Kannada News Now

1.8M Followers

BIG NEWS: 'ಕರ್ನಾಟಕ ಎಸಿಬಿ' ರದ್ದು, ಬಾಕಿ ಪ್ರಕರಣ ಲೋಕಾಯುಕ್ತಕ್ಕೆ ವರ್ಗಾಯಿಸಿ 'ಹೈಕೋರ್ಟ್' ಮಹತ್ವದ ಆದೇಶ | HC abolishes Karnataka ACB

11 Aug 2022.3:47 PM

ಬೆಂಗಳೂರು: ಕರ್ನಾಟಕ ಎಸಿಬಿ ( Karnataka ACB ) ರದ್ದು, ಬಾಕಿ ಉಳಿದಿರುವ ಪ್ರಕರಣಗಳನ್ನು ಲೋಕಾಯುಕ್ತ ಪೊಲೀಸ್ ( Lokayukta Police ) ವಿಭಾಗಕ್ಕೆ ವರ್ಗಾಯಿಸಿದ ಹೈಕೋರ್ಟ್ ( Karnataka High Court ) ಮಹತ್ವದ ಆದೇಶವನ್ನು ಹೊರಡಿಸಿದೆ.

ಕಾಂಗ್ರೆಸ್ ನ ಸರ್ಕಾರ ( Congress Government ) ಅಧಿಕಾರದಲ್ಲಿದ್ದಂತ ಸಂದರ್ಭದಲ್ಲಿ ಕರ್ನಾಟಕ ಎಸಿಬಿ ರಚನೆ ಮಾಡಿ ಆದೇಶಿಸಿತ್ತು. ಈ ಮೂಲಕ ಲೋಕಾಯುಕ್ತ ಪೊಲೀಸ್ ಗಿಂತಲೂ ಹೆಚ್ಚಿನ ಅಧಿಕಾರವನ್ನು ಎಸಿಬಿಗೆ ನೀಡಿತ್ತು. ಆಗ ಸಿಎಂ ಆಗಿದ್ದಂತ ಸಿದ್ಧರಾಮಯ್ಯ ಅವರು ಎಸಿಬಿ ರಚನೆ ಮಾಡಿ ಆದೇಶಿಸಿದ್ದರು.

BREAKING NEWS: ಆ.15ರಂದು ಸರ್ಕಾರದಿಂದಲೇ 'ಚಾಮರಾಜಪೇಟೆ ಈದ್ಗಾ ಮೈದಾನ'ದಲ್ಲಿ 'ಧ್ವಜಾರೋಹಣ' - ಸಚಿವ ಆರ್ ಅಶೋಕ್ ಘೋಷಣೆ

ಅಂದಿನ ಸರ್ಕಾರ ಎಸಿಬಿ ರಚಿಸಿದ್ದನ್ನು ಪ್ರಶ್ನಿಸಿ, ಹೈಕೋರ್ಟ್ ಗೆ ಬೆಂಗಳೂರು ವಕೀಲರ ಸಂಘ ಅರ್ಜಿಯನ್ನು ಸಲ್ಲಿಸಿತ್ತು. ಈ ಬಗ್ಗೆ ಇಂದು ಅರ್ಜಿಯ ವಿಚಾರಣೆಯ ಬಳಿಕ ತನ್ನ ತೀರ್ಪನ್ನು ಹೈಕೋರ್ಟ್ ನ ನ್ಯಾಯಮೂರ್ತಿ ಬಿ.ವೀರಪ್ಪ ಹಾಗೂ ನ್ಯಾಯಮೂರ್ತಿ ಹೇಮಲೇಖಾ ಅವರನ್ನು ಒಳಗೊಂಡ ನ್ಯಾಯಪೀಠವು ಪ್ರಕಟಿಸಿದೆ.

ಕರ್ನಾಟಕ ಹೈಕೋರ್ಟ್ ಭ್ರಷ್ಟಾಚಾರ ನಿಗ್ರಹ ದಳ (Anti Corruption Bureau - ACB )ವನ್ನು ರದ್ದುಗೊಳಿಸಿದೆ ಮತ್ತು ಎಸಿಬಿ ಮುಂದೆ ಬಾಕಿ ಇರುವ ಎಲ್ಲಾ ಪ್ರಕರಣಗಳನ್ನು ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ವರ್ಗಾಯಿಸಲು ನಿರ್ದೇಶಿಸಿದೆ. ಈ ಮೂಲಕ ಲೋಕಾಯುಕ್ತ ಪೊಲೀಸರಿಗೆ ಮತ್ತೆ ಅಧಿಕಾರ ಮರುಸ್ಥಾಪಿಸಿ ಮಹತ್ವದ ಆದೇಶವನ್ನು ನೀಡಿದೆ.

BIGG NEWS: ಸಿಎಂ ಬದಲಾವಣೆ ವಿಚಾರ; ಕುಡಿದ ಅಮಲಿನಲ್ಲಿ CM ಬದಲಾಗುತ್ತಾರೆ ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡಿ ಕೈಸುಟ್ಟುಕೊಂಡಿದೆ- ರೇಣುಕಾಚಾರ್ಯ ವಾಗ್ದಾಳಿ

ಇದಷ್ಟೇ ಅಲ್ಲದೇ, ಮೂರು ವರ್ಷದ ಅವಧಿಗೆ ಕರ್ನಾಟಕ ಲೋಕಾಯುಕ್ತಕ್ಕೆ ಅಧಿಕಾರಿಗಳನ್ನು ನೇಮಕ ಮಾಡಬೇಕು. ಈ ನೇಮಕಾತಿಯ ವೇಳೆಯಲ್ಲಿ ಅರ್ಹತೆಯನ್ನು ಮಾತ್ರವೇ ಪರಿಗಣಿಸಬೇಕು. ಜಾತಿ ಆಧಿರಿಸ ಲೋಕಾಯುಕ್ತ, ಉಪ ಲೋಕಾಯುಕ್ತರನ್ನು ನೇಮಕ ಮಾಡುವಂತಿಲ್ಲ. ಭ್ರಷ್ಟಾಚಾರ ಆರೋಪ ಹೊತ್ತವರು ಪಾರಾಗದಂತೆ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಬೇಕು ಎಂಬುದಾಗಿ ಸೂಚಿಸಿದೆ.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags