ವಿಜಯವಾಣಿ

505k Followers

ಪತ್ನಿಯದ್ದೇ ತಪ್ಪಿದ್ದರೂ, ಸರಿಯಾಗಿ ಸಂಸಾರ ಮಾಡದಿದ್ದರೂ ಜೀವನಾಂಶ ಕೊಡಬೇಕಾ? ಕಾನೂನು ಹೇಳೋದೇನು?

09 Aug 2022.5:27 PM

 ಪ್ರಶ್ನೆ: ನಾನು ಸರ್ಕಾರಿ ನೌಕರ.

ಅಂಗವಿಕಲ. ಒಂದು ಕಾಲಿಗೆ ಪೋಲಿಯೋ ಆಗಿದೆ. ನನ್ನ ಸಂಬಳ ಒಂದು ಲಕ್ಷ ಇದೆ. ನನ್ನ ಹೆಂಡತಿ ಮದುವೆಯಾದ ಒಂದು ತಿಂಗಳಿಗೇ ಜಗಳ ಮಾಡಿಕೊಂಡು ತವರಿಗೆ ಹೋದಳು. ನಾಲ್ಕೈದು ಸಾರಿ ಹೀಗೇ ಆಯಿತು. ನಾವೇ ಕರೆದುಕೊಂಡು ಬಂದೆವು. ಈಗ ಬರುವುದೇ ಇಲ್ಲ ಎನ್ನುತ್ತಿದ್ದಾಳೆ, ನನಗೆ ಇಷ್ಟ ಇಲ್ಲ ಎನ್ನುತ್ತಾಳೆ. ನನ್ನ ಜೊತೆ ಹೊರಗೆ ಬರುತ್ತಿರಲಿಲ್ಲ. ರೂಮಿನಲ್ಲಿ ಒಬ್ಬಳೇ ಇರುತ್ತಿದ್ಳು. ನನ್ನ ತಂದೆ ತಾಯಿಯ ಹತ್ತಿರ ಸರಿಯಾಗಿ ಮಾತಾಡುತ್ತಿರಲಿಲ್ಲ. ಯಾವಾಗಲೂ ಫೋನಿನಲ್ಲಿಯೇ ಇರುತ್ತಿದ್ದಳು. ನನ್ನನ್ನು ಮತ್ತು ನನ್ನ ವಯಸ್ಸಾದ ತಂದೆ ತಾಯಿಯನ್ನು ನೋಡಿಕೊಂಡು ಹೋಗುತ್ತಾಳೆ ಎನ್ನುವ ಭರವಸೆಯಿಂದ ಬಡ ಹುಡುಗಿಯನ್ನು ಮದುವೆ ಆಗಿದ್ದೆ. ಈಗ ಏನು ಮಾಡುವುದು? ಆಕೆ ನನ್ನಿಂದ ಜೀವನಾಂಶ ಕೇಳಬಹುದೇ?

ಉತ್ತರ: ನಿಮ್ಮ ಪತ್ನಿಗೆ ತನ್ನನ್ನು ತಾನು ಪೋಷಿಸಿಕೊಳ್ಳುವ ಚೈತನ್ಯ ಇಲ್ಲದಿದ್ದರೆ, ಅವಳಿಗೆ ನೀವು ಜೀವನಾಂಶ ಕೊಡಬೇಕಾಗುತ್ತದೆ. ಅಂದರೆ ನಿಮ್ಮ ಪತ್ನಿಗೆ ಕೆಲಸ/ಗಳಿಕೆ /ತನ್ನದೇ ಆದ ವರಮಾನ ಇಲ್ಲದೇ ಹೋದರೆ ಪತಿಯಾದ ನೀವು ಆಕೆಗೆ ಕೆಲಸ ಸಿಗುವವರೆಗೆ ಜೀವನಾಂಶವನ್ನು ಕೊಡಲೇಬೇಕಾಗುತ್ತದೆ. ವಿಚ್ಛೇದನ ಆದರೂ ಆಕೆ ಮರುಮದುವೆ ಆಗುವವರೆಗೆ ಜೀವನಾಂಶ ಕೊಡಲೇ ಬೇಕಾಗುತ್ತದೆ.

ನಿಮ್ಮ ಪತ್ನಿ ನಿಮ್ಮ ಜೊತೆ ಬಂದು ಸಂಸಾರ ಮಾಡಬೇಕೆಂದು ನೀವು ದಾಂಪತ್ಯ ಜೀವನದ ಹಕ್ಕುಗಳ ಪುನರ್‌ ಸ್ಥಾಪನೆಗೆ ಪ್ರಕರಣ /ರೆಸ್ಟಿಟ್ಯೂಷನ್‌ ಆಫ್‌ ಕಾಂಜುಗಲ್‌ ರೈಟ್ಸ್‌ ದಾಖಲಿಸಬಹುದು. ಆಗ ಆಕೆಗೆ ನೋಟಿಸು ಜಾರಿ ಆದ ಮೇಲೆ ಪ್ರಕರಣವನ್ನು ಮಧ್ಯಸ್ಥಿಕೆಗೆ ಕಳಿಸಲು ಕೇಳಿಕೊಳ್ಳಿ. ಅಲ್ಲಿ ನುರಿತ ಮಧ್ಯಸ್ಥಿಕೆಗಾರರ ಸಹಾಯದಿಂದ ನಿಮ್ಮ ಸಮಸ್ಯೆಗೆ ಪರಿಹಾರ ಸಿಗಬಹುದು.

