ಮರುಪಾವತಿ ಆಗುತ್ತದೆ. ಹಾಗಾದ್ರೆ ನಿಮ್ಮ ಖಾತೆಗೆ ಆದಾಯ ತೆರಿಗೆ ಹಣ ಮರುಪಾವತಿ ಆಗಿದೆಯೋ ಇಲ್ಲವೋ ಎಂದು ಗೊತ್ತಾಗೋದು ಹೇಗೆ? ಚೆಕ್ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ.

ಆನ್ ಲೈನ್ ನಲ್ಲಿ ಚೆಕ್ ಮಾಡೋದು ಹೇಗೆ?
NSDL ವೆಬ್ ಸೈಟ್ ನಲ್ಲಿ ನೀವು ಆದಾಯ ತೆರಿಗೆ ಮರುಪಾವತಿ (Refund) ಸ್ಟೇಟಸ್ (Status) ಚೆಕ್ ಮಾಡಬಹುದು.
*ಮೊದಲಿಗೆ NSDL ವೆಬ್ ಸೈಟ್ https://tin.tin.nsdl.com/oltas/servlet/RefundStatusTrack ಭೇಟಿ ನೀಡಿ.
*ಈ ವೆಬ್ ಸೈಟ್ ಹೋಮ್ ಪೇಜ್ ನಲ್ಲಿ ಪ್ಯಾನ್ ಸ್ಟೇಟಸ್ ಚೆಕ್ ಮಾಡಲು ಕ್ಲಿಕ್ ಮಾಡಿ ಎಂಬ ಟ್ಯಾಬ್ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.
*ಮುಂದಿನ ಪುಟದಲ್ಲಿ ನಿಮ್ಮ ಪ್ಯಾನ್ ಸಂಖ್ಯೆ, ಅಸೆಸ್ ಮೆಂಟ್ ವರ್ಷ ಹಾಗೂ ಕ್ಯಾಪ್ಚ ಕೋಡ್ ದಾಖಲಿಸಿ. ಆ ಬಳಿಕ ಮುಂದುವರಿಯಿರಿ (Proceed) ಆಯ್ಕೆ ಮೇಲೆ ಕ್ಲಿಕ್ ಮಾಡಿ.
*ಈಗ ನಿಮ್ಮ ಐಟಿಆರ್ ಮರುಪಾವತಿ ಸ್ಟೇಟಸ್ ಕಾಣಿಸುತ್ತದೆ.

ಎಸ್ ಬಿಐ,ಎಚ್ ಡಿಎಫ್ ಸಿ, ಐಸಿಐಸಿಐ ಬ್ಯಾಂಕಿನ ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಎಷ್ಟಿರಬೇಕು? ದಂಡ ಎಷ್ಟು?

ಮರುಪಾವತಿ ಹಣ ಎಲ್ಲಿಗೆ ಬರುತ್ತದೆ?
ಬ್ಯಾಂಕ್ ಖಾತೆ: NSDL ವೆಬ್ ಸೈಟ್ ನಲ್ಲಿರುವ ಮಾಹಿತಿ ಪ್ರಕಾರ ಮರುಪಾವತಿಯನ್ನು ಎರಡು ವಿಧಾನಗಳಲ್ಲಿ ಮಾಡಲಾಗುತ್ತದೆ. ಒಂದು ಆರ್ ಟಿಜಿಎಸ್ (RTGS) /ಎನ್ ಇಸಿಎಸ್ ( NECS) ಮೂಲಕ. ಈ ವಿಧಾನದಲ್ಲಿ ಹಣವನ್ನು ತೆರಿಗೆದಾರರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಹೀಗಾಗಿ ತೆರಿಗೆದಾರರ ಬ್ಯಾಂಕ್ ಖಾತೆ, ಬ್ಯಾಂಕ್ ಶಾಖೆಯ ಎಂಐಸಿಆರ್ ಕೋಡ್ /ಐಎಫ್ ಎಸ್ ಸಿ ಕೋಡ್ ಹಾಗೂ ಸರಿಯಾದ ಸಂವಹನ ವಿಳಾಸವನ್ನು ನೀಡೋದು ಕಡ್ಡಾಯ.
ಚೆಕ್: ಚೆಕ್ ಮೂಲಕ ಕೂಡ ಆದಾಯ ತೆರಿಗೆ ಮರುಪಾವತಿ ಮಾಡಲಾಗುತ್ತದೆ. ಹೀಗಾಗಿ ಬ್ಯಾಂಕ್ ಖಾತೆ ಸಂಖ್ಯೆ ಹಾಗೂ ಸಮರ್ಪಕವಾದ ವಿಳಾಸ ನೀಡೋದು ಕಡ್ಡಾಯ.

