AIN Live News

265k Followers

ಶಾಲೆಗೆ ಎಂಟ್ರಿಯಾಗುತ್ತಿದ್ದಂತೆಯೇ ವಿಚಿತ್ರವಾಗಿ ವರ್ತಿಸುತ್ತಿರುವ ವಿದ್ಯಾರ್ಥಿನಿಯರು..! ವಿಡಿಯೋ ವೈರಲ್

31 Jul 2022.07:20 AM

ಡೆಹ್ರಾಡೂನ್ : ಉತ್ತರಾಖಂಡದ ಬಾಗೇಶ್ವರದ ಸರ್ಕಾರಿ ಶಾಲೆಯ ಮಕ್ಕಳಲ್ಲಿ ಸಮೂಹ ಸನ್ನಿ ಕಾಣಿಸಿಕೊಂಡಿದ್ದು, ಶಿಕ್ಷಕರು ಹಾಗೂ ಸಿಬ್ಬಂದಿ ಭಯಭೀತರಾಗಿದ್ದಾರೆ. ಶಾಲೆಯ ಆವರಣದಲ್ಲಿ ಹಲವಾರು ವಿದ್ಯಾರ್ಥಿನಿಯರು ಜೋರಾಗಿ ಕಿರುಚಾಡುತ್ತಾ, ಅಳುತ್ತಾ, ತಲೆ ಬಡಿದುಕೊಳ್ಳುತ್ತಾ ಭಯಾನಕವಾಗಿ ವರ್ತಿಸುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಅಧಿಕಾರಿಗಳು ಹಾಗೂ ವೈದ್ಯರು ಶಾಲೆಗೆ ಭೇಟಿ ನೀಡಿದ್ದಾರೆ. ಕಳೆದ ಒಂದೆರಡು ದಿನಗಳ ಹಿಂದೆ ಕೆಲವು ವಿದ್ಯಾರ್ಥಿನಿಯರು ಈ ರೀತಿ ವರ್ತಿಸುತ್ತಿದ್ದರು. ಆದರೆ ಇದೀಗ ಶಾಲೆಯ ಬಹುಪಾಲು ವಿದ್ಯಾರ್ಥಿಗಳು ಇದೇ ರೀತಿ ವರ್ತಿಸಲಾರಂಭಿಸಿದ್ದಾರೆ ಎನ್ನಲಾಗಿದೆ.

ಈ ಕುರಿತಂತೆ ಪ್ರತಿಕ್ರಿಯಿಸಿದ ಶಾಲೆಯ ಮುಖ್ಯ ಶಿಕ್ಷಕಿ ವಿಮಲಾ ದೇವಿ ಅವರು, ಮಂಗಳವಾರ ಕೆಲವು ಬಾಲಕಿಯರು ಮೊದಲಿಗೆ ಈ ರೀತಿ ವಿಚಿತ್ರವಾಗಿ ವರ್ತಿಸಲು ಆರಂಭಿಸಿದರು. ಅವರು ಜೋರಾಗಿ ಅಳುತ್ತಿದ್ದರು, ಕೂಗುತ್ತಿದ್ದರು, ನಡುಗುತ್ತಿದ್ದರು ಮತ್ತು ಯಾವುದೇ ಕಾರಣವಿಲ್ಲದೆ ತಲೆ ಬಡಿದುಕೊಳ್ಳಲು ಪ್ರಯತ್ನಿಸುತ್ತಿದ್ದರು. ಆಗ ನಾವು ಪೋಷಕರಿಗೆ ತಿಳಿಸಿದೆವು. ಅವರು ಒಬ್ಬ ಪೂಜಾರಿಯನ್ನು ಕರೆದುಕೊಂಡು ಬಂದು ಏನೋ ಮಂತ್ರ ಹಾಕಿಸಿದರು. ನಂತರ ಪರಿಸ್ಥಿತಿ ಕೊಂಚ ನಿಯಂತ್ರಣಕ್ಕೆ ಬಂದಿತು. ಈಗ ಮತ್ತೆ ಇನ್ನಷ್ಟು ಮಕ್ಕಳು ಅದೇ ರೀತಿ ವರ್ತಿಸುತ್ತಿದ್ದಾರೆ ಎಂದು ತಿಳಿದ್ದಾರೆ.

ಇಲ್ಲಿನ ಪಕ್ಕದ ಜಿಲ್ಲೆಗಳಾದ ಅಲ್ಮೋರಾ, ಪಿಥೋರಗಢ್ ಮತ್ತು ಚಮೋಲಿಯ ಸರ್ಕಾರಿ ಶಾಲೆಗಳಲ್ಲಿ ಈ ಹಿಂದೆ ಇದೇ ರೀತಿಯ ಸಮೂಹ ಸನ್ನಿಯ ಘಟನೆಗಳು ವರದಿಯಾಗಿತ್ತು. ನಂತರ ವಿದ್ಯಾರ್ಥಿನಿಯರನ್ನು ವೈದ್ಯಕೀಯ ಪರೀಕ್ಷೆ ಮತ್ತು ಕೌನ್ಸೆಲಿಂಗ್‍ಗೆ ಒಳಪಡಿಸಲಾಯಿತು. ಈ ವೇಳೆ ವಿದ್ಯಾರ್ಥಿನಿಯರು ಕೌನ್ಸೆಲಿಂಗ್‍ನಲ್ಲಿ ಇತ್ತೀಚೆಗೆ ಜಿಲ್ಲೆಯಲ್ಲಿ ಸಂಭವಿಸಿದ ಹಠಾತ್ ಪ್ರವಾಹದಲ್ಲಿ ತಮ್ಮ ಸಹಪಾಠಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಳು ಎಂದು ವಿದ್ಯಾರ್ಥಿನಿಯರು ಹೇಳಿರುವುದಾಗಿ ತಿಳಿದುಬಂದಿತ್ತು. ಆದರೆ ಬಾಲಕಿಯರಿಗೆ ಅಪೌಷ್ಟಿಕತೆ ಮತ್ತು ಅತ್ಯಂತ ಉದ್ವಿಗ್ನತೆಯಿಂದ ಈ ರೀತಿಯಾಗಿದೆ ಎಂದು ವೈದ್ಯಕೀಯ ಪರೀಕ್ಷೆಯಲ್ಲಿ ತಿಳಿಸಲಾಗಿತ್ತು.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: AIN Live News

#Hashtags