ಇಲ್ಲದಿದ್ದರೆ, ಪ್ರಕರಣ ದಾಖಲಿಸುವ ಮುಂಚೆ ನಿಮ್ಮ ಪತ್ನಿ ಇರುವ ತಾಲ್ಲಕಿನ ನ್ಯಾಯಾಲಯದಲ್ಲಿರುವ ಮಧ್ಯಸ್ಥಿಕಾ ಕೇಂದ್ರಕ್ಕೆ ಒಂದು ಅರ್ಜಿ ಕೊಡಿ. ಆ ಆರ್ಜಿಯಲ್ಲಿ 'ನಮ್ಮಿಬ್ಬರ ಮಧ್ಯೆ ದಾಂಪತ್ಯ ಜೀವನದ ಕೆಲವು ಸಮಸ್ಯೆಗಳಿವೆ. ಅದನ್ನು ವ್ಯಾಜ್ಯ ಪೂರ್ವ ಮಧ್ಯಸ್ಥಿಕೆಯಿಂದ / 'ಪ್ರೀ ಲಿಟಿಗೇಷನ್‌ ಮೀಡಿಯೇಷನ್‌' ಮೂಲಕ ಪರಿಹರಿಸಿಕೊಡಿ 'ಎಂದು ಕೇಳಿಕೊಳ್ಳಿ. ಅಲ್ಲಿ ನಿಮ್ಮ ಇಬ್ಬರನ್ನೂ , ನಿಮ್ಮಿಬ್ಬರ ಸಂಬಂಧಿಕರನ್ನೂ ಕರೆಯಿಸಿ ಮಾತಾಡಿ ಸಮಸ್ಯೆ ಬಗೆಹರಿಯಲು ಸಹಾಯ ಮಾಡುತ್ತಾರೆ.

ಅಜ್ಜಿಗೆ ಅವರ ತಂದೆಯಿಂದ ಬಂದ ಆಸ್ತಿಯನ್ನು ವಿಲ್‌ ಮಾಡಬಹುದೇ? ಕಾನೂನು ಹೇಳುವುದು ಹೀಗೆ..

ತಂದೆಯ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೆ ಪಾಲು ಹೇಗೆ? ದಾನ ಪತ್ರ ಮಾಡುವಾಗ ಈ ಕಾನೂನು ತಿಳಿದಿರಲಿ…

ಪ್ರಶ್ನೆ: ನಾನು ಸರ್ಕಾರಿ ನೌಕರ. ಅಂಗವಿಕಲ. ಒಂದು ಕಾಲಿಗೆ ಪೋಲಿಯೋ ಆಗಿದೆ. ನನ್ನ ಸಂಬಳ ಒಂದು ಲಕ್ಷ ಇದೆ. ನನ್ನ ಹೆಂಡತಿ ಮದುವೆಯಾದ ಒಂದು ತಿಂಗಳಿಗೇ ಜಗಳ ಮಾಡಿಕೊಂಡು ತವರಿಗೆ ಹೋದಳು. ನಾಲ್ಕೈದು ಸಾರಿ ಹೀಗೇ ಆಯಿತು. ನಾವೇ ಕರೆದುಕೊಂಡು ಬಂದೆವು. ಈಗ ಬರುವುದೇ ಇಲ್ಲ ಎನ್ನುತ್ತಿದ್ದಾಳೆ, ನನಗೆ ಇಷ್ಟ ಇಲ್ಲ ಎನ್ನುತ್ತಾಳೆ. ನನ್ನ ಜೊತೆ ಹೊರಗೆ ಬರುತ್ತಿರಲಿಲ್ಲ. ರೂಮಿನಲ್ಲಿ ಒಬ್ಬಳೇ ಇರುತ್ತಿದ್ಳು. ನನ್ನ ತಂದೆ ತಾಯಿಯ ಹತ್ತಿರ ಸರಿಯಾಗಿ ಮಾತಾಡುತ್ತಿರಲಿಲ್ಲ. ಯಾವಾಗಲೂ ಫೋನಿನಲ್ಲಿಯೇ ಇರುತ್ತಿದ್ದಳು. ನನ್ನನ್ನು ಮತ್ತು ನನ್ನ ವಯಸ್ಸಾದ ತಂದೆ ತಾಯಿಯನ್ನು ನೋಡಿಕೊಂಡು ಹೋಗುತ್ತಾಳೆ ಎನ್ನುವ ಭರವಸೆಯಿಂದ ಬಡ ಹುಡುಗಿಯನ್ನು ಮದುವೆ ಆಗಿದ್ದೆ. ಈಗ ಏನು ಮಾಡುವುದು? ಆಕೆ ನನ್ನಿಂದ ಜೀವನಾಂಶ ಕೇಳಬಹುದೇ?

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Vijayvani

#Hashtags