ಎಷ್ಟು ದಿನಗಳ ಬಳಿಕ ರಿಫಂಡ್ ಸಿಗುತ್ತದೆ?
ತೆರಿಗೆದಾರರು ಮರುಪಾವತಿ ಸ್ಟೇಟಸ್ ಅನ್ನು ಮೌಲ್ಯಮಾಪನ ಅಧಿಕಾರಿ ರಿಫಂಡ್ ಬ್ಯಾಂಕರ್ ಗೆ ಕಳುಹಿಸಿದ 10 ದಿನಗಳ ಬಳಿಕವಷ್ಟೇ ತೆರಿಗೆದಾರರು ಮರುಪಾವತಿ ಸ್ಟೇಟಸ್ ನೋಡಲು ಸಾಧ್ಯವಾಗುತ್ತದೆ. ಹೀಗಾಗಿ ಅದಕ್ಕೂ ಮುನ್ನ ಮರುಪಾವತಿ ಸ್ಟೇಟಸ್ ನೋಡಲು ಸಾಧ್ಯವಾಗೋದಿಲ್ಲ.

ವಿಮಾನಯಾನ ಸೇವೆ ಆರಂಭಿಸಿದ 'ಆಕಾಶ ಏರ್‌': ಶೀಘ್ರದಲ್ಲೇ ಬೆಂಗಳೂರು - ಕೊಚ್ಚಿ ನಡುವೆ ಫ್ಲೈಟ್‌

ಮರುಪಾವತಿ ತಡವಾಗಲು ಇದೂ ಕಾರಣವಾಗಿರಬಹುದು
ಆದಾಯ ತೆರಿಗೆ ಇಲಾಖೆ ನಿಮ್ಮ ತೆರಿಗೆ ರಿಫಂಡ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದರೂ ನಿಮ್ಮ ಬ್ಯಾಂಕ್ ಖಾತೆಗೆ ಬ್ಯಾಂಕರ್ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ಕ್ರೆಡಿಟ್ ಮಾಡಿರೋದಿಲ್ಲ. ಹೀಗಾಗಿ ಇಂಥ ಸಂದರ್ಭದಲ್ಲಿ ನೀವು ಆದಾಯ ತೆರಿಗೆ ಮಾಹಿತಿಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಯನ್ನು ಪರಿಶೀಲಿಸಬೇಕು. ಆದಾಯ ತೆರಿಗೆ ಪೋರ್ಟಲ್ ನಿಮ್ಮ ಪ್ಯಾನ್ ಜೊತೆಗೆ ಲಿಂಕ್ ಆಗಿರುವ ಅನೇಕ ಬ್ಯಾಂಕ್ ಖಾತೆಗಳನ್ನು ತೋರಿಸಿರುವ ಸಾಧ್ಯತೆ ಇದೆ. ಹೀಗಾಗಿ ರಿಫಂಡ್ ಮೊತ್ತ ಕ್ರೆಡಿಟ್ ಆಗಲು ಒಂದು ನಿರ್ದಿಷ್ಟ ಬ್ಯಾಂಕ್ ಖಾತೆಯನ್ನು ನಮೂದಿಸಿ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Asianet News Kannada

#Hashtags